ಒಂದು ಗ್ಲಾಸ್ ತೆಗೆದುಕೊಳ್ಳಿ. ಆ ಗ್ಲಾಸ್‌ನಲ್ಲಿ ಶೇ80ರಷ್ಟು ನೀರು ಭರ್ತಿ ಮಾಡಿಕೊಳ್ಳಿ.

ಒಂದು ಈರುಳ್ಳಿ ತೆಗೆದುಕೊಳ್ಳಿ. ಈ ಈರುಳ್ಳಿಯ ತುದಿಯನ್ನು ಕತ್ತರಿಸಬಾರದು. ಅದಕ್ಕೆ ಬೇರು ಹಾಗೂ ಚಿಕ್ಕ ಜುಟ್ಟು ಇರಬೇಕು.

ಒಂದು ಟೂತ್‌ಪಿಕ್‌ನಿಂದ ನಾಲ್ಕೂ ಬದಿಯಲ್ಲಿ ಚಿಕ್ಕ ರಂಧ್ರ ಮಾಡಬೇಕು. ಒಂದು ವೇಳೆ ಟೂತ್‌ಪಿಕ್ ಇಲ್ಲದೇ ಹೋದರೆ ಬಾಟಲಿಯ ಮೇಲೆ ಒಂದು ತಂತಿಯನ್ನು ಚಿತ್ರದಲ್ಲಿ ತೋರಿಸಿರುವಂತೆ ಇಡಿ. ರಂಧ್ರ ಮಾಡುವ ಅಥವಾ ತಂತಿ ಇಡುವ ಕಾರಣವೆಂದರೆ ಈರುಳ್ಳಿಯ ಬೇರು ಮಾತ್ರ ನೀರಿನಲ್ಲಿ ನೆನೆಯಬೇಕು ಎನ್ನುವುದು. ಬೇರು ಬಿಟ್ಟು ಉಳಿದ ಭಾಗ ನೆನೆಯಬಾರದು.

ಎರಡು ದಿನ ಹಾಗೆಯೇ ಬಿಡಿ. ಎರಡು ದಿನಗಳ ನಂತರ ಅದನ್ನು ಗ್ಲಾಸ್‌ನಿಂದ ತೆಗೆಯಿರಿ. ನಂತರ ಅದನ್ನು ಮಣ್ಣು ಇರುವ ಕುಂಡದಲ್ಲಿ ನೆಡಬೇಕು. ಬೇರು ಮಾತ್ರ ಮಣ್ಣಿನ ಒಳಗೆ ಇದ್ದು ಉಳಿದ ಭಾಗ ಮೇಲೆ ಇರಬೇಕು. ಅದಕ್ಕೆ ನೀರು ಹಾಕುತ್ತಲೇ ಇರಬೇಕು.

ಕೆಲವು ದಿನಗಳ ನಂತರ ಮೇಲೆ ಎಲೆಗಳು ಬರಲು ಆರಂಭಿಸುತ್ತವೆ. ಕೆಳಗಡೆ ಬೇರು ಆಳವಾಗಿ ಮಣ್ಣಿನ ಒಳಗೆ ಹೋಗುತ್ತದೆ .

ಅದನ್ನು ಬೇರು ಸಹಿತ ನಿಧಾನವಾಗಿ ಕೀಳಬೇಕು. ಕಿತ್ತ ನಂತರ ಚಿಕ್ಕ ಕುಂಡದಲ್ಲಿ ನೆಡಬೇಕು. ನೆಡುವ ಮೊದಲು ಆ ಕುಂಡದಲ್ಲಿ ಸ್ವಲ್ಪ ಕೋಕೊಪಿಟ್, ಮರಳು ತುಂಬಿಸಬೇಕು. ಅದರಲ್ಲಿ ಈರುಳ್ಳಿ ನೆಟ್ಟು ಮೇಲಿನಿಂದ ಪುನಃ ಮಣ್ಣು ಹಾಕಬೇಕು

ದಿನವೂ ನೀರು ಹಾಕುತ್ತಾ ಬನ್ನಿ. ಆದರೆ ತುಂಬಾ ನೀರು ಹಾಕಬಾರದು. ಇದನ್ನು ಅಡುಗೆ ಮನೆ ಸಮೀಪ ಇಟ್ಟುಕೊಳ್ಳಬಹುದು.

ವಿಡಿಯೊ ಕೊಂಡಿ: goo.gl/VIVem5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.