ಬೆಂಗಳೂರು: ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಾಗಲ್ ಅವರು ಇದೇ 5ರಂದು ಆರಂಭವಾಗಲಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಥಳೀಯ ತಾರೆ ಎಸ್.ಡಿ. ಪ್ರಜ್ವಲ್ ದೇವ್ ವಿರುದ್ಧ ಅಭಿಯಾನ ಆರಂಭಿಸುವರು.

ಕಬ್ಬನ್ ಪಾರ್ಕ್ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ 10ನೇ ಆವೃತ್ತಿಯ ಟೂರ್ನಿಯ ಡ್ರಾ ಕಾರ್ಯಕ್ರಮ ಶನಿವಾರ ನಡೆಯಿತು. ಎಟಿಪಿ ಚಾಲೆಂಜರ್ 125 ಹಂತದ ಟೂರ್ನಿ ಇದಾಗಿದ್ದು, ಸಿಂಗಲ್ಸ್ ಮುಖ್ಯಸುತ್ತಿನಲ್ಲಿ ಭಾರತದ ಆರು ಮಂದಿ ಕಣದಲ್ಲಿದ್ದಾರೆ.

ಪ್ರಜ್ವಲ್ ಸೇರಿದಂತೆ ದಕ್ಷಿಣೇಶ್ವರ ಸುರೇಶ್, ಮಾನಸ್ ಧಾಮ್ನೆ ಅವರು ವೈಲ್ಡ್ಕಾರ್ಡ್ ಪ್ರವೇಶ ಪಡೆದ
ವರು. ಕರಣ್ ಸಿಂಗ್, ಆರ್ಯನ್ ಶಾ ಕಣದಲ್ಲಿರುವ ಇತರ ಭಾರತೀಯರು. ಒಟ್ಟು 19 ದೇಶಗಳ ಆಟಗಾರರು ಸ್ಪರ್ಧೆಯಲ್ಲಿದ್ದಾರೆ.

ಅಗ್ರ ಶ್ರೇಯಾಂಕ ಪಡೆದಿರುವ ಪೆಡ್ರೊ ಮಾರ್ಟಿನೆಜ್ (ಸ್ಪೇನ್) ಅವರು ಆರಂಭಿಕ ಸುತ್ತಿನಲ್ಲಿ ಕ್ವಾಲಿಫೈಯರ್ ಆಟಗಾರನನ್ನು ಎದುರಿಸಲಿದ್ದಾರೆ. ಸ್ಪೇನ್ನ ಪೆಡ್ರೊ ಅವರು ವಿಶ್ವ ಕ್ರಮಾಂಕದಲ್ಲಿ 92ನೇ ಸ್ಥಾನದಲ್ಲಿದ್ದಾರೆ. . ಎರಡನೇ ಶ್ರೇಯಾಂಕದ ಹೆರಾಲ್ಡ್ ಮೇಯೊಟ್ (ಫ್ರಾನ್ಸ್) ಅವರು ರಷ್ಯಾದ ಪೀಟರ್ ಬಾರ್ ಬಿರ್ಯು
ಕೋವ್ ವಿರುದ್ಧ; ಮೂರನೇ ಶ್ರೇಯಾಂಕದ ಜೇ ಕ್ಲಾರ್ಕ್ (ಬ್ರಿಟನ್) ಅವರು ಫ್ರಾನ್ಸ್ನ ಮ್ಯಾಟಿಯೊ ಮಾರ್ಟಿನೊ ವಿರುದ್ಧ; ನಾಲ್ಕನೇ ಶ್ರೇಯಾಂಕದ ಲಾಯ್ಡ್ ಹ್ಯಾರಿಸ್ (ದಕ್ಷಿಣ ಆಫ್ರಿಕಾ) ಅವರು ಫೋರ್ಜ್ಟೆಕ್ ಜೊನಾಸ್ (ಝೆಕ್ ರಿಪಬ್ಲಿಕ್) ವಿರುದ್ಧ ಅಭಿಯಾನ ಆರಂಭಿಸುವರು.

ಡಬಲ್ಸ್ನಲ್ಲಿ ಶ್ರೀರಾಮ್ ಬಾಲಾಜಿ– ನೀಲ್ ನೀಲ್ ಓಬರ್ಲೀಟ್ನರ್ (ಭಾರತ–ಆಸ್ಟ್ರಿಯಾ) ಜೋಡಿ ಮತ್ತು ಅನಿರುದ್ಧ್ ಚಂದ್ರಶೇಖರ್–ಅರ್ಜುನ್ ಕೆ. (ಭಾರತ) ಜೋಡಿ ಕ್ರಮವಾಗಿ ಮೊದಲೆರಡು ಶ್ರೇಯಾಂಕ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.