ಉನ್ನಾವೊದಲ್ಲಿ ಪ್ರತಿ ಮತಕ್ಕೆ ₹ 2.14
ಆಯೋಗದ ಮಾಹಿತಿ ಪ್ರಕಾರ, ಪಂಜಾಬ್‌ನ ಫರೀದ್ ಕೋಟ್ ಕ್ಷೇತ್ರದಲ್ಲಿ ಪ್ರತಿ ಮತಕ್ಕೆ ₹ 26.34 ಖರ್ಚು ಮಾಡಲಾಗಿದೆ. ಇದು, ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಅತ್ಯಂತ ಕಡಿಮೆ ಖರ್ಚಾಗಿರುವುದು, ಉತ್ತರ ಪ್ರದೇಶದ ಉನ್ನಾವೊ ಕ್ಷೇತ್ರದಲ್ಲಿ. ಇಲ್ಲಿ ಪ್ರತಿ ಮತಕ್ಕೆ ಖರ್ಚಾಗಿರುವುದು ಕೇವಲ ₹ 2.14. ಫರೀದ್‌ಕೋಟ್‌ನಲ್ಲಿ ಕಣದಲ್ಲಿದ್ದವರು ಖರ್ಚು ಮಾಡಿದ್ದ ಒಟ್ಟು ಮೊತ್ತ ₹ 4.19 ಕೋಟಿಯಾದರೆ, ಉನ್ನಾವೊದಲ್ಲಿ ಖರ್ಚಾಗಿದ್ದು ₹ 50.17 ಲಕ್ಷವಷ್ಟೇ!