ಚಂದ್ರನನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಮನೋಹರವಾದ ಚಂದ್ರ ಉರಿಯುವ ಬೆಂಕಿಯಾಗುವ ದುರ್ಭರತೆ ಜನ್ಮ ಕುಂಡಲಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಭಾರತೀಯ ಜ್ಯೋತಿಷ ವಿಜ್ಞಾನವು ಮನಸ್ಸಿಗೆ ಸಂಬಂಧಿಸಿದ ಅತಿರೇಕಗಳನ್ನು ಚಂದ್ರನ ಮೂಲಕ ವಿಶ್ಲೇಷಿಸುತ್ತದೆ. ಸಹಜ ಹಾಗೂ ಸಮತೋಲನವುಳ್ಳ ಮಾನಸಿಕ ದಾರ್ಡ್ಯತೆಯನ್ನು ಚಂದ್ರನ ಮೂಲಕ ಜೀವಿಗಳು ಹೇಗೆ ಪಡೆಯುತ್ತವೆ ಎಂಬುದನ್ನು ಸಮಂಜಸವಾಗಿ ಗುರುತಿಸಿ ಹೇಳುತ್ತದೆ.

ಇಮ್ರಾನ್ ಖಾನ್, ನರಸಿಂಹ ರಾವ್, ಟ್ರಂಪ್, ಪುಟಿನ್, ಸೌರವ್ ಗಂಗೂಲಿ, ನರೇಂದ್ರ ಮೋದಿ, ರಾಹುಲ್ ಗಾಂಧಿ, ಕ್ಸಿ ಜಿನ್ ಪಿಂಗ್, ಮನಮೋಹನ್ ಸಿಂಗ್, ದ್ರಾವಿಡ್, ಫೆಡರರ್ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಜನ್ಮ ಕುಂಡಲಿಯಲ್ಲಿ ಚಂದ್ರ ಗ್ರಹದ ಶಕ್ತಿ ಹಾಗೂ ಮಿತಿಗಳನ್ನು ಗಮನಿಸಿದರೆ ಇದು ನಿಜವೆಂದು ಅನಿಸುತ್ತದೆ. ಹಾಗಾದರೆ ಚಂದ್ರ ಗ್ರಹ ಒಬ್ಬ ವ್ಯಕ್ತಿಯ ಜೀವಿತದಲ್ಲಿ ಅಷ್ಟೊಂದು ಮಹತ್ವದ ಪಾತ್ರ ನಿರ್ವಹಿಸುತ್ತಾ? ಎಂಬುದಕ್ಕೆ ಉತ್ತರ ತಿಳಿಯೋಣ ಬನ್ನಿ.

ಹೌದು, ಚಂದ್ರನು ಒಬ್ಬರ ಜೀವನದ ಮೇಲೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾನೆ. ಬುದ್ಧಿ ಬಲ ಇರಬಹುದು. ಆದರೆ ಅದನ್ನು ಕಾರ್ಯಗತಗೊಳಿಸುವ ದಾರ್ಡ್ಯತೆ ಇರುತ್ತದೆ ಎಂದು ಹೇಳಲಾಗದು. ಅಂತರರಾಷ್ಟ್ರೀಯ ಕುಖ್ಯಾತಿಯ ಚಾರ್ಲ್ಸ್ ಶೋಭರಾಜ್ ಬುದ್ಧಿ ಬಲ, ಧೈರ್ಯ ಹೀಗೆ ಎರಡೂ ಇದ್ದರೂ ಬದುಕಿನ ಹೆಚ್ಚು ಸಮಯವನ್ನು ಜೈಲಿನಲ್ಲಿ ಕಳೆದಿರುವುದನ್ನು ಗಮನಿಸಬಹುದು. ಚಂದ್ರ ಗ್ರಹ ಅವನಿಗೆ ಧೈರ್ಯ ಹಾಗೂ ಬುದ್ಧಿ ಬಲವನ್ನು ದುಷ್ಟತನಕ್ಕಾಗಿಯೇ ಒದಗಿಸಿತು ಎಂಬುವುದು ಇಲ್ಲಿ ಗಮನಾರ್ಹವಾಗಿದೆ. 'ಚಂದ್ರಮಾ ಮನಸೋ ಜಾತಃ' ಎಂಬ ಮಾತು ನಮ್ಮ ವೇದಗಳಲ್ಲಿ ಬರುತ್ತದೆ. ಕಾಲ ಪುರುಷನ ಮನಸ್ಸಿನಿಂದ ಅಸ್ತಿತ್ವ ಪಡೆದವನೇ ಚಂದ್ರ ಎಂದು ಹೇಳಲಾಗುತ್ತದೆ. ಅರಿಷಡ್ವರ್ಗಗಳು ಇರದೆಯೇ ಒಬ್ಬ ಮನುಷ್ಯ ಪರಿಪೂರ್ಣನಾಗಲಾರ. ಒಂದು ವೇಳೆ ಅಳತೆ ತಪ್ಪಿದರೆ ರಾಕ್ಷಸನೇ ಆಗಿಬಿಡುತ್ತಾನೆ.
.ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.
ವೈದ್ಯನಾಗಲು ಹೊರಟವನಿಗೆ ದಾರಿ ತಪ್ಪಿತು:

ಪ್ರಖ್ಯಾತ ಹಿನ್ನೆಲೆಯುಳ್ಳ, ಬೆಂಗಳೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ಹುಡುಗ ವಸುಧೇಂದ್ರ ಏಕಾಏಕಿ ತನ್ನ ಓದಿಗೆ ಎಳ್ಳು ನೀರು ಬಿಟ್ಟು ಊರಿಗೆ ವಾಪಸಾಗಿ ಬಿಟ್ಟಿದ್ದ. ಈ ಪರೀಕ್ಷೆ ಓದಿ ಪಾಸಾಗುವುದು ತನ್ನಿಂದ ಆಗದು ಎಂದು ನಿರ್ಧರಿಸಿ ಮನೆಗೆ ಹೊರಟು ಬಂದಿದ್ದ. ಸಾಧ್ಯವೇ ಇಲ್ಲ, not possible, something is blocking me ಎಂದು ಹೇಳುತ್ತ ತನ್ನ ರೂಮಿನ ಬಾಗಿಲು ಹಾಕಿಕೊಂಡು ಮಲಗಿ ಯಾರು ಕರೆದರೂ ಹೊರಗೆ ಬರುತ್ತಲೇ ಇರಲಿಲ್ಲ. ಇದರಿಂದ ತಂದೆ ತಾಯಿ ಆತಂಕಗೊಂಡಿದ್ದರು. ಹಿಂದಿನ ಎಲ್ಲಾ ಸೆಮಿಸ್ಟರ್ನಲ್ಲಿ ಒಳ್ಳೆಯ ಅಂಕ ಪಡೆದು ಪಾಸಾಗಿದ್ದ ಮಗ ಮಂಕಾಗಿರುವುದನ್ನು ಕಂಡು ತಂದೆ ತಾಯಿಗಳಿಗೆ ಚಿಂತೆಯಾಯಿತು. ಮಗನನ್ನು ಹುರಿದುಂಬಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸಿದರು. ವಸುಧೇಂದ್ರನದು ಸಾಕಷ್ಟು ಪ್ರಭಾವಿ ಹಿನ್ನೆಲೆಯುಳ್ಳ ಕುಟುಂಬ. ಈ ಸಲುವಾಗಿ ಆಪ್ತತೆಯಿಂದ ಕಾಲೇಜಿನ ಆಡಳಿತ ಮಂಡಳಿ ಮಾನವೀಯ ನೆಲೆಯಲ್ಲಿ ಪ್ರಿನ್ಸಿಪಾಲರನ್ನೇ ವಸುಧೇಂದ್ರನ ಊರಿಗೆ ಕಳುಹಿಸಿದರು. ವಸುಧೇಂದ್ರ ಸಾಕಷ್ಟು ಒಳ್ಳೆಯ ಮಾರ್ಕ್ಸ್ ಪಡೆಯದೆ ಪಾಸಾಗಿ ಅಂತೂ ಎಂಬಿಬಿಎಸ್ ಡಿಗ್ರಿ ಕೂಡಾ ಪಡೆದುಕೊಂಡನು.

ಆದರೆ, ಅದೇನೋ, ಮತ್ತೆ ಮರುಕಳಿಸಿದ ಕಗ್ಗಂಟು ಮಾತ್ರ ಭಾರೀ ಬಿಗಿಯಾಗಿಯೇ ಉಳಿದಿತ್ತು. ಆತ್ಮ ವಿಶ್ವಾಸದ ಕೊರತೆ ವಸುಧೇಂದ್ರನಲ್ಲಿ ದೊಡ್ಡದಾದ ಮಟ್ಟದಲ್ಲಿ ತುಂಬಿಹೋಯ್ತು. ಮುಂದೆ ಓದುತ್ತೇನೆ, ವಿದೇಶಕ್ಕೆ ಹೋಗಿ ಓದುತ್ತೇನೆ, ಕೆಲಸಕ್ಕೆ ಸೇರುತ್ತೇನೆ, ನನ್ನದೇ ಕ್ಲಿನಿಕ್ ಪ್ರಾರಂಭಿಸುತ್ತೇನೆ, ಎಲ್ಲೋ ಇರುವ ದೂರದ ಆಶ್ರಮ ಸೇರುತ್ತೇನೆ. ಜೀವನದಲ್ಲಿ ಬಡವರ, ನಿರ್ಗತಿಕರ ಸೇವೆ ಮಾಡಿಕೊಂಡಿರುತ್ತೇನೆ. ಹೀಗೆ, ಇತ್ಯಾದಿ ವಸುಧೇಂದ್ರನ ಕನಸುಗಳು, ಮಹತ್ವಾಕಾಂಕ್ಷೆಯ ಪರಿಧಿಗಳು ವಿವಿಧ ರೀತಿಯಲ್ಲಿ ವಿಸ್ತರಿಸಿಕೊಳ್ಳಲು ಹೆಣಗುತ್ತಿತ್ತೇ ವಿನಃ ಯಾವುದನ್ನೂ ದೃಢವಾಗಿ ಮಾಡಲು ಬೇಕಾದ ಏಕಾಗ್ರತೆ ಕುಸಿಯತೊಡಗಿತ್ತು.

ಹೇಳದೆ ಕೇಳದೆ ಒಂದು ದಿನ ಮನೆ ಬಿಟ್ಟು ಹೊರಟು ಬಿಟ್ಟಿದ್ದ. ಹೊರಟ ಬಸ್ಸಿನಿಂದ ತಾನು ಹೋಗಬೇಕು ಎಂದು ನಿರ್ಧರಿಸಿದ. ಊರಿಗೆ ಹೋಗದೆ ನಡುವೆ ಎಲ್ಲೋ ಇಳಿದು ಕೈಯಲ್ಲಿ ಇದ್ದ ಸೂಟ್ ಕೇಸ್, ಕಂಪ್ಯೂಟರ್ ಇದ್ದ ಬ್ಯಾಕ್ ಪ್ಯಾಕ್ ಎಲ್ಲಾ ಎಸೆದು ಯಾವುದೋ ಊರಿಗೆ ಹೋಗಿ ಬಿಟ್ಟಿದ್ದ. ಪಾಲಕರು ಹೇಗೋ ಪರದಾಡಿ ನಂತರ ಮನೆಗೇನೋ ಕರೆತಂದರು.

ಹೀಗೆ ಕಥೆಗಳಂತೆ ಅನಿಸುವ ಈ ಎಲ್ಲ ಉಪದ್ವ್ಯಾಪಗಳನ್ನು ಕೇಳುತ್ತ ಹೋದರೆ ಸಾವಿರಾರು ಭಿನ್ನ ಬಗೆಗಳಲ್ಲಿ ಚಂದ್ರನ ಹೊಡೆತಗಳು ಇದ್ದಿರುತ್ತವೆ. ಇಲ್ಲಿ ಮನಸ್ಸಿನ ಉದ್ವೇಗ, ಉನ್ಮಾದ, ವಿಚಿತ್ರ ಮಾನಸಿಕ ಉಮ್ಮಳಗಳ ವಿಚಾರ ಸ್ಪಷ್ಟ. ಚಂದ್ರನ ವಿವಿಧ ಬಗೆಯ ವಿಕೃತಿಗಳಿಂದ ಇದು ಸಾಧ್ಯ. ಹಾಗಾದರೆ ಚಂದ್ರನ ಮೂಲಕ ಒಳಿತುಗಳೇ ಇಲ್ಲವೆ ಎಂದು ಕೇಳಿದರೆ ದೋಷ ರಹಿತ ಮನೋಹರತೆಯನ್ನು ಚಂದ್ರ ಪಡೆದನಾದರೆ ಅದ್ಭುತವಾದ ಯೋಗಗಳನ್ನು ಒದಗಿಸುವ ಧಾರಾಳಿಯೂ ಹೌದು ಈ ಚಂದ್ರ.

ಭಾರತೀಯ ವೇದ ಪರಂಪರೆ ಸೂರ್ಯ ಹಾಗೂ ಚಂದ್ರರನ್ನು ಜಗದ ಚಕ್ಷುಗಳು ಎಂದು ಪ್ರಶಂಸಿಸುತ್ತದೆ. ನಮ್ಮೆಲ್ಲರ ಜಾತಕ ಕುಂಡಲಿಯಲ್ಲಿ ಸೂರ್ಯ ಗ್ರಹ ಬಲಗಣ್ಣಿನ ಕಾರಕನಾದರೆ, ಚಂದ್ರ ಎಡಗಣ್ಣಿನ ಕಾರಕನಾಗುತ್ತಾನೆ. ಹೀಗಾಗಿ ಚಂದ್ರನ ವಿಷಯದ ಬಗೆಗಿನ ವಿಶ್ಲೇಷಣೆ ಬಗೆಗೂ ಸಾಕಷ್ಟು ಮಾಹಿತಿಯನ್ನು ಭಾರತೀಯ ಜ್ಯೋತಿಷ ವಿಜ್ಞಾನದಲ್ಲಿ ಒದಗಿಸಲು ಸಹಕರಿಸುತ್ತದೆ. ಚಂದ್ರ ವಿಶೇಷ ಮಟ್ಟದ ಅತ್ಯಂತ ಚಾಣಾಕ್ಷತೆಯನ್ನೂ ಅನುಗ್ರಹಿಸಬಲ್ಲ.

ರಾಜಯೋಗಕಾರಕ ಚಂದ್ರ

ನೇರವಾದ ಬೆಳಕನ್ನು ಒದಗಿಸುವ ಖಗೋಳ ಕಾಯನಾದ ಚಂದ್ರ, ಮೇಲ್ಮೈ ಸೂರ್ಯನ ಬೆಳಕನ್ನು ಪ್ರತಿಫಲಿಸಿಯೇ ಜೀವಿಗಳ ಒಳ್ಳೆಯ ಯೋಗಗಳಿಗೆ ಹಲವಾರು ವಿಧಗಳಲ್ಲಿ ಕಾರಣನಾಗುತ್ತಾನೆ. ಭೂಮಿಯ ಉಪಗ್ರಹವಾದರೂ ಇವನ ಅತ್ಯಂತ ಬೃಹತ್ ಪ್ರಮಾಣದ ಸಾಮಿಪ್ಯದಿಂದ ಭಾರತೀಯ ಜ್ಯೋತಿಷ ವಿಜ್ಞಾನದಲ್ಲಿ ಚಂದ್ರನನ್ನು ಗ್ರಹವೆಂದೇ ಪರಿಗಣಿಸುತ್ತಾರೆ. ಇತಿಹಾಸದಲ್ಲಿ ಅನೇಕ ವಿಕ್ಷಿಪ್ತ ವ್ಯಕ್ತಿಗಳು ಅಥವಾ ಸಮತೋಲನ ಹೊಂದಿದ ದೃಢ ಚಿತ್ತದ ವ್ಯಕ್ತಿಗಳು ಜಗತ್ತಿನ ಶ್ರೇಷ್ಠ ಆಡಳಿತಗಾರರಾಗಿ, ಇಲ್ಲಾ ಕಟುಕರಾಗಿ, ಹೃದಯ ಹೀನರಾಗಿ, ನಿರಂಕುಶ ಆಡಳಿತ ನಡೆಸಿ, ಜಾಗತಿಕ ಚರಿತ್ರೆಯಲ್ಲಿ ವೈಶಾಲ್ಯದ ಇಲ್ಲಾ ಸಂಕುಚಿತ ಮನೋಭಾವಗಳು ಮೇಳೈಸಿದ ವಿವಿಧ ಅಧ್ಯಾಯಗಳನ್ನು ದಾಖಲಿಸಿದ್ದಾರೆ.

ಬೇಕಿರದಷ್ಟು ಮೃದು ಹೃದಯಿಗಳಾಗಿ (ಚಂದ್ರ ಗ್ರಹದ ಕಾರಣದಿಂದಲೇ) ತೀರಾ ದುರ್ಬಲ ಆಡಳಿತಗಾರ ಎಂಬ ಕುಖ್ಯಾತಿಗೆ ಒಳಗಾದವರೂ ಇದ್ದಾರೆ. ಯುದ್ಧಗಳ ಮೂಲಕ ಇನ್ನಿಲ್ಲದ ರಕ್ತಪಾತ ನಡೆಸಿ ಅಂತ್ಯದಲ್ಲಿ ಸೋಲಿಸಲ್ಪಟ್ಟಾಗ ಆತ್ಮಹತ್ಯೆ ಮಾಡಿಕೊಂಡ ಕುಖ್ಯಾತರೂ ಇದ್ದಾರೆ. ಭಾರತದ ಚರಿತ್ರೆಗಳು, ಜಾಗತಿಕ ಚರಿತ್ರೆಗಳು ವಿವಿಧ ಬಗೆಯ ಮಹಾರಾಜರುಗಳ ಬಗ್ಗೆ, ಚಕ್ರವರ್ತಿಗಳ ಬಗ್ಗೆ ವಿವರಿಸುತ್ತವೆ. ಇಂದಿನ ಆಧುನಿಕ ಕಾಲದಲ್ಲೂ ಅನಾಗರಿಕ ನಡೆ ಹಾಗೂ ನುಡಿಗಳೊಂದಿಗೆ ಕಿರಿಕಿರಿ ಹುಟ್ಟಿಸುವ ಆಡಳಿತಗಾರರನ್ನು ಕಾಣಿಸುತ್ತವೆ.

ಮನೋಹರ ರೂಪ, ಲಾವಣ್ಯ

ನೇರವಾಗಿ ಹೆಸರಿಸಬೇಕಾಗಿಲ್ಲ. ಆದರೆ ಮನೋಹರ ರೂಪ ಪಡೆದ ಪುರುಷರು ಹಾಗೂ ರೂಪ ಲಾವಣ್ಯದ ಮಹಿಳೆಯರಿಗೆ ಈ ಚಂದ್ರ ಗ್ರಹ ಕಾರಣವಾಗುತ್ತದೆ ಎಂದರೆ ನಂಬಬೇಕು. ಮನೋಹರ ರೂಪ, ಲಾವಣ್ಯ ಒದಗಿಸಿದರೂ ಬುದ್ಧಿ ಬಲ ಶೂನ್ಯವಾಗಿಸುವ ಖಳ ನಾಯಕನೂ ಆಗುತ್ತಾನೆ ಪುರುಷ. ಹಾಗೆಯೇ ಸ್ತ್ರೀ ಅನುಪಮಾ ಸೌಂದರ್ಯದ ನಿಧಿಯಾಗಿಯೂ ವಿಚಿತ್ರವಾದ ಹೆಜ್ಜೆಗಳನ್ನು ಇರಿಸುವ ಗೋಜಲುಗಳನ್ನೂ ನಿರ್ಮಿಸುತ್ತಾಳೆ. ಕರ್ಕಾಟಕ ರಾಶಿಯ (Cancer) ಯಜಮಾನನಾಗಿ ಅನೇಕ ರೀತಿಯ ಆರೋಗ್ಯ ಸಂಪನ್ನತೆ ಒದಗಿಸುವ (ಅನೇಕ ಔಷಧೀಯ ಗುಣದ ಗಿಡ ಮೂಲಿಕೆಗಳನ್ನು ಸಂವೇದಿಸಿ,ಬೆಳೆಸುವ) ಅಮೃತ ಕುಂಭವೇ ಆಗುತ್ತಾನೆ. ಸಕಾರಣವಾಗಿ ಇತರ ದುಷ್ಟ ಗ್ರಹಗಳ ಕಾರಣದಿಂದಾಗಿ ಕೆರಳಿ ನಿಂತರೆ ವಾಸಿ ಪಡಿಸಲಾಗದ ಅರ್ಬುದವನ್ನು ದೇಹಕ್ಕೆ ಅಂಟಿಸಬಲ್ಲ ನಿರ್ದಯಿಯೂ ಆಗುತ್ತಾನೆ.

ಕರ್ಕಾಟಕ ರಾಶಿ ಜಲ ತತ್ವದ ರಾಶಿಯಾಗಿ ಹೃದಯ, ಲಿವರ್, ಮೂತ್ರ ಪಿಂಡಗಳ ಕಾಯಿಲೆಗೆ ನಾಂದಿ ಹಾಡಬಲ್ಲವನೂ ಆಗಿದ್ದಾನೆ ಈ ತಂಪಾದ ಚಂದ್ರ. ಅಲರ್ಜಿಯ ವಿಚಾರಗಳಿಗೆ ಬುಧ ಗ್ರಹದ ಜತೆ ಸೇರಿ ಯದ್ವಾತದ್ವಾ ಪೀಡಕನಾಗಬಲ್ಲ. ಬಾಲ ಗ್ರಹ ಎಂದು ಹೆಸರಿಸಲ್ಪಡುವ ಎಳೆ ಮಕ್ಕಳ ಅನೇಕ ವ್ಯಾಧಿಗಳಿಗೆ ಚಂದ್ರನೇ ಹಲವು ಸಲ ಮೂಲವಾಗುತ್ತಾನೆ.

ಒಟ್ಟಿನಲ್ಲಿ ಸ್ವತಃ ತಾನೇ ಏಳು ಹಾಗೂ ಬೀಳುಗಳ ಪೌರ್ಣಿಮಯನ್ನು ಇಲ್ಲಾ ಅಮಾವಾಸ್ಯೆಗಳನ್ನು ನಿರ್ಮಿಸುವ ಚಂದ್ರ, ಭಾರತೀಯ ಜ್ಯೋತಿಷ ವಿಜ್ಞಾನ ಇವನ ಬಗ್ಗೆ ಕಟ್ಟಿಕೊಡುವ ವಿವರಗಳಿಂದಾಗಿ ನಾಯಕನೋ ಅಥವಾ ಖಳನಾಯಕನೋ ಎಂದು ನಿರ್ಧರಿಸಲು ಸೂಕ್ತ ವಿಶ್ಲೇಷಣೆಗಳು ಬೇಕು. ಮನೋ ಮಂಡಲದ ಸಂಪೂರ್ಣ ಸಮತೋಲನಕ್ಕೆ ಚಂದ್ರನ ಸುಹಾಸಕರತೆ ಸಂಪನ್ನವಾಗಿರಲೇ ಬೇಕು. ಅಂತೂ ಚಂದ್ರನ ಬಗ್ಗೆ ಹೇಳಿದಷ್ಟೂ ಕಡಿಮೆಯೇ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.