ಗುರುವಾರ , ಮೇ 26, 2022
23 °C

ಗೊಂದಲ ಮೂಡಿಸಿದ ಪ್ರಕರಣ...!: ಪೊಲೀಸರಿಂದ ಬಾಲಕಿ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ವಡಿಗೇರಾ ಪೊಲೀಸ್ ಠಾಣೆಯ ಪೇದೆಗಳಾದ ಸುರೇಶ ಹಾಗೂ ವೀರೇಶ

ಕೂಡಿ 17 ವರ್ಷದ ಬಾಲಕಿಯನ್ನು ಗುರುವಾರ ಅಪಹರಣ ಮಾಡಿಕೊಂಡು ತೆರಳಿದ್ದಾರೆ ಎಂದು ಬಾಲಕಿಯ ಅಣ್ಣ ಸಿದ್ದಲಿಂಗಪ್ಪ ಗೋನಾಲ ವಡಿಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ಗಂಡನ ಕಿರುಕುಳ ತಾಳಲಾರದೆ ಸ್ವಇಚ್ಛೆಯಿಂದ  ತುಮಕೂರದಲ್ಲಿರುವ ನನ್ನ ದೂರದ ಸಂಬಂಧಿ ಮನೆಗೆ ತೆರಳಿದ್ದೆ. ಪೊಲೀಸ್ ಪೇದೆ ವೀರೇಶನಿಂದ 500ರೂಪಾಯಿ ಪಡೆದುಕೊಂಡು  ಹೋಗಿದ್ದೇನೆ. ಯಾರು ಅಪರಿಸಿಲ್ಲವೆಂದು ಬಾಲಕಿ ಪೊಲೀಸರ ಮುಂದೆ ಸ್ಪಷ್ಟನೆ ನೀಡಿದ್ದು ಪ್ರಕರಣ ಕುತೂಹಲ ಮೂಡಿಸಿದೆ.

ಪೊಲೀಸ ಪೇದೆಗಳಿಂದ ಬಾಲಕಿಯ ಅಪಹರಣವೆಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಡಿ.ರೂಪಾ ಮೌದ್ಗೀಲ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆಯನ್ನು ಚುರುಗೊಳಿಸಿದ್ದರು.

ನಂತರ ಅದರ ವಿವರಣೆ ನೀಡಲು ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ಕಾರ್ಯಾಲಯದಲ್ಲಿ ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದು ಹೀಗೆ.

`ಬಾಲಕಿಗೆ ಇಷ್ಟವಿಲ್ಲದಿದ್ದರು ಹಣಮಂತ ಎನ್ನವರಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಗಂಡನ ಕಿರುಕುಳ ತಾಳಲಾರದೆ ತವರು ಮನೆಗೆ ಬಂದಿದ್ದೆ. ತಂದೆ-ತಾಯಿಯವರು ಮತ್ತೆ ಗಂಡನ ಮನೆಗೆ ತೆರಳುವಂತೆ ಬಲವಂತ ಪಡಿಸಿದರು. ಇದರಿಂದ ರೋಷಿ ಹೋಗಿ ಬುರ್ಖಾವನ್ನು ಖರೀದಿಸಿ ಶಹಾಪುರ ಪಟ್ಟಣದಿಂದ ತುಮಕೂರಿಗೆ ನನ್ನ ದೂರದ ಸಂಬಂಧಿಯ ಮನೆಗೆ ತೆರಳಿರುವೆ.~  ಪೊಲೀಸರು ಪತ್ತೆ ಮಾಡಿ ಶನಿವಾರ ತುಮಕೂರದಿಂದ ಬಾಲಕಿಯನ್ನು ಕರೆದುಕೊಂಡು ಬಂದಿದ್ದಾರೆ. ಪೊಲೀಸ್ ಪೇದೆ ವಿರೇಶ ನನ್ನ ಅಣ್ಣನ ಸಮಾನ ಅವರ ಬಳಿ 500ರೂಪಾಯಿ ಪಡೆದುಕೊಂಡಿದ್ದೇನೆ. ಯಾರು ಅಪಹರಿಸಿಲ್ಲವೆಂದು ಬಾಲಕಿ ತಿಳಿಸಿದ್ದಾರೆ. ಕೇವಲ 500 ರೂಪಾಯಿ ನೀಡಿದ ಮಾತ್ರಕ್ಕೆ ಅಪಹರಣವಾಗಲು ಸಾಧ್ಯವಿಲ್ಲವೆಂದು ಎಸ್ಪಿಯವರು ಸಮರ್ಥಿಸಿಕೊಂಡರು.

ತಂದೆ-ತಾಯಿ ಇದನ್ನು ಪ್ರತಿಷ್ಠೆ ಮಾಡಿಕೊಂಡಿದ್ದು ಮಗಳನ್ನು ಸ್ವೀಕರಿಸಲು ಸಿದ್ಧರಿಲ್ಲ. ಅಪ್ರಾಪ್ತ ಬಾಲಕಿಯಾಗಿದ್ದರಿಂದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮುಂದೆ ಕೋರ್ಟ್ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ಗೊಂದಲ: ಬಾಲಕಿಯ ಮಾತ್ರ ತುಂಬಾ ಚಾಲಕಿಯಾಗಿದ್ದು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾಳೆ. ಮೊಬೈಲ್ ಕಾಲಶೀಟ್ ತೆಗೆದುಕೊಂಡು ನೋಡಿದಾಗ ಕಳೆದ ಒಂದೆರೆಡು ದಿನಗಳಲ್ಲಿ 150ಕ್ಕೂ ಹೆಚ್ಚು ಎಸ್.ಎಂ.ಎಸ್ ಕಳಹಿಸಿದ್ದು ಗೊಂದಲ ಉಂಟುಮಾಡಿದೆ. ಗ್ರಾಮದಲ್ಲಿ ಕೆಲ ರಾಜಕೀಯ ಪ್ರೇರಿತವಾದ ಅಂಶಗಳು ಕೂಡಿಕೊಂಡಿವೆ. ಇನ್ನೂ ಹೆಚ್ಚಿನ ತನಿಖೆ ಅಗತ್ಯವಾಗಿದೆ ಎಂದು ಹೇಳಿದರು.

ಮೌಖಿಕ ಆದೇಶ: ಪಿಎಸ್‌ಐ ವಾಹನದ ಚಾಲಕನಾಗಿರುವ ಪೇದೆ ವಿರೇಶನನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಡಿಗೇರಾ ಠಾಣೆಯಿಂದ 20 ದಿನಗಳ ಕಾಲ ಬಿಡುಗಡೆಗೊಳಿಸಿ ಯಾದಗಿರಿ ಪಟ್ಟಣ ಪೊಲೀಸ್ ಠಾಣೆಗೆ ಮೌಖಿಕ ಆದೇಶ ಮೇಲೆ ಕಳುಹಿಸಲಾಗಿದೆ ಎಂದು ಎಸ್ಪಿಯವರು ತಿಳಿಸಿದರು. ಇದೇ ಸಂದರ್ಭದಲ್ಲಿ ಸಿಪಿಐ ಜೆ.ಎಸ್. ನ್ಯಾಮಗೌಡ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.