ಅನೇಕರು ತಮ್ಮ ಕಾಲುಗಳಿಗೆ ಕಪ್ಪು ದಾರ ಕಟ್ಟುತ್ತಾರೆ. ಅದರಲ್ಲಿಯೂ ಮಕ್ಕಳ ಕೈ, ಕುತ್ತಿಗೆ ಹಾಗೂ ಸೊಂಟಕ್ಕೆ ಕಪ್ಪು ದಾರ ಕಟ್ಟಲಾಗುತ್ತದೆ. ಇದನ್ನು ಕಟ್ಟುವುದಕ್ಕೆ ಕಾರಣವೇನು? ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
.ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತಂತೆ ಚಂದ್ರಗ್ರಹ: ಜ್ಯೋತಿಷ ಹೇಳೋದೇನು? .

ವಾಸ್ತವವಾಗಿ ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ಶನಿ ದೋಷದ ಪ್ರಭಾವ ಕಡಿಮೆಯಾಗುತ್ತದೆ. ಆದ್ದರಿಂದ ಶನಿವಾರ ಶನಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಶುಭವಾಗಲಿದೆ ಎಂಬ ನಂಬಿಕೆ ಇದೆ.

ಜಾತಕಕ್ಕೆ ಅನುಸಾರವಾಗಿ ರಾಹು ಕೇತುವಿನ ದೋಷವಿದ್ದರೆ, ಕಪ್ಪು ದಾರ ಧರಿಸುವುದರಿಂದ ಪರಿಹಾರ ಸಿಗುತ್ತದೆ. ಇದರಿಂದ ವೈವಾಹಿಕ ಜೀವನ ಹಾಗೂ ಆರ್ಥಿಕ ಸಮಸ್ಯೆಯೂ ಬಗೆ ಹರಿಯುತ್ತದೆ.

ಕಪ್ಪು ದಾರವನ್ನು ಪುರುಷರು ಬಲಗಾಲಿಗೆ ಹಾಗೂ ಹೆಣ್ಣು ಮಕ್ಕಳು ಎಡಗಾಲಿಗೆ ಕಟ್ಟಿಕೊಳ್ಳುವುದು ಒಳಿತು ಎಂಬ ನಂಬಿಕೆ ಇದೆ.

ಚಿಕ್ಕ ಮಕ್ಕಳು ವಿನಾಕಾರಣ ಅಳುತ್ತಿದ್ದರೆ, ಪದೇ ಪದೇ ಅನಾರೋಗ್ಯಕ್ಕೆ ತುತ್ತಾದಾಗ ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಕಪ್ಪು ದಾರವು ದೃಷ್ಟಿ ನಿವಾರಣೆ ಮಾಡುತ್ತದೆ ಎಂಬ ನಂಬಿಕೆ ಇದೆ.

ಕಪ್ಪು ದಾರ ಕಟ್ಟಲು ಸಾಂಪ್ರದಾಯಿಕ ಸಲಹೆಗಳು:

ಕಪ್ಪು ದಾರದ ಸುತ್ತಲೂ 9 ಗಂಟು ಹಾಕಿ ನಂತರ ಧರಿಸಬೇಕು.

ಕಪ್ಪು ದಾರ ಧರಿಸುವ ಮೊದಲು ದಾರವನ್ನು ಶನಿ ಅಥವಾ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸುವುದು ಸೂಕ್ತ. ಇದರಿಂದ ದಾರಕ್ಕೆ ಸಕಾರಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಕಪ್ಪುದಾರವನ್ನು ಶುಭ ಮುಹೂರ್ತದಲ್ಲಿ ಧರಿಸಿದರೆ ಉತ್ತಮವೆಂದು ಜ್ಯೋತಿಷ ಹೇಳುತ್ತದೆ.

ತೀವ್ರ ಆರೋಗ್ಯ ಸಮಸ್ಯೆ ಇದ್ದವರು ಆಂಜನೇಯನಿಗೆ ಪೂಜಿಸಿದ ನಂತರ ಕುತ್ತಿಗೆಗೆ ಕಪ್ಪುದಾರ ಕಟ್ಟುವುದು ಒಳಿತು.

ಕಪ್ಪುದಾರ ಕಟ್ಟಿಕೊಂಡ ಮೇಲೆ ರುದ್ರಗಾಯಿತ್ರಿ ಮಂತ್ರವನ್ನು ಪಠಿಸಬೇಕು.

’ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋರುದ್ರ ಪ್ರಚೋದಯಾತ್’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.