ಈಗೆಲ್ಲಾ 30 ರಿಂದ 40 ವರ್ಷಗಳಿಗೊಮ್ಮೆ ಹೊಸ ಮನೆಯನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ 100 ವರ್ಷ ಪೂರೈಸಿದ ಮನೆ ಇದೆ. ಇಲ್ಲಿನ ಶಿವಗಂಗಾ ಜಿಲ್ಲೆಯ ಕಾರೈಕುಡಿ ಎಂಬಲ್ಲಿ, ಒಂದು ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಮನೆಯ ನಿರ್ಮಾಣಕ್ಕೆ 4 ವರ್ಷ ಸಂದಿದೆ. ಆದರೆ ಇಂದಿಗೂ ಈ ಮನೆ ಸದೃಢವಾಗಿದೆ ಎನ್ನುತ್ತವೆ ವರದಿಗಳು.

ಇತ್ತೀಚೆಗೆ ಈ ಮನೆಗೆ ನೂರು ವರ್ಷವಾದ ಹಿನ್ನೆಲೆ ಕುಟುಂಬದ 300 ಸದಸ್ಯರು ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ.

’ನಾವು ಜನರ ಲೆಕ್ಕವನ್ನು ತೆಗೆದುಕೊಂಡಿಲ್ಲ. ನಮ್ಮ ಪೂರ್ವಜರ ಮನೆಯ ಮುಂದೆ ನಾವು ಕ್ಲಿಕ್ಕಿಸಿದ ಫೋಟೊದಲ್ಲಿ ಎಷ್ಟು ಜನರಿದ್ದಾರೆ ಎಂದು ನೋಡಬಹುದು’ ಎಂದು ಕುಟುಂಬದ ಸದಸ್ಯ ಸಿ.ತಿರುಜ್ಞಾನನ್ ಅವರು ಹೇಳಿದ್ದಾರೆ.

ಮನೆಯ ನಿರ್ಮಾಣಕ್ಕೆ 4 ವರ್ಷ

ಈ ಮನೆಯನ್ನು ಕುಟುಂಬದ ಪೂರ್ವಜರಾದ ಪೆರಿಯಣ್ಣನ್ ಅಂಬಲಮ್ ಮತ್ತು ಅವರ ಕಿರಿಯ ಸಹೋದರ ಸುಬ್ಬಯ್ಯ ಅಂಬಲಮ್ ಅವರು 1922 ರಿಂದ 1926 ರ ಅವಧಿಯಲ್ಲಿ ನಿರ್ಮಿಸಿದ್ದರು. ಸುಮಾರು 4 ವರ್ಷಗಳ ಕಾಲ ನಿರ್ಮಾಣ ಮಾಡಿದ ಈ ಮನೆಯಲ್ಲಿ 30 ಕೊಠಡಿ ಹಾಗೂ 4 ಅಡುಗೆ ಮನೆಗಳಿವೆ.

’ನಮ್ಮ ಪೂರ್ವಜರು ಈ ಮನೆಯನ್ನು ನಿರ್ಮಿಸಿದಾಗ, 100 ವರ್ಷಗಳಾದರೂ ಈ ಮನೆ ಸದೃಢವಾಗಿರಬೇಕೆಂದು ಬಯಸಿದ್ದರು. ಅಲ್ಲದೇ ಎಲ್ಲರೂ ಅವಿಭಕ್ತ ಕುಟುಂಬದಲ್ಲಿ ವಾಸಿಸಬೇಕು ಎಂದು ಬಯಸಿದ್ದರು. ಆದರೆ ಇಂದಿಗೆ ಎಲ್ಲರೂ ದುಬೈ, ಮಲೇಷ್ಯಾ ಮತ್ತು ಕೆನಡಾದಲ್ಲಿ ನೆಲೆಯೂರಿದ್ದೇವೆ. ಈ ದಿನ ಎಲ್ಲರೂ ಒಟ್ಟಿಗೆ ಸೇರಿದ್ದೇವೆ‘ ಎಂದು ಕುಟುಂಬದ ಸದಸ್ಯ ತಿರುಜ್ಞಾನನ್ ಹೇಳಿದ್ದಾರೆ.

’ಇಂದು ಈ ಮನೆ ಇಲ್ಲದಿದ್ದರೆ, ನಮ್ಮ 300 ಜನರ ಕುಟುಂಬವು ಮತ್ತೆ ಒಂದೇ ಕಡೆ ಸೇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾವಿಸುತ್ತೇನೆ. 2016ರಲ್ಲಿ ನಮ್ಮ ಮನೆಯನ್ನು ನವೀಕರಣ ಮಾಡಿದೆವು. ಆ ಸಮಯದಲ್ಲಿ ನಮ್ಮ ಕುಟುಂಬದ ಕೆಲವರು ಸಮಾರಂಭಕ್ಕಾಗಿ ಮನೆಗೆ ಬಂದ್ದಿದ್ದರು. ಇದಾದ ಬಳಿಕ 10ವರ್ಷಗಳ ನಂತರ ಮನೆಯ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ನಾವು ನಿರ್ಧರಿಸಿದ್ದೇವು’ ಎಂದು ದುಬೈನಲ್ಲಿರುವ ಪೆರಿಯನ್ನನ್ ಅಂಬಲಮ್ ಅವರ ನಾಲ್ಕನೇ ತಲೆಮಾರಿನ ಸರವಣನ್ ಸೋಲೈಮಲೈ ಹೇಳಿದ್ದಾರೆ.
.ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’.
’ನಾನು ಈ ಮನೆಯಲ್ಲಿ ವೇಗವಾಗಿ ಓಡಾಡುತ್ತಿದ್ದೆ. ನನ್ನಅಯ್ಯ (ತಂದೆ) ನಾನು ಇಷ್ಟು ವೇಗವಾಗಿ ಓಡಾಡಿದರೆ, ಮನೆ ಹಾಳಾಗಬಹುದು ಎಂದು ನನ್ನನ್ನು ಗದರಿಸುತ್ತಿದ್ದರು. 50 ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಪ್ರಮುಖವಾಗಿ ಆಚರಣೆ ಮಾಡುತ್ತಿದ್ದ ನವರಾತ್ರಿ ಹಾಗೂ ಪೊಂಗಲ್ ನೆನಪಾದವು. ಇಂದಿಗೂ ಈ ಹಬ್ಬದಲ್ಲಿ ಪ್ರತಿ ವರ್ಷ ಕನಿಷ್ಠ 10 ದಿನ ಈ ಮನೆಯಲ್ಲಿ ಕಾಲ ಕಳೆಯುತ್ತೇನೆ’ ಎಂದು ಸರವಣನ್ ಅವರ 79 ವರ್ಷದ ತಾಯಿ ಲೀಲಾ ಸೋಲೈಮಲೈ ಹೇಳಿದ್ದಾರೆ.

ಸರವಣನ್ ಮಲೇಷ್ಯಾದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಸೈನ್ಯದೊಂದಿಗೆ ಇರುವ ಛಾಯಾಚಿತ್ರವಿದೆ. ’ಇಂದು ಒಂದು ಮನೆಯಲ್ಲಿ ಒಟ್ಟಿಗೆ 300 ಜನ ವಾಸಿಸುವುದು ಕಷ್ಟವಾಗಬಹುದು. ಆದರೆ ಇಂದಿಗೂ ಕಾರೈಕುಡಿಯಲ್ಲಿ ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಜನರಿದ್ದಾರೆ’ ನನ್ನ ತಂದೆ ಆಗಾಗ ವಂಶಾವಳಿಯ ವೃಕ್ಷವನ್ನು ವಿವರಿಸುತ್ತಿದ್ದರು. ಆದರೆ ನಾನು ನನ್ನ ಕುಟುಂಬದವರನ್ನು ಎಂದಿಗೂ ಭೇಟಿಯಾಗಿರಲಿಲ್ಲ. ಅವರನ್ನು ನೋಡಿಯೂ ಇರಲಿಲ್ಲ. ಆದರೆ ಈ ಸಂಭ್ರಮಾಚರಣೆಯಲ್ಲಿ ಎಲ್ಲರನ್ನೂ ಭೇಟಿ ಮಾಡಿದೆ’ ಎಂದು 21 ವರ್ಷದ ಅನ್ವಿತಾ .ಎಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.