ಶನಿವಾರ, ಮೇ 15, 2021
29 °C

ಕರೆಂಟ್ ಇದ್ದರೆ ಮಾತ್ರ ಕೊಡ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಸುಡುವ ಬಿಸಿಲು ಲೆಕ್ಕಿಸದೆ ಕೊಡ ನೀರಿಗಾಗಿ ಅಲೆದಾಡುವ ದಾರುಣ ಸ್ಥಿತಿ ಅಶೋಕ ನಗರದಲ್ಲಿ ಇಂದಿಗೂ ಜೀವಂತವಿದೆ. ಕರೆಂಟ್ ಇದ್ದರೆ ಮಾತ್ರ ಕೊಡ ನೀರು ಸಿಗಲು ಸಾಧ್ಯವಿರುವ ಇಲ್ಲಿ, ವಿದ್ಯುತ್ ಏನಾದರೂ ಕೈಕೊಟ್ಟರೆ ತೆರೆದ ಬಾವಿ ಒಂದೂ ಇಲ್ಲಿಲ್ಲ.ಹೌದು, ಚಿತ್ತಾಪುರ ತಾಲ್ಲೂಕಿನ ಗೋಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಶೋಕ ನಗರ (ಬೆಣ್ಣೂರ ಕೆ.) ಜನತೆಯ ದಿನನಿತ್ಯದ ಬದುಕಿನ ಗೋಳಿದು. ಹಲವು ವರ್ಷಗಳ ಹಿಂದೆ ಹಳೆ ಊರು ಬಿಟ್ಟು ಹೊಸ ಊರು ಸೃಷ್ಟಿಸಿಕೊಂಡಿರುವ ಈ ಗ್ರಾಮಸ್ಥರಿಗೆ ಕರೆಂಟ್ ಇದ್ದಾಗಲೇ ಮಾತ್ರ ತಾಜಿ ನೀರು ಸಿಗುವ ಸೌಭಾಗ್ಯ!900 ಜನಸಂಖ್ಯೆಯ ಈ ಊರಲ್ಲಿ 12ರಿಂದ 15 ಸರ್ಕಾರಿ ನಳಗಳಿವೆ. ಮೂರ‌್ನಾಲ್ಕು ಕೊಳವೆ ಬಾವಿಗಳಿದ್ದು ತೆರೆದ ಬಾವಿಯಂತೂ ಬಹುದೂರದ ಕಥೆಯಾಗಿದೆ. ಈ ಮಧ್ಯೆ ಸಿಹಿ ನೀರಿರುವ ಕೊಳವೆ ಬಾವಿಯೊಂದರಿಂದ ನಳಗಳಿಗೆ ಸಂಪರ್ಕ ಕೊಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ.ಬಹುಪಾಲು ಈ ನೀರನ್ನೇ ಕುಡಿಯಲು ಉಪಯೋಗಿಸುವ ಊರ ಜನರು ಕೊಡಗಳು ಹಿಡಿದುಕೊಂಡು ಬಿಸಿಲು, ನೆರಳು ಎನ್ನದೆ ಮತ್ತು ಹಗಲು ರಾತ್ರಿ ಎಣಿಸದೆ ನಳಗಳಿದ್ದ ಕಡೆಗೆ ಹೆಜ್ಜೆಹಾಕುವುದು ಸಾಮಾನ್ಯವಾಗಿದೆ.

ಈ ನೀರು ಪಡೆಯಲು `ಕರೆಂಟ್ ಕಡ್ಡಾಯ~ ಎಂದು ಹೇಳುವ ಗ್ರಾಮಸ್ಥರು, ಕರೆಂಟ್ ಏನಾದರೂ ಕಣ್ಣಾಮುಚ್ಚಾಲೆ ಆಟವಾಡಿದರೆ ಕೊಡ ನೀರಿನ ಕಷ್ಟ ಏನೆಂಬುದು ಅನುಭವಿಸುವವರಿಗೆ ಮಾತ್ರ ಗೊತ್ತೆಂದು ತುಂಬ ನೋವಿನಿಂದ ನುಡಿಯುತ್ತಾರೆ.ಉಳಿದ ಬೋರವೆಲ್‌ಗಳ ನೀರು ಸಪ್ಪೆಯಿವೆ ಎನ್ನುವ ಅವರು, ತೆರೆದ ಬಾವಿಯಾದರೂ ಇದ್ದಿದ್ರೆ ಏನಾರ ಹೆಚ್ಚುಕಮ್ಮಿ ಆಗುತ್ತಿತ್ತು. ಆ ಭಾಗ್ಯವೂ ನಮಗಿಲ್ಲದೆ ಏನೆಲ್ಲ ಮಿಶ್ರಣವಿರುವ ಬೆಣ್ಣೆತೊರಾ ಕಾಲುವೆಯ ನೀರೇ `ಗತಿ~ ಎಂಬ ಅಳಲು ಹೊರಹಾಕುತ್ತಾರೆ.ಒಟ್ಟಾರೆ ಕರೆಂಟ್ ಇದ್ದರೆ ಮಾತ್ರ ಕುಡಿಯಲು ಯೋಗ್ಯವಾದ ನೀರು ಇಲ್ಲಿ ಸಿಗುವುದಾಗಿದೆ. ಇಲ್ಲವಾದರೆ ಜಾನುವಾರಗಳೊಂದಿಗೆ ಜನರೂ ಕಾಲುವೆಯತ್ತ ತೆರಳಿ ಹರಿಯುವ `ಬೆಣ್ಣೆತೊರಾ~ದ ನೀರೇ ನೋಡುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.