ವಡೋದರಾ: ಹಾಲಿ ಚಾಂಪಿಯನ್ ಸಿಂಡ್ರೆಲಾ ದಾಸ್, ಅಗ್ರ ಶ್ರೇಯಾಂಕದ ದಿವ್ಯಾಂಶಿ ಭೌಮಿಕ್ ಅವರು ಭಾನುವಾರ ವಿಶ್ವ ಟೇಬಲ್ ಟೆನಿಸ್ ಯೂತ್ ಕಂಟೆಂಡರ್ನಲ್ಲಿ 19 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ನಲ್ಲಿ ಗೆಲುವಿನೊಡನೆ ಅಭಿಯಾನ ಆರಂಭಿಸಿದರು.

ಶನಿವಾರ 17 ವರ್ಷದೊಳಗಿನ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಿಂಡ್ರೆಲಾ ಅವರು ಗುಂಪು 3ರ ಪಂದ್ಯದಲ್ಲಿ 11-7, 11-7, 11-8 ರಿಂದ ಅರ್ಚಿಸ್ಮಿತಾ ಮಹಾತೊ ಅವರನ್ನು ಮಣಿಸಿ ಶುಭಾರಂಭ ಮಾಡಿದರು. ದಿವ್ಯಾಂಶಿ ಅವರು ಗುಂಪು 1ರ ಪಂದ್ಯದಲ್ಲಿ ಶ್ರೇಷ್ಠಾ ಕೊಂಥಮ್ ಅವರನ್ನು ಸೋಲಿಸಿದರು.

ಜಪಾನಿನ ಮಿಕು ಮಾತ್ಸುಶಿಮಾ ಅವರು ಗುಂಪು 2ರ ಪಂದ್ಯದಲ್ಲಿ 11-3, 11-6, 11-4ರಿಂದ ಗುಂಜಾನ್ ಕುಮಾರ್ ವಿರುದ್ಧ ಗೆದ್ದರು.

ಬಾಲಕರ ಸಿಂಗಲ್ಸ್ನಲ್ಲೂ ಅಗ್ರ ಶ್ರೇಯಾಂಕಿತ ಆಟಗಾರರು ತಮ್ಮ ಗುಂಪುಗಳಲ್ಲಿ ತಲಾ ಎರಡು ಗೆಲುವಿನೊಡನೆ ನಾಕೌಟ್ ಸ್ಥಾನವನ್ನು ಖಚಿತಪಡಿಸಿಕೊಂಡರು.

15 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ನಲ್ಲೂ ಅಗ್ರ ಶ್ರೇಯಾಂಕಿತರು ತಮ್ಮ ಗುಂಪುಗಳಲ್ಲಿ ನಿರಾಯಾಸ ಗೆಲುವು ಸಾಧಿಸಿ, ನಾಕೌಟ್ ಹಂತಕ್ಕೆ ಮುನ್ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.