ಗುರುವಾರ , ಮೇ 19, 2022
21 °C

ಮಿಸ್ಡ್ ಕಾಲ್ ಕಂಕಣ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ:  ಅದೊಂದು ಸಂಜೆ ಆ ಯುವತಿಯ ಮೊಬೈಲ್‌ಗೆ ಒಂದು ಮಿಸ್ಡ್‌ಕಾಲ್ ಬಂತು. ಕುತೂಹಲದಿಂದ ಆಕೆ ಆ ಕರೆ ಯಾರದು ಎಂದು ಪರಿಶೀಲಿಸಿದಾಗ, ಅದು ದೂರದ ಉತ್ತರ ಕನ್ನಡ ಜಿಲ್ಲೆ ಗ್ರಾಮವೊಂದರ ಯುವಕನದು ಎಂದು ಗೊತ್ತಾಯಿತು. ಒಬ್ಬರಿಗೊಬ್ಬರ ಪರಿಚಯ. ಒಮ್ಮೆಯೂ ಮುಖ ನೊಡದೇ ಇದ್ದರೂ ಪ್ರೀತಿ ಅಂಕುರಿಸಿತು; ನಂತರ ಮದುವೆಯಾದರು.ಇದು ಯಾವುದೋ ಹೊಸ ಸಿನೆಮಾ ಕಥೆಯಲ್ಲ; ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದ ಸ್ವಾರಸ್ಯಕರ ಘಟನೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ ಹುಣಸಗಿಯ ರೇಣುಕಾ ಮತ್ತಯ್ಯ ಎಂಬ ಯುವತಿಗೆ ಒಂದು ಮಿಸ್ಡ್‌ಕಾಲ್ ಬಂತು. ಆ ನಂಬರ್‌ಗೆ ಆಕೆ ಮರಳಿ ಕರೆ ಮಾಡಿದಾಗ, ಅದು ಹಳಿಯಾಳ ತಾಲ್ಲೂಕಿನ ಹುಣಸವಾಡಿಯ ಪಾಂಡುರಂಗ ಮಡಿವಾಳರ ಎಂಬ ಯುವಕನದಾಗಿತ್ತು. ನಂತರ ಎರಡೂ ಮೊಬೈಲ್‌ಗಳ ಮಧ್ಯೆ ಪ್ರತಿದಿನ ಕಾಲ್ `ರಿಸೀವ್ಡ್~ ಆದವು. ಮೊಬೈಲ್‌ನಲ್ಲೇ ಆದ ಪರಿಚಯ, ಪ್ರೀತಿಗೆ ತಿರುಗಿತು. 2011ರ ಆಗಸ್ಟ್‌ನಲ್ಲಿ ರೇಣುಕಾ ತನ್ನೂರು ಹುಣಸಗಿ ಬಿಟ್ಟು ಹುಣಸವಾಡಿಗೆ ಹೋಗಿ, ಪಾಂಡುರಂಗನನ್ನುಆದರೆ, ಇತ್ತ ತಂದೆ-ತಾಯಿ ಇಲ್ಲದ ರೇಣುಕಾಳನ್ನು ಪಾಲನೆ ಮಾಡುತ್ತಿದ್ದ ಅಜ್ಜಿ, ಮೊಮ್ಮಗಳು ಕಾಣೆಯಾದ ಕೂಡಲೇ ಹುಣಸಗಿ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಹುಣಸಗಿ ಪೊಲೀಸರು ಮೇ 31ರಂದು ರೇಣುಕಾಳನ್ನು ಕರೆ ತಂದು ಆಕೆಯ ಅಜ್ಜಿಗೆ ಒಪ್ಪಿಸಿದರು. ನಂತರ ಹುಣಸಗಿ ಮತ್ತು ಹುಣಸವಾಡಿಯ ಕೆಲವು ಮುಖಂಡರ ಸಮ್ಮುಖದಲ್ಲಿ ಗುರುವಾರ ಹುಣಸಗಿಯ ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ವಿಧ್ಯುಕ್ತವಾಗಿ ಮದುವೆ ನಡೆಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.