ಬುಧವಾರ, ಏಪ್ರಿಲ್ 21, 2021
23 °C

12ರಿಂದ ಬೆಂಗಳೂರು ಬೀಜ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನರಿಗೆ ಮತ್ತೆ ನಾಟಿ ತರಕಾರಿ ರುಚಿ ತೋರಿಸಲು ರೈತರ ಬೀಜ ಕಂಪನಿ ‘ಸಹಜ ಸೀಡ್ಸ್’ ಹಾಗೂ ಗ್ರಾಹಕರಲ್ಲಿ ಶುದ್ಧ ಆಹಾರದ ಬಗ್ಗೆ ಅರಿವು ಮೂಡಿಸುತ್ತಿರುವ ‘ಗ್ರೀನ್ ಪಾತ್’ ಸಹಯೋಗದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ (ಜುಲೈ 12ರಿಂದ 14) ‘ಬೆಂಗಳೂರು ಬೀಜ ಮೇಳ’ ಆಯೋಜಿಸಲಾಗಿದೆ.

ಮುಂಗಾರು ಸಮಯದಲ್ಲಿ ಆಯೋಜಿಸಿರುವ ಮೂರು ದಿನಗಳ ಮೇಳದಲ್ಲಿ ವಿವಿಧ ಬಗೆಯ ದೇಸಿ ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮೇಳದ ಆರಂಭದ ದಿನ ಕೈತೋಟ ಹಾಗೂ ಸಾವಯವ ಬೀಜೋತ್ಪಾದನೆ ತಂತ್ರಗಳ ಕುರಿತು ಸಾವಯವ ಕೃಷಿಕ ಕಾಂತರಾಜು ಸಲಹೆ ನೀಡಲಿದ್ದಾರೆ. 

ಮೇಳದಲ್ಲಿ ಏನೇನಿದೆ?

- ರಾಸಾಯನಿಕ ಮುಕ್ತ ಹಣ್ಣು, ತರಕಾರಿಗಳು
- ಅಪರೂಪದ ಗೆಡ್ಡೆ-ಗೆಣಸುಗಳು
- ಕೈತೋಟಗಳಿಗೆ ಮಾರ್ಗದರ್ಶನ
- ಸಂಗಾತಿ ಬೆಳೆಗಳ ಮಾಹಿತಿ
- ಬೀಜೋತ್ಪಾದನೆಯ ತಂತ್ರಗಳು
- ನಾಟಿ ತಳಿಗಳ ತರಕಾರಿ ಬೀಜಗಳು
- ತಾಜಾ ತರಕಾರಿ
- ಸಾವಯವ ಉತ್ಪನ್ನ  

ಸ್ಥಳ: ‘ಗ್ರೀನ್ ಪಾತ್’, ಮಂತ್ರಿ ಮಾಲ್
ಮೆಟ್ರೋ ಮುಂಭಾಗ, ರಾಜೀವಗಾಂಧಿ ವೃತ್ತ, ಮಲ್ಲೇಶ್ವರ
ದಿನಾಂಕ: 12ರಿಂದ 14ನೇ ಜುಲೈ
ಸಮಯ: ಬೆಳಿಗ್ಗೆ 10.30 ರಿಂದ ರಾತ್ರಿ 8 ರವರೆಗೆ
ಪ್ರವೇಶ: ಉಚಿತ.
ಮಾಹಿತಿಗೆ: 7090009911/7090009922

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು