ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆಯು ಮಂದಗತಿಗೆ ತಿರುಗಿದೆ ಎಂಬ ಕಳವಳ ವ್ಯಾಪಕವಾಗಿ ಇರುವ ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಕಡಿತ ಮಾಡುವುದು ನಿರೀಕ್ಷಿತವೇ ಆಗಿತ್ತು. ರೆಪೊ ದರವು ಶೇಕಡ 6.5ರಷ್ಟು ಇದ್ದಿದ್ದನ್ನು ಶೇ 6.25ಕ್ಕೆ ಇಳಿಕೆ ಮಾಡುವ ತೀರ್ಮಾನವನ್ನು ಈಚೆಗೆ ನಡೆದ ಎಂಪಿಸಿ ಸಭೆಯು ಕೈಗೊಂಡಿದೆ. ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೆಪೊ ದರವನ್ನು ಆರ್ಬಿಐ ತಗ್ಗಿಸಿದೆ. ಸಂಜಯ್ ಮಲ್ಹೋತ್ರಾ ಅವರು ಆರ್ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ನಂತರದ ಮೊದಲ ಎಂಪಿಸಿ ಸಭೆ ಇದಾಗಿತ್ತು. ಹಣಕಾಸಿನ ವಿಚಾರದಲ್ಲಿ ತಟಸ್ಥ ನಿಲುವನ್ನು ಮುಂದುವರಿಸಿಕೊಂಡು ಹೋಗಲು ಸಮಿತಿಯು ಸರ್ವಾನು ಮತದಿಂದ ನಿರ್ಣಯಿಸಿದೆ. ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆ ದರದ ಅಂದಾಜನ್ನು ತಗ್ಗಿಸಲಾಗಿದ್ದು, 2024–25ರಲ್ಲಿ ಬೆಳವಣಿಗೆ ದರವು ಶೇಕಡ 6.4ರಷ್ಟು ಇರಲಿದೆ ಎಂದು ಹೇಳಲಾಗಿದೆ. ಬೆಳವಣಿಗೆ ದರವು ಅಂದಾಜಿನಂತೆಯೇ ಇದ್ದರೆ, ಅದು ನಾಲ್ಕು ವರ್ಷಗಳ ಕನಿಷ್ಠ ಮಟ್ಟವಾಗಲಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಕಳೆದ ಬಾರಿ ಎಂಪಿಸಿ ಸಭೆ ಸಂದರ್ಭದಲ್ಲಿ ಶೇ 6.2ರಷ್ಟು ಇದ್ದಿದ್ದು ಡಿಸೆಂಬರ್ನಲ್ಲಿ ಶೇ 5.2ಕ್ಕೆ ತಗ್ಗಿದೆ. ಸಮಿತಿಯು ರೆಪೊ ದರವನ್ನು ತುಸು ಕಡಿಮೆ ಮಾಡಿರುವುದನ್ನು ಗಮನಿಸಿದರೆ, ರೆಪೊ ಅಸ್ತ್ರವನ್ನು ಬಳಸಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆರ್ಬಿಐ ಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಸಭೆಯ ನಂತರ ಗವರ್ನರ್ ಆಡಿರುವ ಮಾತುಗಳು ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರದ ಕುರಿತಾಗಿ ಇವೆ. ಆದರೆ ಅವರು ಹಣದುಬ್ಬರವನ್ನು ಶೇ 4ಕ್ಕೆ ಮಿತಿಗೊಳಿಸುವ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ಅಂದರೆ, ಹಣದುಬ್ಬರವನ್ನು ಆ ಮಟ್ಟದಲ್ಲಿ ಇರಿಸುವ ಬದಲು ಶೇ 2ರಿಂದ ಶೇ 6ರ ನಡುವಿನ ಮಟ್ಟದಲ್ಲಿ ಇರಿಸಲು ಆರ್ಬಿಐ ಯತ್ನಿಸಬಹುದು ಎಂಬುದನ್ನು ಅವರ ಮಾತುಗಳು ಸೂಚಿಸುತ್ತಿರಬಹುದು. ಬೆಳವಣಿಗೆ ಹಾಗೂ ಹಣದುಬ್ಬರ ನಿಯಂತ್ರಣ ಕುರಿತು ಪ್ರತಿಕ್ರಿಯಿಸುವಾಗ ಗವರ್ನರ್ ಮಲ್ಹೋತ್ರಾ ಅವರು, ‘ಹಣದುಬ್ಬರ ನಿಯಂತ್ರಣದ ಚೌಕಟ್ಟಿನಲ್ಲಿ ಹೊಂದಾಣಿಕೆಗೆ ಇರುವ ಅವಕಾಶಗಳನ್ನು ಕೇಂದ್ರೀಯ ಬ್ಯಾಂಕ್ ಬಳಸಿಕೊಳ್ಳಲಿದೆ’ ಎಂದು ಹೇಳಿದ್ದಾರೆ. ಚಿಲ್ಲರೆ ಹಣದುಬ್ಬರ ದರವು ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗುತ್ತದೆ, ಅದು 2025–26ರಲ್ಲಿ ಶೇ 4.2ರ ಮಟ್ಟಕ್ಕೆ ಬರಬಹುದು ಎಂದು ಸಮಿತಿಯು ನಿರೀಕ್ಷಿಸಿದೆ. ಮುಂಬರುವ ಮುಂಗಾರು ಹಂಗಾಮಿನಲ್ಲಿ ಮಳೆಯು ವಾಡಿಕೆಯಂತೆ ಸುರಿದರೆ, ಆಹಾರ ಧಾನ್ಯಗಳು ಹಾಗೂ ತರಕಾರಿಗಳ ಬೆಳೆಯು ಚೆನ್ನಾಗಿ ಆದರೆ ಈ ನಿರೀಕ್ಷೆ ಸತ್ಯ ವಾಗಬಹುದು. ಆಹಾರ ವಸ್ತುಗಳ ಬೆಲೆಯಲ್ಲಿ ಇಳಿಕೆ ಕಂಡುಬಂದರೆ ಒಟ್ಟಾರೆ ಹಣದುಬ್ಬರ ಪ್ರಮಾಣವು ಒಂದಿಷ್ಟು ತಗ್ಗಬಹುದು. ಇವೆಲ್ಲ ಅಂದಾಜುಗಳಿಗೆ ಒಂದಿಷ್ಟು ಆಧಾರಗಳು ಇವೆ. ಆದರೆ, ಅರ್ಥವ್ಯವಸ್ಥೆಯ ಬೆಳವಣಿಗೆ ದರವು ಪ್ರಸಕ್ತ ಹಣಕಾಸು
ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಇಳಿಕೆ ಕಂಡಿದ್ದನ್ನು ಗಮನಿಸಿ, ಬೆಳವಣಿಗೆಗೆ ಇಂಬು ಕೊಡುವ ಉದ್ದೇಶದಿಂದ ರೆಪೊ ದರ ತಗ್ಗಿಸುವ ತೀರ್ಮಾನಕ್ಕೆ ಆರ್ಬಿಐ ಬಂದಿರಬಹುದು. ರೆಪೊ ದರ ತಗ್ಗಿಸಿದ ಪರಿಣಾಮವಾಗಿ ಜನರ ಕೈಯಲ್ಲಿ ತುಸು ಹೆಚ್ಚು ಹಣ ಉಳಿಯುತ್ತದೆ, ಅದು ಬೇಡಿಕೆ ಹೆಚ್ಚಿಸಲು ನೆರವಾಗುತ್ತದೆ, ವ್ಯವಸ್ಥೆಯಲ್ಲಿ ಹಣದ ಹರಿವು ತುಸುಮಟ್ಟಿಗೆ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಈಗ ಇದೆ.

ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿನ ಅನಿಶ್ಚಿತತೆಗಳು, ಡಾಲರ್ ಬಲಗೊಳ್ಳುತ್ತಿರುವುದು ಮತ್ತು ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿಯುತ್ತಿರುವ ಸವಾಲುಗಳನ್ನು ಗವರ್ನರ್ ಉಲ್ಲೇಖಿಸಿದ್ದಾರೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ಅಸ್ಥಿರತೆಯೂ ರೆಪೊ ದರ ಇಳಿಕೆಗೆ ಒಂದು ಕಾರಣವಾಗಿರ ಬಹುದು. ತಾನು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡುವುದು ಸ್ಥಿರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಮತ್ತು ಭಾರತದ ರೂಪಾಯಿಯ ವಿನಿಮಯ ಮೌಲ್ಯವು ಮಾರುಕಟ್ಟೆ ಶಕ್ತಿಗಳಿಂದ ತೀರ್ಮಾನವಾಗುತ್ತದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ. ರೂಪಾಯಿಯ ಮೌಲ್ಯವು ತಾನಾಗಿಯೇ ಒಂದು ಮಟ್ಟವನ್ನು ಕಂಡುಕೊಳ್ಳಲು ಆರ್ಬಿಐ ಅನುವು ಮಾಡಿಕೊಡಬಹುದು ಎಂಬ ಸೂಚನೆ ಇದೆ. ಹಲವು ಅಂದಾಜುಗಳನ್ನು ಆಧರಿಸಿ ಆರ್ಬಿಐ ರೆಪೊ ದರ ತಗ್ಗಿಸುವ ತೀರ್ಮಾನ ಮಾಡಿದೆ. ಈ ತೀರ್ಮಾನವು ಪೂರ್ಣ ಪ್ರಮಾಣದಲ್ಲಿ ಫಲ ನೀಡಬೇಕು ಎಂದಾದರೆ ಅಂದಾಜುಗಳೆಲ್ಲ ನಿಜವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.