ನವದೆಹಲಿ: ಅಹಮದಾಬಾದಿನಲ್ಲಿರುವ ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿಯನ್ನು (ಎನ್ಒಎ) ‘ವಿಧ್ಯುಕ್ತವಾಗಿ ಕ್ರಿಯಾಶೀಲಗೊಳಿಸಲಾಗಿದೆ ಎಂದು ಭಾರತ ಒಲಿಂಪಿಕ್ ಸಮಿತಿ (ಐಒಎ) ಸೋಮವಾರ ಘೋಷಿಸಿದೆ. ಭಾರತದಲ್ಲಿ ಒಲಿಂಪಿಕ್ ಅಂದೋಲನವನ್ನು ಬಲಪಡಿಸುವ ನಿಟ್ಟಿನಲ್ಲಿ ಇದನ್ನು ದೊಡ್ಡ ಹೆಜ್ಜೆ ಎಂದು ಐಒಎ ಬಣ್ಣಿಸಿದೆ.

ಈ ಅಕಾಡೆಮಿಗೆ ದಿಗ್ಗಜ ಅಥ್ಲೀಟ್ ಹಾಗೂ ಐಒಎ ಹಾಲಿ ಅಧ್ಯಕ್ಷೆ ಪಿ.ಟಿ.ಉಷಾ ಅವರೇ ಮುಖ್ಯಸ್ಥರಾಗಿರುತ್ತಾರೆ.

ರಾಷ್ಟ್ರೀಯ ಒಲಿಂಪಿಕ್ ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಕ್ರಮವನ್ನೂ (ಎನ್ಒಇಡಿಪಿ) ಆರಂಭಿಸಲಾಗುತ್ತಿದೆ ಎಂದೂ ಐಒಎ ತಿಳಿಸಿದೆ.

‘ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿಗೆ ಪಿ.ಟಿ.ಉಷಾ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಐಒಎ ಉಪಾಧ್ಯಕ್ಷ ಹಾಗೂ ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್ ಅವರನ್ನು ನಿರ್ದೇಶಕನ್ನರಾಗಿ ಮಾಡಲು ಐಒಎ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು’ ಎಂದು ಪ್ರಕಟಣೆ ತಿಳಿಸಿದೆ.

ಗಾಂಧಿನಗರದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಒಲಿಂಪಿಕ್ ಸಂಶೋಧನಾ ಮತ್ತು ಶಿಕ್ಷಣದ ಭಾರತ ಕೇಂದ್ರ ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿಯು 2018ರಿಂದ ಅಸ್ತಿತ್ವದಲ್ಲಿದೆ. ಆದರೆ ಕೊರೊನಾ ಸಾಂಕ್ರಾಮಿಕ ಸೇರಿ ಕೆಲವು ಕಾರಣಗಳಿಂದ ಅದರ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಕ್ರಿಯಾಶೀಲಗೊಳಿಸಲಾಗಿದೆ ಎಂಬ ಪದ ಬಳಸಿದ್ದೇವೆ ಎಂದು ಐಒಎ ಸಿಇಒ ರಘುರಾಮ ಅಯ್ಯರ್ ಪಿಟಿಐಗೆ ತಿಳಿಸಿದರು.

ಜನವರಿ 8ರಂದು ನಡೆದ ಐಒಎ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.