ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಜನ್ ಕೊಂಬೆಯ ಅಡಿಕೆ ಮರ

Last Updated 28 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಅಡಿಕೆ ಮರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸಿಲಿಂಡರ್ ಆಕಾರದ ಗಂಟು ಮತ್ತು ಅಂತರ್ ಗಂಟುಗಳೊಂದಿಗೆ ಯಾವುದೇ ಕೊಂಬೆ ರೆಂಬೆಗಳಿಲ್ಲದೆಯೇ ಬೆಳೆವ ಕಾಂಡ, ತುದಿಯಲ್ಲಿ ಎಲೆಯ ಗೊಂಚಲುಗಳು, ಎಲೆ ಮತ್ತು ಕಾಂಡದ ತುದಿಯಿಂದ ಹೊರಟು 50 ರಿಂದ 500ರಷ್ಟು ಕಾಯಿಗಳನ್ನು ಬಿಡುವ, ನೇರವಾಗಿ ಬೆಳೆಯುವ ಮರವಲ್ಲವೆ? ಇದೇನೋ ನಿಜ.

ಆದರೆ ಇದಕ್ಕೆಲ್ಲಾ ಅಪವಾದ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬೆಣಂದೂರು ಗ್ರಾಮದ ವೆಂಕಟೇಶ್ ಭಟ್ಟರ ಮನೆಯ ಅಡಿಕೆ ತೋಟದಲ್ಲಿ ಅಪರೂಪದ ಅಡಿಕೆ ಮರವೊಂದು ಬೆಳೆದಿದೆ. ಈ ಅಡಿಕೆ ಮರ ಸುಮಾರು 25 ಮೀಟರ್ ಎತ್ತರದವರೆಗೆ ಬೆಳೆದು ನಂತರ ತುದಿಯಲ್ಲಿ 12 ಕವಲುಗಳನ್ನು ಬಿಟ್ಟಿದೆ. ಈ ಮರದ ಪ್ರತಿಯೊಂದು ಕವಲುಗಳ ತುದಿಯಲ್ಲಿ ಹೂ-ಗೊಂಚಲು ಬಂದಿರುವುದು ಇನ್ನೊಂದು ವಿಶೇಷ.

    ವೈಜ್ಞಾನಿಕವಾಗಿ ಈ ರೀತಿಯ ಬಹುಕಾಂಡ ಮಾರ್ಪಾಟಿಗೆ ಮ್ಯುಟೇಷನ್ (ಜೀನ್ ಗಳ ರಚನಾತ್ಮಕ ಬದಲಾವಣೆ) ಪ್ರಕ್ರಿಯೆ ಕಾರಣ. ಈ ರೀತಿಯ ಮ್ಯುಟೇಶನ್‌ಗಳು ನಡೆಯಲು ಮುಖ್ಯವಾಗಿ ರಾಸಾಯನಿಕ ವಸ್ತುಗಳು ಅಥವಾ ನೇರಳಾತೀತ ಕಿರಣಗಳು ಸಸ್ಯ ಜೀವ ಕೋಶದಲ್ಲಿರುವ ಡಿಎನ್ಎಗಳನ್ನು ಒಡೆದು  ಜೀನ್‌ಗಳ ರಚನೆಯನ್ನೇ ಬದಲಾಯಿಸಿ ಸಸ್ಯಗಳ ಅಂಗ ರೂಪಾಂತರಕ್ಕೆ ಕಾರಣವಾಗುತ್ತದೆ.

ಈ ಗಿಡದಲ್ಲಿ ಅಡಿಕೆ ಕಾಯಿಯ ಸಂಖ್ಯೆ ಕಡಿಮೆಯಿದ್ದರೂ, ಪ್ರತಿಯೊಂದು ಕವಲಲ್ಲೂ ಹೂ ಗೊಂಚಲಿದೆ. ಇದರಿಂದ ಪ್ರತಿಯೊಂದು ಕವಲಿಗೂ ಅಡಿಕೆಯಾದರೆ ಇಳುವರಿ ಜಾಸ್ತಿಯಾಗುತ್ತದೆ ಎಂಬುದು ಸ್ಥಳೀಯರ ಅನಿಸಿಕೆ. ಕೃಷಿ ತಂತ್ರಜ್ಞರು ಈ ರೀತಿಯ ಅಡಿಕೆ ಮರಗಳ ರೂಪಾಂತರ ಬೆಳವಣಿಗೆಗೆ ಕಾರಣ ಹುಡುಕಿ, ತಳಿಯನ್ನು ಅಭಿವೃದ್ಧಿಗೊಳಿಸಿ ಅಡಿಕೆ ಇಳುವರಿ ಹೆಚ್ಚಿಸುವಲ್ಲಿ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಕಡಿಮೆ ಜಾಗದಲ್ಲಿ ಅಧಿಕ ಇಳುವರಿ ಪಡೆಯಬಹುದಲ್ಲವೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT