ಕ್ವಾಲಾಲಂಪುರ: ಒಲಿಂಪಿಯನ್ ಪಿ.ವಿ. ಸಿಂಧು ಹಾಗೂ ಚಿರಾಗ್ ಶೆಟ್ಟಿ–ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರು ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಸಿಂಗಲ್ಸ್ ಹಾಗೂ ಪುರುಷರ ಡಬಲ್ಸ್ನಲ್ಲಿ ಗುರುವಾರ ಕ್ವಾರ್ಟರ್ಫೈನಲ್ ಪ್ರವೇಶಿಸಿದರು. ಆದರೆ, ಪುರುಷರ ಸಿಂಗಲ್ಸ್ನಲ್ಲಿ ಭಾರತ ಹೋರಾಟ ಅಂತ್ಯಗೊಂಡಿತು.

ದೀರ್ಘ ಸಮಯದ ಬಳಿಕ ಸ್ಪರ್ಧಾ ಕಣಕ್ಕೆ ಮರಳಿರುವ ಸಿಂಧು ಅವರು 21–8, 21–13ರಿಂದ ನೇರ ಗೇಮ್ಗಳಲ್ಲಿ ಎಂಟನೇ ಶ್ರೇಯಾಂಕದ ಆಟಗಾರ್ತಿ ಟೊಮೊಕಾ ಮಿಯಾಝಾಕಿ ಅವರನ್ನು ಮಣಿಸಿದರು. 30 ವರ್ಷ ವಯಸ್ಸಿನ ಭಾರತದ ಆಟಗಾರ್ತಿ 33 ನಿಮಿಷ ನಡೆದ ಹಣಾಹಣಿಯಲ್ಲಿ ಜಪಾನ್ನ ಆಟಗಾರ್ತಿಯ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದರು.

ಸಿಂಧು ಅವರು ಎಂಟರ ಘಟ್ಟದಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ, ಜಪಾನ್ನ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ. ಮೂರು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಅವರು ಪ್ರಿಕ್ವಾರ್ಟರ್ಫೈನಲ್ನಲ್ಲಿ 21–11, 4–21, 21–17ರಿಂದ ಚೀನಾದ ಗಾವೊ ಫಾಂಗ್ ಜೀ ವಿರುದ್ಧ ಗೆಲುವು ಸಾಧಿಸಿದ್ದರು.

ಟೂರ್ನಿಯಲ್ಲಿ ಭಾರತಕ್ಕೆ ಪದಕದ ಭರವಸೆಯಾಗಿರುವ ಸಾತ್ವಿಕ್–ಚಿರಾಗ್ ಜೋಡಿಯು ಪುರುಷರ ಡಬಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ 21–18, 21–12ರಿಂದ ಆತಿಥೇಯ ರಾಷ್ಟ್ರದ ಜುನೈದಿ ಆರೀಫ್ ಹಾಗೂ ರಾಯ್ ಕಿಂಗ್ ಯಪ್ ಅವರನ್ನು ಸೋಲಿಸಿದರು. ವಿಶ್ವದ 17ನೇ ಕ್ರಮಾಂಕದ ಜುನೈದಿ–ರಾಯ್ ಜೋಡಿ 39 ನಿಮಿಷಗಳಲ್ಲಿ ಭಾರತದ ಜೋಡಿಗೆ ಮಣಿಯಿತು.

ವಿಶ್ವದ ಮಾಜಿ ನಂ.1 ಜೋಡಿ ಸಾತ್ವಿಕ್–ಚಿರಾಗ್ ಅವರು ಶುಕ್ರವಾರ ನಡೆಯಲಿರುವ ಕ್ವಾರ್ಟರ್ಫೈನಲ್ನಲ್ಲಿ ಇಂಡೊನೇಷ್ಯಾದ ಫಿಕ್ರಿ ಮುಹಮ್ಮದ್– ಫಜರ್ ಅಲ್ಫಿಯಾನ್ ಜೋಡಿಯನ್ನು ಎದುರಿಸಲಿದ್ದಾರೆ.

ಲಕ್ಷ್ಯ, ಆಯುಷ್ ನಿರ್ಗಮನ: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಹಾಗೂ ಉದಯೋನ್ಮುಖ ಆಟಗಾರ ಆಯುಷ್ ಶೆಟ್ಟಿ ಅವರು ಪ್ರಿಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.

ಅನುಭವಿ ಲಕ್ಷ್ಯ ಅವರು 20–22, 15–21ರಿಂದ ಹಾಂಗ್ಕಾಂಗ್ನ ಲೀ ಷ್ಯೂಕ್ ಯೂ ವಿರುದ್ಧ ಸೋತರು. ಕನ್ನಡಿಗ ಆಯುಷ್ ಅವರು 70 ನಿಮಿಷ ಹೋರಾಟ ತೋರಿ 18–21, 21–18, 12–21ರಿಂದ ಅಗ್ರ ಶ್ರೇಯಾಂಕದ ಆಟಗಾರ, ಚೀನಾದ ಶಿ ಯು ಕೀ ಅವರಿಗೆ ಮಣಿದರು.