ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಕೊಯ್ಲಿಗೆ ಯಂತ್ರ

Last Updated 29 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹೊಲ ಗದ್ದೆಗಳಲ್ಲಿ ದುಡಿಯಲು ಜನರು ಬರದ ಸ್ಥಿತಿ ಇಂದಿನದ್ದು. ಕೂಲಿ ಕಾರ್ಮಿಕರ ಸಮಸ್ಯೆ ಭತ್ತದ ಕೊಯ್ಲು ಹಾಗೂ ಒಕ್ಕಣೆ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಆದ್ದರಿಂದ ಈಗ ಯಂತ್ರಗಳೇ ಕೂಲಿಯಾಳುಗಳು.

ಪೈರನ್ನು ಅಚ್ಚುಕಟ್ಟಾಗಿ ಕೊಯ್ದು, ಕೊಯ್ಲು ಭತ್ತವನ್ನು ಪ್ರತ್ಯೇಕಿಸಿ ಒಕ್ಕಣೆ ಮಾಡಿ, ಜೊಳ್ಳು ಕಾಳುಗಳನ್ನು ತೂರುವ ನೂತನ ಯಂತ್ರ ಇದಾಗಿದೆ. ಇದು ಗಂಟೆಗೆ ಒಂದು ಎಕರೆಯಷ್ಟು ಭತ್ತ ಕೊಯ್ದು ಒಕ್ಕಣೆ ಮಾಡಿ ಮುಗಿಸುತ್ತವೆ.

ಬಲು ದುಬಾರಿ: ಇದರ ಬೆಲೆ 20ರಿಂದ 25 ಲಕ್ಷ ರೂಪಾಯಿ. ಇದು ಬಾಡಿಗೆಗೂ ದೊರೆಯುತ್ತದೆ. ಒಂದು ಗಂಟೆಗೆ 1800-2000 ರೂಪಾಯಿ ಬಾಡಿಗೆ ದರ. ಇದು ದುಬಾರಿ ಎನಿಸಿದರೂ ಕೂಲಿ ಕೆಲಸದವರ ಕೂಲಿಗೆ ಹೋಲಿಸಿದ್ದಲ್ಲಿ ದರ ಕಮ್ಮಿಯೇ. ಏಕೆಂದರೆ ಕೂಲಿ ಕೆಲಸದವರು ಒಂದು ಎಕರೆ ಭತ್ತವನ್ನು ಕೊಯ್ದು ಒಕ್ಕಣೆ ಮಾಡಲು ಸುಮಾರು 8ರಿಂದ 10 ಸಾವಿರ ರೂಪಾಯಿಗಳನ್ನು ಕೇಳುತ್ತಾರೆ. ಆದರೆ ಯಂತ್ರದಿಂದ ಮಾಡಿಸಿದಲ್ಲಿ 6-8 ಸಾವಿರ ರೂಪಾಯಿ ಉಳಿತಾಯವಾಗುತ್ತದೆ ಜೊತೆಗೆ ಶ್ರಮವೂ ಉಳಿಯುತ್ತದೆ.

ಯಂತ್ರದ ಮುಂಭಾಗದಲ್ಲಿ ಗರಗಸದಂತಹ ಹಲ್ಲುಗಳಿವೆ. ಈ ಹಲ್ಲುಗಳು ಭತ್ತದ ಪೈರುಗಳನ್ನು ಬುಡ ಸಮೇತ ಕೊಯ್ದು ಹುಲ್ಲನ್ನು ಒಳಗೆ ತೆಗೆದುಕೊಳ್ಳುತ್ತವೆ. ಬಳಿಕ ಕಾಳನ್ನು ಬೇರ್ಪಡಿಸಿ ಹುಲ್ಲನ್ನು ಎರಡು ಮೂರು ತುಂಡುಗಳನ್ನು ಮಾಡಿ ಹಿಂಭಾಗದ ಮೂಲಕ ಹೊರ ಹಾಕುತ್ತವೆ. ಸುಮಾರು 8 ಕ್ವಿಂಟಾಲುಗಳಷ್ಟು ಕಾಳನ್ನು ಯಂತ್ರದಲ್ಲಿರುವ ಡ್ರಂನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಹೆಚ್ಚಾದ ಭತ್ತವನ್ನು ಕೊಳವೆ ಮೂಲಕ ಹೊರ ಹಾಕುತ್ತದೆ. ಈ ಭತ್ತದಲ್ಲಿ ಯಾವುದೇ ರೀತಿಯ ಕಸಕಡ್ಡಿಗಳು ಇರುವುದಿಲ್ಲ. ಭತ್ತವನ್ನು ನೇರವಾಗಿ ಭತ್ತದ ಕಣಜಕ್ಕೆ ತುಂಬಬಹುದು ಅಥವಾ ಮಾರುಕಟ್ಟೆಗೆ ಸಹ ಕಳುಹಿಸಬಹುದು.

ಗದ್ದೆಯ ಕೆಸರಿದ್ದರೂ ಯಂತ್ರದಲ್ಲಿರುವ ಪ್ಲಾಸ್ಟಿಕ್ ಚಕ್ರಗಳಿಂದ ಸಾರಾಗವಾಗಿ ಚಲಿಸಿ ಕೊಯ್ಲು ಮತ್ತು ಒಕ್ಕಣೆಯನ್ನೂ ಮಾಡುತ್ತದೆ. ಭತ್ತದ ಹುಲ್ಲು ಸ್ವಲ್ಪ ಪ್ರಮಾಣದಲ್ಲಿ ಹಾಳಾಗುತ್ತದೆ. ತುಂಡು ಮಾಡಿದ ಹುಲ್ಲನ್ನು ತೆಗೆದು ದನ ಕರುಗಳಿಗಾದರೂ ಹಾಕಬಹುದು ಅಥವಾ ಗದ್ದೆಯಲ್ಲಿಯೇ ಬಿಟ್ಟು ಕೊಳೆವಂತೆ ಮಾಡಿದರೆ ಮಣ್ಣಿನ ಫಲವತ್ತತೆಯನ್ನು (ಸಾರಜನಕದ ಪ್ರಮಾಣ) ಹೆಚ್ಚಿಸಬಹುದು.
-ಡಾ. ಆರ್.ಕೃಷ್ಣಮೂರ್ತಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT