ಲಂಡನ್: ಇತಿಹಾಸ ಪ್ರಸಿದ್ಧ ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತ ತಂಡದ ಆಟಗಾರ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಮಾಡುವಾಗ ಚೆಂಡು ಬಡಿದು ಗಾಯಗೊಂಡಿದ್ದಾರೆ.

ಪಂತ್ ಅವರ ಎಡಗೈ ತೋರುಬೆರಳಿಗೆ ಗಾಯವಾಗಿದೆ. ಇದರಿಂದಾಗಿ ಪಂತ್ ಅವರ ಬದಲಿಗೆ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

ಪಂದ್ಯದ 34ನೇ ಓವರ್ನಲ್ಲಿ ತಮ್ಮ ಎಡಬದಿಗೆ ಜಿಗಿದು ಚೆಂಡನ್ನು ಹಿಡಿತಕ್ಕೆ ಪಡೆಯುವ ಪ್ರಯತ್ನದಲ್ಲಿ ಪಂತ್ ಗಾಯಗೊಂಡಿದ್ದರು.

ಪಂತ್ ಅವರ ಗಾಯ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಹಿತಿ ನೀಡಿದೆ. ಪಂತ್ ಅವರು ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ತಿಳಿಸಿದೆ.

ಆದರೆ ಭಾರತದ ಬ್ಯಾಟಿಂಗ್ ವೇಳೆ ಪಂತ್ ಕ್ರೀಸಿಗಿಳಿಯುವರೇ ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಪಂತ್ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜ ದಾಳಿಯಲ್ಲಿ ಓಲಿ ಪೋಪ್ ಅವರ ಅತ್ಯುತ್ತಮ ಕ್ಯಾಚ್ ಪಡೆಯುವಲ್ಲಿ ಧ್ರುವ್ ಜುರೇಲ್ ಯಶಸ್ವಿಯಾಗಿದ್ದರು.
.ಬಾಝ್ಬಾಲ್ ಎಲ್ಲಿ? ಬೋರಿಂಗ್ ಟೆಸ್ಟ್; ಆಂಗ್ಲರನ್ನು ಕೆಣಕಿದ ಗಿಲ್, ಸಿರಾಜ್.IND vs ENG 2nd Test: ಆತಿಥೇಯರಿಗೆ ರೂಟ್ ಆಸರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.