ಗುರುವಾರ , ಸೆಪ್ಟೆಂಬರ್ 19, 2019
21 °C

ಅಪಘಾತ: ಬಾಲಕ ಸಾವು, ಐವರಿಗೆ ಗಾಯ

Published:
Updated:

ಸಿಂದಗಿ (ವಿಜಯಪುರ): ತಾಲ್ಲೂಕಿನ ಮೋರಟಗಿ ಬೈಪಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಶುಕ್ರವಾರ ನಡೆದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಹಾಗೂ ಲಾರಿ ನಡುವಿನ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹುಣಶ್ಯಾಳ ಗ್ರಾಮದ ಮಂಜುನಾಥ ರುದ್ರಪ್ಪ ಹಿಪ್ಪರಗಿ (16) ಮೃತ ಬಾಲಕ.

ಜೇರಟಗಿಯ -ಯಮನೂರಿ ರಾಜಣ್ಣ ಇಂಗಳೆ, ಸಿದ್ದಪ್ಪ ವಸ್ತಾರಿ, ಗಬಸಾವಳಗಿಯ ಚಂದ್ರಶೇಖರ ಹಡಪದ, ಬಸ್‌ನ ನಿರ್ವಾಹಕ ಅರ್ಜುನ ನಾಯ್ಕ್‌, ಕಲಬುರ್ಗಿಯ ಶಬ್ಬೀರ ಪಟೇಲ ಗಾಯಗೊಂಡಿದ್ದು, ಈ ಎಲ್ಲರೂ ಅಪಘಾತಕ್ಕೀಡಾದ ಬಸ್‌ನಲ್ಲಿ ಪಯಣಿಸುತ್ತಿದ್ದರು.

ಗಾಯಾಳುಗಳಿಗೆ ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.

ಕಲಬುರ್ಗಿಯಿಂದ ವಿಜಯಪುರಕ್ಕೆ ಬರುತ್ತಿದ್ದ ಬಸ್‌ಗೆ, ಸಿಂದಗಿಯಿಂದ ಕಲಬುರ್ಗಿಯತ್ತ ತೆರಳುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ನಡೆದಿದೆ ಎಂದು ಸಿಂದಗಿ ಪೊಲೀಸರು ತಿಳಿಸಿದ್ದಾರೆ.

Post Comments (+)