ಶನಿವಾರ, ಮೇ 8, 2021
26 °C

ಎಸಿಸಿ ಕಂಪೆನಿಯಿಂದ ಅಕ್ರಮ ಭೂ ಸ್ವಾಧೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಇಲ್ಲಿಗೆ ಸಮೀಪದ ಇಂಗಳಗಿ ಮತ್ತು ಕುಂದನೂರು ಗ್ರಾಮದ 1,500 ಎಕರೆ ಜಮೀನನ್ನು ಎಸಿಸಿ ಸಿಮೆಂಟ್ ಕಂಪೆನಿ ಕಾನೂನುಬಾಹಿರ ಭೂ ಸ್ವಾದೀನ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಸಂಬಂಧಿಸಿದ ಸಚಿವರು ಮತ್ತು ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಸಲುವಾಗಿ ಭಾನುವಾರ ಚಿತ್ತಾಪುರ ಶಾಸಕ ವಾಲ್ಮೀಕ ನಾಯಕ ಮನೆಯಲ್ಲಿ ಸಭೆ ಸೇರಿ ಬೆಂಗಳೂರಿಗೆ ಹೋಗಲು ರೈತರು ನಿರ್ಧರಿಸಿದರು.ಕಳೆದ ಹತ್ತು ವರ್ಷದಿಂದ ಎಸಿಸಿ ಕಂಪೆನಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ. ಆದರೂ ಇಲ್ಲಿಯವರೆಗೆ ಸಂಬಂಧಿಸಿದವರು ರೈತರೊಂದಿಗೆ ಸಭೆ ನಡೆಸಿಲ್ಲ. ಕೇವಲ ಒಂದು ಬಾರಿ ಮಾತ್ರ ಚಿತ್ತಾಪುರ ತಹಶೀಲ್ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಅಧಿಕಾರಿಗಳು ನಿಗದಿ ಮಾಡಿದ ಪರಿಹಾರ ಧನಕ್ಕೆ ಒಪ್ಪದೆ ಸಭೆ ಬಹಿಷ್ಕಾರ ಮಾಡಿದ್ದೇವೆ. ಆದರೂ ಕಂಪೆನಿ ವಾಮಮಾರ್ಗದಿಂದ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಿದೆ ಎಂದು ಇಂಗಳಗಿ ಭೂ ಹಿತರಕ್ಷಣಾ ಹೋರಾಟ ಸಮಿತಿ ಗೌರವ ಅಧ್ಯಕ್ಷ ಬಸವರಾಜ ಅಳ್ಳೋಳಿ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಎಸಿಸಿ ಕಂಪೆನಿಗೆ ಎಲ್ಲ ರೈತರು ಜಮೀನು ಮಾರಾಟ ಮಾಡಿಲ್ಲ. ಆದರೂ ಪ್ರತಿ ಪಹಣಿ ಪತ್ರಿಕೆಯಲ್ಲಿ ಕಂಪೆನಿ ಹೆಸರು ಸೇರಿಸಲಾಗಿದೆ. ಇದರಿಂದ ಯಾವುದೇ ಬ್ಯಾಂಕ್‌ಗಳಲ್ಲಿ ರೈತರಿಗೆ ಸಾಲ ದೊರಕುತ್ತಿಲ್ಲ. ಆದ್ದರಿಂದ ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸದಿದ್ದರೆ ರೈತರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಶಾಸಕರ ಎದುರೇ ರೈತ ಮರಲಿಂಗ ಸಂಕ ಕಣ್ಣಿರಿಟ್ಟ ಘಟನೆ ನಡೆಯಿತು.“ಯಾವುದೇ ಕಾರಣಕ್ಕೆ ರೈತರ ಬೇಡಿಕೆ ಈಡೇರುವವರೆಗೆ ಕಂಪೆನಿಗೆ ರೈತರ ಜಮೀನು ಭೂ ಸ್ವಾಧೀನ ಮಾಡಿಕೊಳ್ಳುವದಕ್ಕೆ ಬಿಡುವದಿಲ್ಲ. ಶೀಘ್ರದಲ್ಲೇ ಬೆಂಗಳೂರಿಗೆ ರೈತರ ನಿಯೋಗ ಕರೆದುಕೊಂಡು ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವರಿಗೆ ಭೇಟಿ ಮಾಡಿಸಿ ಸೂಕ್ತ ಬೆಲೆ ಕೊಡಿಸುವ ಪ್ರಯತ್ನ ಮಾಡುತ್ತೇನೆ” ಎಂದು ಶಾಸಕರು ತಿಳಿಸಿದರು.ಹೋರಾಟ ಸಮಿತಿ ಉಪಾಧ್ಯಕ್ಷ ಮರಬಸಯ್ಯಾ ಸ್ವಾಮಿ, ಚಂದ್ರಕಾಂತ ಹೂಗಾರ, ದೂಳಪ್ಪ ಸಾಹು, ಭೀಮರಾವಗೌಡ ಬಿರೆದಾರ, ಮರಲಿಂಗ ಸಂಕ, ಮಲ್ಲಪ್ಪ ನಾಟೀಕಾರ, ಕಾಶೀನಾಥ ಚನ್ನಗುಂಡ, ಗೌಸ ದುದ್ದನಿ, ದಾವುದ್ ಇಜೇರಿ, ಬಸವರಾಜ ಸ್ಥಾವರ ಮಠ ಇದ್ದರು.ನಾಳೆ ಜಾತ್ರೆ

ಗುಲ್ಬರ್ಗ: ತಾಲ್ಲೂಕಿನ ಆಲಗೂಡ ಗ್ರಾಮದಲ್ಲಿ ಸ್ವಪ್ಪಿ ಬಸವೇಶ್ವರರ 17ನೇ ಜಾತ್ರಾ ಮಹೋತ್ಸವ ನಿಮಿತ್ತ ಏ.24ರಂದು ಸಂಜೆ 6ಕ್ಕೆ ಸ್ವಪ್ಪಿ ಬಸವೇಶ್ವರರ ಕರ್ತೃ ಗದ್ದುಗೆ ರುದ್ರಾಭಿಷೇಕ ನಡೆಯಲಿದೆ ಎಂದು ಗ್ರಾಮಸ್ಥ ರಾಜಕುಮಾರ ಎಸ್. ಮೂಲಗೆ ಆಲಗುಡ ತಿಳಿಸಿದ್ದಾರೆ.ಸಂಜೆ ರಥೋತ್ಸವ, ನಂತರ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.