ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಯಶ್ ವಿರುದ್ಧ ಸುದೀಪ್‌ ಅಭಿಮಾನಿಗಳು ಗರಂ

Last Updated 6 ಜೂನ್ 2018, 3:42 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಟ ಯಶ್ ವಿರುದ್ಧ ಕಿಚ್ಚ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಕಿಚ್ಚ ಸುದೀಪ್‌, ನಟ ಯಶ್‍ ಅವರಿಗೆ ಫಿಟ್‌ನೆಸ್‌ ಸವಾಲೊಂದನ್ನು ನೀಡಿದ್ದರು. ಸುದೀಪ್‌ ಸವಾಲು ಸ್ವೀಕರಿಸಿದ ಯಶ್ ತಮ್ಮ ಸ್ನೇಹಿತನ ಫಿಟ್‌ನೆಸ್‌ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಯಶ್‌ ವಿಡಿಯೊದಲ್ಲಿ ‘ಹಾಯ್ ಸುದೀಪ್ ನೀವು ನನಗೆ ಒಂದು ಚಾಲೆಂಜ್ ಕೊಟ್ಟಿದ್ದೀರಾ ಧನ್ಯವಾದಗಳು. ನಾವು ಕಲಾವಿದರಾಗಿದರಿಂದ ನಾವು ದಿನನಿತ್ಯ ವರ್ಕೌಟ್ ಮಾಡುತ್ತಿರುತ್ತೇವೆ. ಆದರೆ ನಾನು ಈ ಚಾಲೆಂಜ್‍ನಲ್ಲಿ ಒಂದು ಟ್ವಿಸ್ಟ್ ಕೊಡಲು ಯೋಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಜೀವನದಲ್ಲಿ ಎಂದೂ ಫಿಟ್‌ ಆಗಿರಲು ಸಾಧ್ಯವೇ ಇಲ್ಲ ಎಂದುಕೊಂಡಿರುವ ನನ್ನ ಸ್ನೇಹಿತನೊಬ್ಬ ಇದ್ದಾನೆ. ಆತನ ಹೆಸರು ಚೇತನ್ ಅಲಿಯಾಸ್ ಚಕ್ಕಲಿ ನನ್ನ ಬಾಲ್ಯ ಸ್ನೇಹಿತ. ಅವನಿಂದ ನಾನು ಈ ಚಾಲೆಂಜ್ ಮಾಡಿಸುತ್ತೇನೆ ಎಂದು ಹೇಳಿ ತಮ್ಮ ಸ್ನೇಹಿತನಿಂದ ಫಿಟ್‌ನೆಸ್‌ ಚಾಲೆಂಜ್ ಮಾಡಿಸಿದ್ದರು.

‘ವಿಡಿಯೊದಲ್ಲಿ ಯಶ್, ಕಿಚ್ಚ ಸುದೀಪ್ ಅವರನ್ನು ಹೆಸರು ಹೇಳಿ ಕರೆದಿದ್ದರು. ಇದಕ್ಕೆ ಸುದೀಪ್ ಅಭಿಮಾನಿಗಳು, ಸುದೀಪ್ ಅವರನ್ನು ‘ಸರ್‌’ ಎಂದು ಕರೆಯಬೇಕಿತ್ತು. ಆದರೆ ಕೇವಲ ಸುದೀಪ್ ಎಂದು ಕರೆದಿರುವುದು ಎಷ್ಟು ಸರಿ’ ಎಂದು ಸುದೀಪ್‌ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಯಶ್ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಕೆಟ್ಟ ಪದಗಳುಳ್ಳ ಟ್ವೀಟ್‌ಗಳನ್ನು ಮಾಡದಂತೆ ಸುದೀಪ್ ಟ್ವೀಟ್‌ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

‘ನನ್ನ ಹೆಸರನ್ನು ಕರೆದಿದ್ದಕ್ಕೆ ನನ್ನ ಸ್ನೇಹಿತರಿಗೂ ಹಾಗೂ ಅಭಿಮಾನಿಗಳಿಗೆ ‘ಯಶ್’ ವಿರುದ್ಧ ಕೆಟ್ಟದಾಗಿ ಟ್ವೀಟ್‌ ಮಾಡಬೇಡಿ. ನನ್ನ ಈ ಮನವಿಯನ್ನು ನೀವು ಗೌರವಿಸುತ್ತೀರಿ ಎಂದು ನಾನು ಭಾವಿಸಿದ್ದೇನೆ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ...

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT