ತಿಂಗಳ ಅಂತ್ಯಕ್ಕೆ ಅಮಿತ್‌ ಶಾ ಭೇಟಿ

7

ತಿಂಗಳ ಅಂತ್ಯಕ್ಕೆ ಅಮಿತ್‌ ಶಾ ಭೇಟಿ

Published:
Updated:

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ರಾಜ್ಯ ಭೇಟಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಅವರು ತಿಂಗಳ ಅಂತ್ಯದಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ 25 ಸ್ಥಾನಗಳನ್ನು (ಮಿಷನ್‌ 25) ಗೆಲ್ಲಬೇಕು ಎಂದು ಅಮಿತ್‌ ಶಾ ಅವರು ರಾಜ್ಯ ಘಟಕದ ನಾಯಕರಿಗೆ ಈ ಹಿಂದೆಯೇ ತಾಕೀತು ಮಾಡಿದ್ದಾರೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿಯಿಂದಾಗಿ ಪಕ್ಷ ಈ ಗುರಿ ಮುಟ್ಟುವುದು ಕಷ್ಟ ಎಂಬುದು ರಾಜ್ಯ ನಾಯಕರ ಅನಿಸಿಕೆ.

ಅವರು ಇದೇ 9ರಂದು ತುಮಕೂರಿಗೆ ಭೇಟಿ ನೀಡಬೇಕಿತ್ತು. ಸಂಸತ್ ಅಧಿವೇಶನದ ಅವಧಿಯನ್ನು ವಿಸ್ತರಿಸಲಾಗಿದ್ದು, ಶಾ ಅವರ ಉಪಸ್ಥಿತಿ ಅವಶ್ಯವಾಗಿರುವ ಕಾರಣ ಭೇಟಿ ಮುಂದೂಡಲಾಗಿದೆ. ಅಧಿವೇಶನ ಮುಗಿದ ನಂತರ ಮುಂದಿನ ದಿನಾಂಕ ನಿಗದಿ ಮಾಡಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !