‘ಛೇ, ಇವರಿಗೆಲ್ಲ ಸೂಕ್ಷ್ಮಗಳೇ ಗೊತ್ತಾಗಲ್ಲ’ ಫ್ಲಾರಿಡಾದ ದೊಡ್ಡ ಬಂಗಲೆಯಿಂದ ಹೀಗೆ ಗೊಣಗುತ್ತಾ ಹೊರಬಂದ ‘ಯಂಗ್’ ಸಂಸದ.

‘ಸಾರ್, ನೀವೇನ್ ಇಲ್ಲಿ? ಎಷ್ಟ್ ದಿನ ಆಯ್ತು ನಿಮ್ಮನ್ನ ನೋಡಿ. ಕೊನೆಗೂ ಅಮೆರಿಕದಲ್ಲಿ ನಿಮ್ಮ ದರ್ಶನ ಭಾಗ್ಯ ಸಿಗೋ ಹಾಗಾಯ್ತು’ ಖುಷಿಯಿಂದ ಹೇಳಿದ ಅನಿವಾಸಿ ಭಾರತೀಯ ಫ್ರೆಂಡ್.

‘ಏನ್ ಬಿಡ್ರೀ, ಈ ದೇಶದ ಅಧ್ಯಕ್ಷ ಟ್ರಂಪ್ಗೆ ಸ್ವಲ್ಪವೂ ಸಮಾಧಾನ ಅನ್ನೋದೇ ಇಲ್ವಲ್ರೀ…’

‘ಏನಾಯ್ತು ಸರ್?’

‘ನಮ್ ಲೀಡರ್ ಶಶಿ ತರೂರ್ ನೇತೃತ್ವದಲ್ಲಿ ನಾವೆಲ್ಲ ಇಲ್ಲಿಗೆ ಬಂದಿದ್ವಿ. ಬೆಳಿಗ್ಗೆ ಅವರ ಜೊತೆ ಮಾತಾಡ್ತಿದ್ದೆ. ಆ ಸಾಹೇಬ್ರು ಅದ್ಯಾವ ಇಂಗ್ಲಿಷ್ ಮಾತಾಡ್ತಾರೋ ನನಗಂತೂ ತಳ–ಬುಡ ಅರ್ಥಆಗಲಿಲ್ಲ. ನನ್ನ ಮಿತಿಯಲ್ಲಿ ನಾನೇ ಏನೋ ಅರ್ಥ ಮಾಡಿಕೊಂಡೆ. ಅದನ್ನ ಪರ್ಸನಲ್ ಆಗಿ ಭೇಟಿಯಾಗೇ ಹೇಳೋಣ ಅಂತ ಅಧ್ಯಕ್ಷರ ಮನೆಗೆ ಬಂದೆ.
ಮಾತು ಸ್ಟಾರ್ಟ್ ಮಾಡ್ತಿದ್ದಂಗೆ ನನ್ನನ್ನ ಹೊರಗೆ ಕಳಿಸಿಬಿಟ್ರು...’

‘ಅಂಥದ್ದೇನ್ ಹೇಳಿದ್ರಿ ಸಾರ್?’

‘ನೊಬೆಲ್ ಶಾಂತಿ ಅವಾರ್ಡ್ಗೆ ನಿಮ್ಮ ಹೆಸರನ್ನ ಶಿಫಾರಸು ಮಾಡಿ ಅಂತ ನೆತನ್ಯಾಹುಗೆ ಹೇಳಿದ್ದೇ ನಾನು ಅಂದೆ ಅಷ್ಟೇ, ಬೈದೇ ಬಿಡೋದಾ...
ಆಯಪ್ಪ ಇಂಡಿಯಾ– ಪಾಕ್ ವಾರ್ ನಿಲ್ಸಿದ್ದು ನಾನೇ ಅಂತ ಸುಳ್ ಸುಳ್ ಹೇಳಿದಾಗ ನಾವು
ಕೇಳಿಸಿಕೊಂಡಿರಲಿಲ್ವ...’

‘ಈಗೇನ್ ಮಾಡ್ತೀರಿ ಸರ್?’

‘ಹಿಂದಿಯಲ್ಲಿ ಖಂಡನಾ ಪತ್ರ ಬರೆದು ಅದನ್ನ ಎಕ್ಸ್ನಲ್ಲಿ ಪೋಸ್ಟ್ ಮಾಡ್ತೀನಿ’.

‘ಟ್ರಂಪ್ಗೆ ಹಿಂದಿ ಬರೋದೇ ಇಲ್ವಲ್ಲ?’

‘ಅದಕ್ಕೇ ಹಿಂದಿಯಲ್ಲಿ ಪೋಸ್ಟ್ ಮಾಡ್ತೀನಿ ಅಂದಿದ್ದು. ಟ್ರಂಪ್ಗೆ ಇಂಗ್ಲಿಷ್ ಮಾತ್ರ ಬರೋದಕ್ಕೆ ಮತ್ತು ಹಿಂದಿ ಬಾರದ ಕಾರಣಕ್ಕೆ ಅವರು ಅವಮಾನದಿಂದ ತಲೆ ತಗ್ಗಿಸಬೇಕು!’ ಕಾಲರ್ ಏರಿಸಿಕೊಂಡು ಹೊರಟರು ಯಂಗ್ ಎಂಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.