ಚೆನ್ನೈ: ಕರ್ನಾಟಕ ಪುರುಷರ ಮತ್ತು ಮಹಿಳಾ ತಂಡಗಳು, 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಶುಕ್ರವಾರ ಸೋಲನುಭವಿಸಿದವು. ಆದರೆ ಎರಡೂ ತಂಡಗಳು ಹೋರಾಟ ನೀಡಿದವು.

ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಚಾಂಪಿಯನ್ಷಿಪ್ನ ಪುರುಷರ ವಿಭಾಗದ ಎಂಟರ ಘಟ್ಟದ ಪಂದ್ಯದಲ್ಲಿ ಕರ್ನಾಟಕ 73–80 ಅಂಕಗಳಿಂದ ದೆಹಲಿ ತಂಡದ ಎದುರು ಪರಾಭವ ಅನುಭವಿಸಿತು. ವಿಜೇತ ತಂಡದ ಪರ ಜೀತೆಂದರ್ ಸಿಂಗ್ 26 ಪಾಯಿಂಟ್ಸ್ ಗಳಿಸಿ ಮಿಂಚಿದರು. ಕರ್ನಾಟಕ ತಂಡದ ಪರ ಸುಮಂತ್ ಸತ್ಯನಾರಾಯಣ 19 ಪಾಯಿಂಟ್ಸ್ ಗಳಿಸಿದರು.

ಕರ್ನಾಟಕ ವನಿತೆಯರು ಕೇವಲ ಒಂದು ಪಾಯಿಂಟ್ ಅಂತರದಿಂದ ಮಧ್ಯಪ್ರದೇಶದ ಎದುರು ನಿರಾಸೆ ಅನುಭವಿಸಿದರು. ಮಧ್ಯಪ್ರದೇಶ 64–63ರಲ್ಲಿ ಜಯಗಳಿಸಿತು. ಮಾನ್ವಿ ಶ್ರೀವಾಸ್ತವ ಅವರು ವಿಜೇತ ತಂಡದ ಪರ ಗಮನಸೆಳೆದರು.

ಕರ್ನಾಟಕ ತಂಡದ ಶ್ರುತಿ ಅರವಿಂದ್ (20), ಸಂಜನಾ ರಮೇಶ್ (14) ಮತ್ತು ಬಾಂಧವ್ಯಾ ಎಂ. (12) ಅವರ ಆಟ ಫಲ ನೀಡಲಿಲ್ಲ.

ಸೆಮಿಫೈನಲ್ ಪಂದ್ಯಗಳಲ್ಲಿ ಮಧ್ಯಪ್ರದೇಶ ತಂಡವು, ಕೇರಳ ವಿರುದ್ಧ; ಇಂಡಿಯನ್ ರೈಲ್ವೇಸ್ ತಂಡವು, ತಮಿಳುನಾಡು ವಿರುದ್ಧ ಆಡಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.