ಮುಸುಕು ತೊಟ್ಟು ಜಾಗೃತಿ ಮೂಡಿಸಿ: ‘#ವಾಯುಮಾಲಿನ್ಯ ನಿರ್ಮೂಲನೆ’

ಭಾನುವಾರ, ಜೂನ್ 16, 2019
32 °C

ಮುಸುಕು ತೊಟ್ಟು ಜಾಗೃತಿ ಮೂಡಿಸಿ: ‘#ವಾಯುಮಾಲಿನ್ಯ ನಿರ್ಮೂಲನೆ’

Published:
Updated:
Prajavani

ವಿಶ್ವಸಂಸ್ಥೆ: ಮನುಷ್ಯ ಸಂಘ ಜೀವಿಯಷ್ಟೇ ಅಲ್ಲ, ಪರಿಸರ ಜೀವಿಯೂ ಹೌದು ಎಂಬುದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿರಬೇಕು. ಈ ಸತ್ಯವನ್ನು ಅರಿಯದೆ ಕುಡಿಯುವ ನೀರು ಕಲುಷಿತಗೊಳಿಸಿದ್ದೇವೆ, ವಾಸಿಸುವ ವಾತಾವರಣವನ್ನು ಪ್ಲಾಸ್ಟಿಕ್ ಮಯ ಮಾಡಿದ್ದೇವೆ, ಎಲ್ಲಕ್ಕಿಂತ ಮುಖ್ಯವಾಗಿ ಉಸಿರಾಡುವ ಗಾಳಿಯನ್ನೂ ವಿಷಾನಿಲಗಳಿಂದ ಕಲುಷಿತಗೊಳಿಸಿದ್ದೇವೆ. 

ಈ ಎಲ್ಲ ಸಮಸ್ಯೆಗಳ ನಿರ್ಮೂಲನೆಗಾಗಿ ಪರಿಸರ ಪ್ರೇಮಿಗಳು, ಸಂಘ–ಸಂಸ್ಥೆಗಳು ಶ್ರಮಿಸುತ್ತಿವೆ. ವಿಶ್ವದ ಜೀವ ಸಂಕುಲದ ಉಳಿವಿಗೆ ಅಗತ್ಯವಾಗಿರುವ ‘ಪ್ರಾಣವಾಯು’ವನ್ನು ಶುದ್ಧವಾಗಿಟ್ಟುಕೊಳ್ಳುವ ಹೊಣೆ ಎಲ್ಲರ ಮೇಲೂ ಇದೆ. ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ವಿಶ್ವಸಂಸ್ಥೆ ಈ ಬಾರಿಯ ಪರಿಸರ ದಿನಾಚರಣೆಯನ್ನು ‘#ವಾಯುಮಾಲಿನ್ಯ ನಿರ್ಮೂಲನೆ ಮಾಡಿ’ (#Beatairpollution) ಥೀಮ್ ಮೂಲಕ ಆಚರಿಸಲು ಕರೆ ಕೊಟ್ಟಿದೆ. 

ಪ್ರತಿ 10ರಲ್ಲಿ 9 ಜನ ಕಲುಷಿತ ಗಾಳಿಯನ್ನು ಸೇವಿಸುತ್ತಿದ್ದಾರೆ ಎಂಬ ಕಹಿಸತ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅಲ್ಲದೇ, ಸುಮಾರು 70 ಲಕ್ಷ ಜನ ಪ್ರತಿ ವರ್ಷ ವಾಯುಮಾಲಿನ್ಯ ಸಮಸ್ಯೆಯಿಂದಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದೂ ಹೇಳಿದೆ.

ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಯೇ ಮುಸುಕು ತೊಡುವ ಅಭಿಯಾನದಲ್ಲಿ ಭಾಗವಹಿಸುವಂತೆ (#Jointhemaskchallenge) ಕರೆ ಕೊಟ್ಟಿದೆ. ಮುಖಕ್ಕೆ ಮುಸುಕು ತೊಟ್ಟು ‘ಶುದ್ಧ ಗಾಳಿ ನಮ್ಮ ಹಕ್ಕು’ ಎಂಬುದನ್ನು ಜನಪ್ರತಿನಿಧಿಗಳಿಗೆ, ಆಳುವ ವರ್ಗದವರಿಗೆ ಮನದಟ್ಟು ಮಾಡಿಕೊಡಿ ಎಂದು ಹೇಳಿದೆ. ಸಿನಿಮಾ ತಾರೆಯರು, ಕ್ರೀಡಾಪಟುಗಳು, ಗಣ್ಯರನ್ನೂ ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಿದೆ.

ನೂರಕ್ಕೂ ಹೆಚ್ಚು ರಾಷ್ಟ್ರಗಳು ಪರಿಸರ ದಿನಾಚರಣೆ ಆಚರಿಸಲಿವೆ. ಈ ಬಾರಿಯ ಪರಿಸರ ದಿನಾಚರಣೆ ಆತಿಥ್ಯವನ್ನು ಚೀನಾ ವಹಿಸಿಕೊಂಡಿದೆ.

ಭಾರತದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯ!
ಅತಿಹೆಚ್ಚು ಪ್ರಮಾಣದಲ್ಲಿ ವಾಯುಮಾಲಿನ್ಯವಿರುವ ವಿಶ್ವದ 10 ನಗರಗಳ ಪೈಕಿ 7 ನಗರಗಳು ಭಾರತದಲ್ಲೇ ಇವೆ ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ. ಅದರಲ್ಲೂ ದಕ್ಷಿಣ ಏಷ್ಯಾ ಪ್ರದೇಶಗಳೇ ಹೆಚ್ಚು ಕಲುಷಿತಗೊಂಡಿವೆ ಎಂದು ತಿಳಿಸಿವೆ.

2018ರ ಅಂಕಿ ಅಂಶಗಳ ಪ್ರಕಾರ ಭಾರತದ ಗುರುಗ್ರಾಮ ವಿಶ್ವದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯದಿಂದ ತತ್ತರಿಸಿರುವ ನಗರವಾಗಿದೆ. ಗರಿಷ್ಠ ಪ್ರಮಾಣದ ವಾಯುಮಾಲಿನ್ಯವಿರುವ 18 ನಗರಗಳು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೇ ಇವೆ. ಸುಮಾರು 2 ಕೋಟಿ ಜನ ವಾಸಿಸುತ್ತಿರುವ ರಾಜಧಾನಿ ದೆಹಲಿ, ವಿಶ್ವದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜಧಾನಿ ಎಂಬ ಕುಖ್ಯಾತಿಗೂ ಪಾತ್ರವಾಗಿದೆ.

ವಾಯುಮಾಲಿನ್ಯ ಹೆಚ್ಚಾಗಿರುವ ಅಗ್ರ 10 ನಗರಗಳು
1. ಗುರುಗ್ರಾಮ– ಭಾರತ

2. ಗಾಜಿಯಾಬಾದ್ –ಭಾರತ

3. ಫೈಸಲಾಬಾದ್ –ಪಾಕಿಸ್ತಾನ

4. ಫರೀದಾಬಾದ್ –ಭಾರತ

5. ಭಿವಾಡಿ –ಭಾರತ

6. ನೋಯಿಡಾ –ಭಾರತ

7. ಪಟ್ನಾ– ಭಾರತ

8. ಹೊಟಾನ್ –ಚೀನಾ

9. ಲಖನೌ– ಭಾರತ

10. ಲಾಹೋರ್– ಪಾಕಿಸ್ತಾನ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !