ನವದುರ್ಗೆಯರನ್ನು ಆರಾಧಿಸುವವರು ನವರಾತ್ರಿಯಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. ಜ್ಯೋತಿಷದ ಪ್ರಕಾರ ನವರಾತ್ರಿಯಲ್ಲಿ ಕೆಲವು ಆಹಾರಗಳನ್ನು ಸೇವಿಸಬಾರದು. ಹಾಗಾದರೆ ನವರಾತ್ರಿಯಲ್ಲಿ ಯಾವೆಲ್ಲಾ ಆಹಾರ ಸೇವಿಸಬಾರದು, ಯಾವ ಕೆಲಸ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ಯಾವ ಆಹಾರವನ್ನು ಸೇವಿಸಬಾರದು?

ನವರಾತ್ರಿ ಆಚರಣೆ ಮಾಡುವವರು ಮಾಂಸಹಾರ ಸೇವಿಸಬಾರದು ಹಾಗೂ ಮದ್ಯಪಾನ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ.

ಆದಷ್ಟು ದೇವಿಗೆ ಮನೆಯಲ್ಲಿಯೇ ತಯಾರಿಸಿದ ಸಿಹಿ ತಿಂಡಿಗಳನ್ನು ನೈವೇದ್ಯ ಮಾಡಿ ಸೇವಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.

.ನವರಾತ್ರಿ 5ನೇ ದಿನ ಸ್ಕಂದ ಮಾತೆಯ ಪೂಜೆ: ನೈವೇದ್ಯದಲ್ಲಿ ಈ ಆಹಾರಗಳಿರಲಿ.
ಈ ಕೆಲಸಗಳನ್ನು ಮಾಡಬಾರದು?

ನವರಾತ್ರಿಯನ್ನು ಶ್ರದ್ಧೆ ಭಕ್ತಿಯಿಂದ ದೇವಿಯನ್ನು ಆರಾಧಿಸಿದರೆ ಸಕಲವೂ ಸಿದ್ದಿಯಾಗುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ಸಾಧ್ಯವಾದಷ್ಟು ಶುಭ್ರವಾಗಿರಬೇಕು ಎಂದು ಜ್ಯೋತಿಷ ಹೇಳುತ್ತದೆ.

ನವರಾತ್ರಿ ಮುಗಿಯುವವರೆಗೂ ಉಗುರನ್ನು ಕತ್ತರಿಸದಿರುವುದು ಉತ್ತಮ ಎಂದು ಜ್ಯೋತಿಷದಲ್ಲಿ ತಿಳಿಸಿದೆ. ಒಂದು ವೇಳೆ ಕತ್ತರಿಸಿದರೆ ಅಶುಭ ಉಂಟಾಗಬಹುದು ಎಂದು ಹೇಳಲಾಗುತ್ತದೆ.

ಹಗಲಿನಲ್ಲಿ ಮಲಗುವುದರಿಂದ ನಿಮ್ಮ ಪುಣ್ಯಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ.

ಶುಭ ಫಲಗಳನ್ನು ಪಡೆಯಲು ಈ ರೀತಿ ಮಾಡಿ:

ಪ್ರತಿದಿನ ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟಿ ದೇವಿಯನ್ನು ಆರಾಧನೆ ಮಾಡಿ. ಮನೆಯ ಮುಂದೆ ಹಸುವಿನ ಸಗಣಿಯಿಂದ ಸಾರಿಸಿ, ರಂಗೋಲಿಯನ್ನು ಹಾಕಿ ದೀಪಾರಾಧನೆಯನ್ನು ಮಾಡುವುದು ಉತ್ತಮ.

ನಿತ್ಯ ಆಯಾ ದಿನದ ದೇವಿಯನ್ನು ಪೂಜಿಸಿ ನೈವೇದ್ಯ ಮಾಡಬೇಕು. ಸಾಧ್ಯವಾದರೆ ನೆರೆಹೊರೆಯವರಿಗೆ ಪ್ರಸಾದ ನೀಡುವುದು ಒಳ್ಳೆಯದು. ಪೂಜೆಯ ನಂತರ ಯಾವುದಾದರೂ ಒಂದು ದೇವಾಲಯಕ್ಕೆ ಭೇಟಿ ನೀಡಿದರೆ ಒಳಿತಾಗುತ್ತದೆ ಎಂದು ಜ್ಯೋತಿಷದಲ್ಲಿ ಸಲಹೆ ನೀಡಿದೆ.
.ನವರಾತ್ರಿ 5ನೇ ದಿನ | ಸ್ಕಂದ ಮಾತೆಯ ಪೂಜೆ ಹೀಗಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.