ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ದಂಡಿಸುವುದೂ ಕಲೆ...

Last Updated 24 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಶಾರೀರಿಕ ಶ್ರಮಕ್ಕೆ ಒಳಪಡದ ದೇಹ ರೋಗಗಳ ಕೂಪವಾಗುತ್ತಿದೆ. ದೇಹದಿಂದ ಬೆವರು ಹರಿಯುವಂತ ಶ್ರಮಪಡದ ಹಲವರಿಗೆ ಹೆಚ್ಚು ಕಾಡುವ ಪ್ರಮುಖ ಎರಡು ಸಮಸ್ಯೆಗಳೆಂದರೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ. ವ್ಯಾಯಾಮದ ಕೊರತೆಯಿಂದಾಗಿ ಬಗೆಬಗೆಯ ಕ್ಯಾನ್ಸರ್‌ಗಳೂ ದೇಹದ ಮೇಲೆ ದಂಡೆತ್ತಿ ಬರುತ್ತಿವೆ. ಹೀಗಾಗಿ ವ್ಯಾಯಾಮ ಮಾಡಿ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕೆಂಬುದು ಹಲವರು ಹಲವು ವಿಧದಲ್ಲಿ ಸೂಚಿಸುತ್ತಿದ್ದಾರೆ. ಆದರೆ ವ್ಯಾಯಾಮದ ಬಗೆಗಿನ ಹಲವು ಅನುಮಾನುಗಳು ಫಿಟ್‌ನೆಸ್ ಪ್ರಿಯರನ್ನು ಕಾಡುತ್ತಿವೆ. ಅವುಗಳಲ್ಲಿ ಕೆಲವು ವಿಷಯಗಳು ಇಲ್ಲಿವೆ.

ಅತಿ ವೇಗ ಒಳ್ಳೆಯದೇ?

ವ್ಯಾಯಾಮಗಳನ್ನು ಸವಧಾನದಿಂದ ಕ್ರಮ ತಪ್ಪದಂತೆ ಮಾಡುವುದು ಉತ್ತಮ ವಿಧಾನ. ವೇಗವಾಗಿ 20 ಸೆಕೆಂಡ್ ಕಸರತ್ತು ಮಾಡಿ 10 ಸೆಕೆಂಡ್ ವಿರಾಮ ನೀಡುವ ವಿಧಾನವೂ ಉತ್ತಮ ಫಲಿತಾಂಶ ನೀಡುತ್ತದೆ. ಹೀಗೆ ನಾಲ್ಕು ನಿಮಿಷ ಈ ವ್ಯಾಯಾಮವನ್ನು ಮಾಡಬೇಕು. ಈ ವಿಧಾನವನ್ನು ಜಪಾನ್‌ನ ಇಜುಮಿ ಟಬಟಾ ತಂಡ 90ರ ದಶಕದಲ್ಲಿ ಪರಿಚಯಿಸಿತು. ಇದನ್ನು ಟಬಾಟಾ ವರ್ಕ್‌ಔಟ್ ಎಂದೂ ಕರೆಯುತ್ತಾರೆ. ಈ ವ್ಯಾಯಾಮ ವಿಧಾನದಿಂದ ಹೃದಯ ಮತ್ತು ಮಾಂಸಖಂಡಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗಿ ಆಗುತ್ತದೆ. ಇದು ಹೃದಯ, ಶ್ವಾಸಕೋಶಗಳು ಮತ್ತು ರಕ್ತನಾಳಗಳ ಕಾರ್ಯವೈಖರಿಯನ್ನು ಚುರುಕುಗೊಳಿಸುತ್ತದೆ. ಆದರೆ ಇಂತಹ ವ್ಯಾಯಾಮಗಳು ಎಲ್ಲರ ದೇಹಕ್ಕೂ ಅನ್ವಯವಾಗುವುದಿಲ್ಲ. ಆದ್ದರಿಂದ ವೈದ್ಯರು ಅಥವಾ ತಜ್ಞರ ಸೂಚನೆ ಪಡೆದು ಮಾಡಬೇಕು.

ಟ್ರೆಡ್‌ಮಿಲ್‌ನ ಲಾಭಗಳೇನು?

ನೆಲದ ಮೇಲೆ ಓಡುವುದಕ್ಕೂ ಟ್ರೆಡ್‌ ಮಿಲ್‌ ಮೇಲೆ ಓಡುವುದಕ್ಕೂ ವ್ಯತ್ಯಾಸವೇನು? ಎರಡೂ ಒಂದೇ ರೀತಿಯ ಫಲಿತಾಂಶ ನೀಡುತ್ತವೆಯೇ ಎಂಬ ಅನುಮಾನಗಳು ಹಲವರನ್ನು ಕಾಡುತ್ತಿವೆ. ನೆಲದ ಮೇಲೆ ಓಡುವಾಗ ಉಸಿರಾಡುವುದು ಕಷ್ಟ ಎನಿಸುತ್ತಿದೆ. ಆದರೆ ಒಂದೆ ನಿಂತಿರುವ ವಸ್ತುವಿನ ಮೇಲೆ ಓಡುತ್ತಿದ್ದರೆ ಉಸಿರಾಡುವುದು ಕಷ್ಟ ಎನಿಸುವುದಿಲ್ಲ. ಆದರೆ ಟ್ರೆಡ್‌ ಮೇಲೆ ನಿಧಾನವಾಗಿ ಓಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ.

ನೆಲದ ಮೇಲೆ ಮಯದಾನ ಪ್ರದೇಶಗಳಲ್ಲಿ ಓಡುತ್ತಿದ್ದರೆ ಸುತ್ತಮುತ್ತಲಿನ ಪರಿಸರವನ್ನು ಆಸ್ವಾದಿಸುತ್ತಾ ಓಡಬಹುದು. ಎಷ್ಟು ವೇಗದಲ್ಲಿ ಓಡುತ್ತಿದ್ದೇವೆ ಎಂಬುದು ಗೊತ್ತಾಗುತ್ತಿರುತ್ತದೆ. ಆದರೆ ಟ್ರೆಡ್‌ಮಿಲ್‌ನಲ್ಲಿ ಒಮ್ಮೆಗೆ ಒಂದೇ ವೇಗದಲ್ಲಿ ಓಡಬೇಕಾದ ಅನಿವಾರ್ಯತೆ ಇರುತ್ತದೆ. ಓಡುತ್ತಿರುವ ವೇಗವೂ ಅರಿವಿಗೆ ಬರುವುದಿಲ್ಲ. ಆದರೆ ವೇಗವನ್ನು ನಿರ್ಧರಿಸುವ ಸೌಲಭ್ಯ ಇರುವುದರಿಂದ ಟ್ರೆಡ್‌ಮಿಲ್ ಉಪಯೋಗವಾಗುತ್ತದೆ.

ಎಷ್ಟು ಹೊತ್ತು?

ಎಷ್ಟು ಗಂಟೆ ವರ್ಕ್‌ಔಟ್ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ? ಎಂಬುದು ಹಲವರನ್ನು ಕಾಡುವ ಪ್ರಶ್ನೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ವಯಸ್ಕರು ವಾರದಲ್ಲಿ ಕನಿಷ್ಠ 150 ನಿಮಿಷ ವಾಯುವಿಹಾರ, ಜಾಗಿಂಗ್‌ನಂತಹ ಸುಲಭ ವ್ಯಾಯಾಮಗಳನ್ನಾದರೂ ಮಾಡಬೇಕು. ಬೆವರು ಹರಿಯುವಂತಹ ವ್ಯಾಯಾಮಗಳಾದರೆ ಕನಿಷ್ಠ 75 ನಿಮಿಷವಾದರೂ ಮಾಡಬೇಕು. ಜಿಮ್‌ಗೆ ಹೋಗದವರು, ವ್ಯಾಯಾಮಕ್ಕೆಂದೆ ಸಮಯ ಮೀಸಲಿಡಲು ಸಾಧ್ಯವಿಲ್ಲದವರು, ಬಟ್ಟೆ ಒಗೆಯುವುದು, ತೋಟದ ಕೆಲಸ ಮಾಡುತ್ತಿದ್ದರೂ ವ್ಯಾಯಾಮ ಮಾಡಿದಂತೆಯೇ.

ಬೆವರುವುದು ಅಗತ್ಯವೇ?

ದೇಹದಿಂದ ಎಷ್ಟು ಬೆವರು ಹೊರಬರುತ್ತದೆಯೋ, ಅಷ್ಟು ಚೆನ್ನಾಗಿ ವ್ಯಾಯಾಮ ಮಾಡಿದಂತೆ, ಇದರಿಂದ ತೂಕವೂ ಇಳಿಯುತ್ತದೆ ಎಂದು ಹಲವರು ಭಾವಿಸುತ್ತಾರೆ. ಈ ರೀತಿ ಅನಿಸುವುದು ಸಹಜ. ಆದರೆ ಬೆವರಿದರಷ್ಟೇ ಸರಿಯಾಗಿ ವ್ಯಾಯಾಮ ಮಾಡಿದಂತೆ ಎಂದು ಭಾವಿಸುವುದು ಕಷ್ಟ. ನಮ್ಮ ದೇಹದಲ್ಲಿನ ಉಷ್ಣಾಂಶವನ್ನು ಹೊರಹಾಕುವ ಪ್ರಕ್ರಿಯೆಯಾಗಿ ಬೆವರು ಬರುತ್ತದೆ ಎಂಬುದು ನೆನಪಿರಲಿ. ಹೆಚ್ಚು ಬೆವರುವುದಕ್ಕಿಂತ ಹೃದಯ ಕಾರ್ಯವೈಖರಿ ಚುರುಕಾಗಬೇಕು. ಮಾಂಸಖಂಡಗಳು ದೇಢವಾಗಬೇಕು. ಅದು ಮಾತ್ರ ಉತ್ತಮ ವ್ಯಾಯಾಮ. ಬೆವರು ಕೇವಲ ನೀರು ಮಾತ್ರ ಹೀಗಾಗಿ ಇದನ್ನು ಕ್ಯಾಲರಿಯೊಂದಿಗೆ ಹೋಲಿಸಬಾರದು.

ಬೆಳಗಿನ ವ್ಯಾಯಾಮ ಮಾತ್ರ ಉತ್ತಮವೇ?

ಬೆಳಿಗ್ಗೆ ಉದರ ಖಾಲಿಯಾಗಿರುತ್ತದೆ. ಈ ಹೊತ್ತಲ್ಲಿ ವ್ಯಾಯಾಮ ಮಾಡಿದರೆ ದೇಹಕ್ಕೆ ಶಕ್ತಿ ಬೇಕಾಗಿರುವುದರಿಂದ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬು ಕರಗುತ್ತದೆ. ಹೀಗಾಗಿ ಮುಂಜಾನೆ ವ್ಯಾಯಾಮ ಉತ್ತಮ ಎಂಬುದು ಹಲವರ ಅಭಿಪ್ರಾಯ.

ಶಕ್ತಿ ಪೇಯಗಳು ಅಗತ್ಯವೆ?

ಹೆಚ್ಚು ಬೆವರಿದಾಗ ರಕ್ತದೊಳಿಗಿರುವ ಪ್ಲಾಸ್ಮಾದಿಂದ ನೀರು ಹೊರಬರುತ್ತದೆ. ಇದರಿಂದ ಮಾಂಸಖಂಡಗಳಿಗೆ ಅಗತ್ಯವಾದ ಆಕ್ಸಿಜನ್‌ ಇತರೆ ಪೋಷಕಾಂಶಗಳನ್ನು ಒದಗಿಸಲು ಹೃದಯ ಹೆಚ್ಚು ಕಷ್ಟಪಡಬೇಕಾಗುತ್ತದೆ. ಹೀಗಾಗಿ ವ್ಯಾಯಾಮ ಮಾಡುವಾಗ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT