2026ರ ಟಿ20 ವಿಶ್ವಕಪ್ನ ಬಾಂಗ್ಲಾದೇಶದ ಲೀಗ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಐಸಿಸಿಗೆ ಮನವಿ ಮಾಡಿದೆ.

ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶವು ಭಾರತದಲ್ಲಿ 4 ಲೀಗ್ ಪಂದ್ಯಗಳನ್ನು ಆಡಲಿದೆ. ಅದರಲ್ಲಿ 3 ಪಂದ್ಯಗಳು ಕೋಲ್ಕತ್ತಾ ಹಾಗೂ ಒಂದು ಪಂದ್ಯವು ಮುಂಬೈನಲ್ಲಿ ನಡೆಯಬೇಕಿತ್ತು. ಆದರೆ ಇದೀಗ ಆ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಲಾಗಿದೆ ಎಂದು ಬಿಸಿಬಿ ಅಧ್ಯಕ್ಷ ಆಸಿಫ್ ನಜ್ರುಲ್ ಹೇಳಿದ್ದಾರೆ.
.ಬಿಸಿಸಿಐ ಸೂಚನೆ: ಬಾಂಗ್ಲಾ ವೇಗಿ ಮುಸ್ತಫಿಝರ್ ಕೈಬಿಟ್ಟ ಕೊಲ್ಕತ್ತ ನೈಟ್ ರೈಡರ್ಸ್.
2026ರ ಐಪಿಎಲ್ ಮಿನಿ ಹರಾಜಿನಲ್ಲಿ ಕೆಕೆಆರ್ ತಂಡವು ಪೈಪೋಟಿಯ ನಡುವೆ ₹9.20 ಕೋಟಿ ಮೊತ್ತಕ್ಕೆ (ಮೂಲಬೆಲೆ ₹2 ಕೋಟಿ) ಮುಸ್ತಫಿಝುರ್ ಅವರನ್ನು ತನ್ನ ಖರೀದಿಸಿತ್ತು. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಇದೀಗ ಬಿಸಿಸಿಐ ಸೂಚನೆ ಮೇರೆಗೆ ತಂಡದಿಂದ ಮುಸ್ತಫಿಝುರ್ ಅವರನ್ನು ಕೈಬಿಡಲಾಗಿದೆ. ಅದರ ನಂತರ, ಬಿಸಿಬಿ ಈ ಮನವಿ ಮಾಡಿದೆ.

ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರ ಸ್ಥಗಿತ ?

‘ಬಾಂಗ್ಲಾದೇಶದಲ್ಲಿ 2026ರ ಐಪಿಎಲ್ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಮನವಿ ಮಾಡಲಾಗಿದ್ದು, ಬಾಂಗ್ಲಾದೇಶದ ಕ್ರಿಕೆಟ್, ಕ್ರಿಕೆಟಿಗರು ಅಥವಾ ಬಾಂಗ್ಲಾದೇಶಕ್ಕಾಗುವ ಅವಮಾನವನ್ನು ನಾವು ಸಹಿಸುವುದಿಲ್ಲ’ ಎಂದು ಆಸಿಫ್ ನಜ್ರುಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.