ಎರಡು ವರ್ಷದೊಳಗೆ ವಿಮೆ ವಹಿವಾಟಿಗೆ ಅಂಚೆ ಇಲಾಖೆ

ನವದೆಹಲಿ: ಭಾರತೀಯ ಅಂಚೆ ಇಲಾಖೆಯು ಮುಂದಿನ ಎರಡು ವರ್ಷಗಳಲ್ಲಿ ವಿಮೆ ವಹಿವಾಟನ್ನು ಆರಂಭಿಸಲಿದೆ ಎಂದು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಅವರು ಹೇಳಿದ್ದಾರೆ.

‘ವಿವಿಧ ರೀತಿಯ ವಹಿವಾಟುಗಳನ್ನು ಆರಂಭಿಸುವ ಮೂಲಕ ಅಂಚೆ ಇಲಾಖೆ ಪುನರ್ಜನ್ಮ ಪಡೆದುಕೊಳ್ಳುತ್ತಿದೆ. ಅಂಚೆ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಿಸಿರುವ ಇಲಾಖೆಯು, ಪ್ರತ್ಯೇಕವಾಗಿ ವಿಮಾ ಕಂಪನಿ ಆರಂಭಿಸುವ ಸಿದ್ಧತೆಯಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.

‘ವಿಮಾ ಕಂಪನಿ ಸ್ಥಾಪನೆಗೆ ಅಗತ್ಯವಾದ ಸಲಹಾ ಸಂಸ್ಥೆಯನ್ನು ನೇಮಿಸುವ ಕುರಿತ ಪ್ರಸ್ತಾವನೆಯನ್ನು ಶೀಘ್ರವೇ ಪರಿಗಣಿಸಲಾಗುವುದು’ ಎಂದಿದ್ದಾರೆ.

ಸದ್ಯಕ್ಕೆ, ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗಿಗಳಿಗೆ ಅಂಚೆ ಜೀವ ವಿಮೆ (ಪಿಎಲ್‌ಐ) ಯೋಜನೆ ಜಾರಿಯಲ್ಲಿದೆ. ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲ ವರ್ಗ ಮತ್ತು ಮಹಿಳೆಯರಿಗೆ 1995ರಲ್ಲಿ ಗ್ರಾಮೀಣ ಅಂಚೆ ಜೀವ ವಿಮೆ (ಆರ್‌ಪಿಎಲ್‌ಐ) ಪರಿಚಯಿಸಲಾ‌ಯಿತು. 2017ರ ಮಾರ್ಚ್ ಅಂತ್ಯಕ್ಕೆ ಒಟ್ಟು 46.8 ಲಕ್ಷ ಪಿಎಲ್‌ಐ ಮತ್ತು 146.8 ಲಕ್ಷ ಆರ್‌ಪಿಐಎಲ್‌ ಚಂದಾದಾರರಿದ್ದಾರೆ.

 

ಪ್ರಮುಖ ಸುದ್ದಿಗಳು