ನವದೆಹಲಿ: ಸೆಪ್ಟೆಂಬರ್ 13 ರಿಂದ 21ರವರೆಗೆ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ಗೆ 19 ಮಂದಿಯ ಭಾರತ ತಂಡವನ್ನು ಹೆಸರಿಸಲಾಗಿದ್ದು, ಜಾವೆಲಿನ್ ಥ್ರೊ ತಾರೆ ನೀರಜ್ ಚೋಪ್ರಾ ನೇತೃತ್ವ ವಹಿಸಲಿದ್ದಾರೆ.

ದೇಶದ ಇತಿಹಾಸದಲ್ಲೇ ಮೊದಲ ಬಾರಿ– ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಸೇರಿದಂತೆ ನಾಲ್ವರು ಪುರುಷರು ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಚಿನ್ ಯಾದವ್, ಯಶ್ವೀರ್ ಸಿಂಗ್ ಮತ್ತು ರೋಹಿತ್ ಯಾದವ್ ಇತರ ಮೂವರು. ಕೊನೆಯ ವಿಶ್ವ ಚಾಂಪಿಯನ್ಷಿಪ್ನಲ್ಲೂ ನಾಲ್ವರು ಅರ್ಹತೆ ಪಡೆದಿದ್ದರು. ಆದರೆ ಗಾಯಾಳಾಗಿದ್ದರಿಂದ ರೋಹಿತ್ ಹಿಂದೆಸರಿದಿದ್ದರು.

ಹಾಲಿ ಚಾಂಪಿಯನ್ ಆಗಿರುವ ಕಾರಣ, 27 ವರ್ಷ ವಯಸ್ಸಿನ ನೀರಜ್ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದಾರೆ.

ಅಥ್ಲೆಟಿಕ್ ಫೆಡರೇಷನ್ನ ಸೀನಿಯರ್ ಆಯ್ಕೆ ಸಮಿತಿಯ ಸಭೆಯ ನಂತರ ತಂಡ ಪ್ರಕಟಿಸಲಾಯಿತು. ತಂಡದಲ್ಲಿ ಐವರು ಮಹಿಳಾ ಅಥ್ಲೀಟುಗಳು ಸ್ಥಾನ ಪಡೆದಿದ್ದಾರೆ.

ಹಂಗರಿಯ ಬುಡಾಪೆಸ್ಟ್ನಲ್ಲಿ 2023ರಲ್ಲಿ ನಡೆದ ಈ ಹಿಂದಿನ ಆವೃತ್ತಿಯಲ್ಲಿ 28 ಮಂದಿಯ ತಂಡ ಭಾಗವಹಿಸಿತ್ತು.

20 ಕಿ.ಮೀ. ರೇಸ್ವಾಕರ್ ಆಕಾಶದೀಪ್ ಸಿಂಗ್ ಅವರು ಅರ್ಹತೆ ಪಡೆದಿದ್ದರೂ, ವೈದ್ಯಕೀಯವಾಗಿ ಫಿಟ್ ಆಗದ ಕಾರಣ ಸ್ಥಾನ ಪಡೆದಿಲ್ಲ. ಏಷ್ಯನ್ ಚಾಂಪಿಯನ್ ಆಗಿ ಅರ್ಹತೆ ಪಡೆದಿದ್ದ ನಂದಿನಿ ಅಗಸರ ಅವರು ಮೊಣಕೈ ನೋವಿನಿಂದ ಪೂರ್ಣ ಚೇತರಿಸಿಕೊಂಡಿಲ್ಲ.

3000 ಮೀ. ಸ್ಟೀಪಲ್ಚೇಸ್ ಓಟದ ಸ್ಟಾರ್ ಅಥ್ಲೀಟ್ ಅವಿನಾಶ್ ಸಾಬ್ಳೆ ಕೂಡ ಅರ್ಹತಾ ಮಟ್ಟ ಸಾಧಿಸಿದ್ದರೂ, ಜುಲೈನಲ್ಲಿ ಎಸಿಎಲ್ ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಲ್ಲ.

ವಿಶ್ವ ಚಾಂಪಿಯನ್ಷಿಪ್ ಸ್ಪರ್ಧೆಗಳಿಗೆ ಅರ್ಹತಾ ಮಾನದಂಡ ತಲುಪಲು ಆಗಸ್ಟ್ 24 ಗಡುವಾಗಿತ್ತು.

ಭಾರತ ತಂಡ

ಪುರುಷರು: ನೀರಜ್ ಚೋಪ್ರಾ, ಸಚಿನ್ ಯಾದವ್, ಯಶ್ವೀರ್ ಸಿಂಗ್ ಮತ್ತು ರೋಹಿತ್ ಯಾದವ್ (ಜಾವೆಲಿನ್), ಮುರಳಿ ಶ್ರೀಶಂಕರ್ (ಲಾಂಗ್ಜಂಪ್), ಗುಲ್ವೀರ್ ಸಿಂಗ್ (5000 ಮತ್ತು 10000 ಮೀ), ಪ್ರವೀಣ್ ಚಿತ್ರವೇಲ್ ಮತ್ತು ಅಬ್ದುಲ್ಲಾ ಅಬೂಬಕ್ಕರ್ (ಟ್ರಿಪಲ್ ಜಂಪ್), ಸರ್ವೇಶ್ ಅನಿಲ್ ಕುಶಾರೆ (ಹೈಜಂಪ್), ಅನಿಮೇಶ್ ಕುಜೂರ್ (200 ಮೀ.), ತೇಜಸ್ ಶಿರ್ಸೆ (110 ಮೀ. ಹರ್ಡಲ್ಸ್), ಸರ್ವಿನ್ ಸೆಬಾಸ್ಟಿಯನ್ (20 ಕಿ.ಮೀ. ರೇಸ್ ವಾಕ್), ರಾಮ್ ಬಾಬೂ ಮತ್ತು ಸಂದೀಪ್ ಕುಮಾರ್ (35 ಕಿ.ಮೀ. ರೇಸ್ ವಾಕ್).

ಮಹಿಳೆಯರು: ಪಾರುಲ್ ಚೌಧರಿ ಮತ್ತು ಅಂಕಿತಾ ಧ್ಯಾನಿ (3000 ಮೀ. ಸ್ಟೀಪಲ್ಚೇಸ್), ಅನ್ನು ರಾಣಿ (ಜಾವೆಲಿನ್), ಪ್ರಿಯಾಂಕಾ ಗೋಸ್ವಾಮಿ (35 ಕಿ.ಮೀ. ರೇಸ್ ವಾಕ್), ಪೂಜಾ (800 ಮೀ ಮತ್ತು 1500 ಮೀ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.