ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

ಉತ್ತರ ಪ್ರದೇಶ: ಯುವಕನಿಂದ 8 ಬಾರಿ ಮತದಾನ

ಉತ್ತರ ಪ್ರದೇಶದ ಫರೂಖಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಯುವಕನೊಬ್ಬ ಮತಗಟ್ಟೆಯಲ್ಲಿ ಎಂಟು ಬಾರಿ ಮತದಾನ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಕರಣದ ಸಂಬಂಧ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
Last Updated 20 ಮೇ 2024, 15:50 IST
ಉತ್ತರ ಪ್ರದೇಶ: ಯುವಕನಿಂದ 8 ಬಾರಿ ಮತದಾನ

ದ್ವೇಷ ಭಾಷಣ | ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ: ವಿರೋಧ ಪಕ್ಷಗಳು

ಪ್ರಧಾನಿ ಅವರ ‘ಅಲ್ಪಸಂಖ್ಯಾತರ ವಿರುದ್ಧ ನಾನು ಒಂದೂ ಮಾತು ಆಡಿಲ್ಲ’ ಎಂಬ ಹೇಳಿಕೆಗೆ ತಿರುಗಿ ಬಿದ್ದಿರುವ ವಿರೋಧ ಪಕ್ಷಗಳ ಮುಖಂಡರು, ಪ್ರತಿಯೊಂದು ವೇದಿಕೆಯಲ್ಲೂ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುವ ಮೋದಿ ಅವರು ಹೇಳುತ್ತಿರುವುದು ‘ಸುಳ್ಳು’ ಎಂದು ಟೀಕಿಸಿದ್ದಾರೆ.
Last Updated 20 ಮೇ 2024, 15:41 IST
ದ್ವೇಷ ಭಾಷಣ | ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ: ವಿರೋಧ ಪಕ್ಷಗಳು

ಮೋದಿ ಗ್ಯಾರಂಟಿ ಜಾರಿಯಾಗಿಲ್ಲ: ಟಿಎಂಸಿ

ವಿವಿಧ ವಿಷಯಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಗ್ಯಾರಂಟಿಗಳು ಜಾರಿಗೆ ಬಂದಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ ಮುಖಂಡ ಅಮಿತ್‌ ಮಿತ್ರಾ ಆರೋಪಿಸಿದರು.
Last Updated 20 ಮೇ 2024, 15:38 IST
ಮೋದಿ ಗ್ಯಾರಂಟಿ ಜಾರಿಯಾಗಿಲ್ಲ: ಟಿಎಂಸಿ

ಅಲ್ಪಸಂಖ್ಯಾತರ ವಿರುದ್ಧ ಎಂದೂ ಮಾತನಾಡಿಲ್ಲ, BJP ಮುಸ್ಲಿಮರ ವಿರೋಧಿ ಅಲ್ಲ: ಮೋದಿ

ಅಲ್ಪಸಂಖ್ಯಾತರ ವಿರುದ್ಧ ತಾನು ಎಂದೂ ಮಾತು ಆಡಿಲ್ಲ, ಬಿಜೆಪಿಯು ಎಂದೂ ಅವರ ವಿರುದ್ಧ ಕೆಲಸ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಆದರೆ, ಯಾವುದೇ ರೀತಿಯ ‘ವಿಶೇಷ ಪರಿಗಣನೆ’ಯನ್ನು ತಾನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 20 ಮೇ 2024, 15:29 IST
ಅಲ್ಪಸಂಖ್ಯಾತರ ವಿರುದ್ಧ ಎಂದೂ ಮಾತನಾಡಿಲ್ಲ, BJP ಮುಸ್ಲಿಮರ ವಿರೋಧಿ ಅಲ್ಲ: ಮೋದಿ

ನಾನು ಯಾವುದೇ ಸಂಸ್ಥೆಯ ವಿರುದ್ಧ ಅಲ್ಲ: ಮಮತಾ ಬ್ಯಾನರ್ಜಿ

ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘದ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ತಾವು ಯಾವುದೇ ಸಂಘ ಸಂಸ್ಥೆಯ ವಿರುದ್ಧ ಅಲ್ಲ. ಆದರೆ, ರಾಜಕಾರಣದಲ್ಲಿ ತೊಡಗಿದ್ದ ಒಂದಿಬ್ಬರು ವ್ಯಕ್ತಿಗಳನ್ನು ಟೀಕಿಸಿದ್ದೆ ಅಷ್ಟೇ ಎಂದು ಸೋಮವಾರ ತಿಳಿಸಿದ್ದಾರೆ.
Last Updated 20 ಮೇ 2024, 15:25 IST
ನಾನು ಯಾವುದೇ ಸಂಸ್ಥೆಯ ವಿರುದ್ಧ ಅಲ್ಲ: ಮಮತಾ ಬ್ಯಾನರ್ಜಿ

LS Polls Live | 5ನೇ ಹಂತದ ಮತದಾನ ಮುಕ್ತಾಯ– ಬಹುತೇಕ ನೀರಸ ಮತದಾನ

ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ ಸೇರಿದಂತೆ ಕೆಲವು ಕಡೆ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ.
Last Updated 20 ಮೇ 2024, 14:29 IST
LS Polls Live | 5ನೇ ಹಂತದ ಮತದಾನ ಮುಕ್ತಾಯ– ಬಹುತೇಕ ನೀರಸ ಮತದಾನ

LS Polls: 5ನೇ ಹಂತದ ಮತದಾನ ಮುಕ್ತಾಯ; ಹಕ್ಕು ಚಲಾಯಿಸಿದ 49 ಕ್ಷೇತ್ರಗಳ ನಾಗರಿಕರು

ದೇಶದಾದ್ಯಂತ  ಇಂದು ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆದಿದೆ. ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
Last Updated 20 ಮೇ 2024, 14:21 IST
LS Polls: 5ನೇ ಹಂತದ ಮತದಾನ ಮುಕ್ತಾಯ; ಹಕ್ಕು ಚಲಾಯಿಸಿದ 49 ಕ್ಷೇತ್ರಗಳ ನಾಗರಿಕರು
err
ADVERTISEMENT

ದೆಹಲಿ ಮೆಟ್ರೊ ರೈಲುಗಳಲ್ಲಿ ಕೇಜ್ರಿವಾಲ್‌ಗೆ ಬೆದರಿಕೆ ಬರಹ

ದೆಹಲಿ ಮೆಟ್ರೊ ರೈಲುಗಳಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕುವ ಬರಹ ಗೀಚಲಾಗಿದೆ. ಈ ಘಟನೆಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆಮ್ ಆದ್ಮಿ ಪಕ್ಷ ಸೋಮವಾರ ಆರೋಪಿಸಿದೆ.
Last Updated 20 ಮೇ 2024, 14:09 IST
ದೆಹಲಿ ಮೆಟ್ರೊ ರೈಲುಗಳಲ್ಲಿ ಕೇಜ್ರಿವಾಲ್‌ಗೆ ಬೆದರಿಕೆ ಬರಹ

ಲೋಕಸಭೆಗೆ ಆಯ್ಕೆಯ ವಿಶ್ವಾಸ; ಗದ್ದಿಗೌಡರ

ಬಾಗಲಕೋಟೆ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಪದಾಧಿಕಾರಿಗಳು, ಕಾರ್ಯಕರ್ತರ ಪರಿಶ್ರಮದಿಂದಾಗಿ ಮತ್ತೆ ಲೋಕಸಭೆಗೆ ಆಯ್ಕೆಯಾಗಲಿದ್ದೇನೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ವಿಶ್ವಾಸ ವ್ಯಕ್ತಪಡಿಸಿದರು.
Last Updated 20 ಮೇ 2024, 14:07 IST
ಲೋಕಸಭೆಗೆ ಆಯ್ಕೆಯ ವಿಶ್ವಾಸ; ಗದ್ದಿಗೌಡರ

ಮಂಡಿ: ಕಂಗನಾ ರನೌತ್‌ಗೆ ಕಪ್ಪು ಬಾವುಟ ಪ್ರದರ್ಶನ

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರನೌತ್‌ ಅವರು ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸ್ಥಳೀಯರಿಂದ ಪ್ರತಿಭಟನೆ ಎದುರಿಸಿದ್ದಾರೆ.
Last Updated 20 ಮೇ 2024, 13:58 IST
ಮಂಡಿ: ಕಂಗನಾ ರನೌತ್‌ಗೆ ಕಪ್ಪು ಬಾವುಟ ಪ್ರದರ್ಶನ
ADVERTISEMENT