ವಾರ ಭವಿಷ್ಯ: 31-8-2025ರಿಂದ 6-9-2025 ರವರೆಗೆ
Published 30 ಆಗಸ್ಟ್ 2025, 13:49 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ನಿಮ್ಮ ಶಕ್ತಿಯನ್ನು ನಿಮಗಾಗಿ ಸರಿಯಾಗಿ ಬಳಸಿಕೊಳ್ಳಿರಿ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ಸಂಗಾತಿ ಕಡೆಯವರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸ್ವಲ್ಪ ಅಡ್ಡಿ ಬರಬಹುದು. ಸ್ಥಿರಾಸ್ತಿ ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ, ಆದರೆ ಹಣದ ಬಗ್ಗೆ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ಹೊಟ್ಟೆಗೆ ಸಂಬಂಧಿಸಿದ ಸ್ವಲ್ಪ ವ್ಯತ್ಯಾಸಗಳನ್ನು ಕಾಣಬಹುದು. ಸಂಗಾತಿಯು ನಿಮ್ಮೆಲ್ಲ ಕೆಲಸಗಳಿಗೆ ಬೆಂಗಾವಲಾಗಿ ಬರುವರು. ವಿದೇಶದಲ್ಲಿರುವವರಿಗೆ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನೆಡೆ ಆಗಬಹುದು. ನಿಂತಿದ್ದ ಕೃಷಿ ಚಟುವಟಿಕೆಗಳು ಪುನಃ ಆರಂಭವಾಗುತ್ತವೆ.
( ಅಶ್ವಿನಿ ಭರಣಿ ಕೃತಿಕ 1)
30 ಆಗಸ್ಟ್ 2025, 13:49 IST
ವೃಷಭ
ಬಹಳ ಗೌರವಾನ್ವಿತರಾಗಿ ನಡೆದುಕೊಳ್ಳುವಿರಿ. ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಆಸ್ತಿ ವ್ಯವಹಾರಗಳಲ್ಲಿ ಸ್ವಲ್ಪ ತಕರಾರುಗಳು ಬರಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಕಷ್ಟವಾಗಬಹುದು. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭವಿರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಕಸಿವಿಸಿಗಳಿದ್ದರೂ ಕೂಡ ತೊಂದರೆ ಇರುವುದಿಲ್ಲ.
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
30 ಆಗಸ್ಟ್ 2025, 13:49 IST
ಮಿಥುನ
ನಿಮ್ಮ ದೇಹ ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡುವಿರಿ. ಆದಾಯವು ಕಡಿಮೆ ಇರುತ್ತದೆ. ಬಂಧುಗಳಿಂದ ನಿರೀಕ್ಷೆಗೆ ಮೀರಿದ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಫಲಿತಾಂಶವಿರುತ್ತದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಅಷ್ಟು ಪ್ರಗತಿ ಇರುವುದಿಲ್ಲ. ನಿಮ್ಮ ಸಂಗಾತಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಉದ್ಯೋಗ ಸ್ಥಳದಲ್ಲಿದ್ದ ಹಿತಶತ್ರುಗಳು ಸ್ವಲ್ಪ ಕಡಿಮೆಯಾಗಬಹುದು. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಲಾಭವಿರುತ್ತದೆ.
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
30 ಆಗಸ್ಟ್ 2025, 13:49 IST
ಕರ್ಕಾಟಕ
ಆದಾಯವು ನಿರೀಕ್ಷೆಯ ಹತ್ತಿರ ಬರುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಹಣ ಈಗ ಬರುತ್ತದೆ. ಬಂಧುಗಳು ನಿಮ್ಮ ಒಳ್ಳೆಯ ಕಾರ್ಯಗಳಿಗೆ ಸಹಕಾರ ನೀಡುವರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಮುಂದೆ ಬರಲು ಅವಕಾಶ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಸಂಗಾತಿಯ ನಿಲುವುಗಳು ಕೆಲವೊಮ್ಮೆ ಭಿನ್ನವಾಗಬಹುದು. ರಾಜಕಾರಣಿಗಳಿಗೆ ಅನಿರೀಕ್ಷಿತ ಅಪವಾದದ ಸಾಧ್ಯತೆ ಇದೆ. ಕೆಲವರಿಗೆ ವಿದೇಶಕ್ಕೆ ಹೋಗಿ ಬರುವ ಯೋಗವಿದೆ.
( ಪುನರ್ವಸು 4 ಪುಷ್ಯ ಆಶ್ಲೇಷ)
30 ಆಗಸ್ಟ್ 2025, 13:49 IST
ಸಿಂಹ
ನಿಮ್ಮ ಕೆಲಸಗಳಲ್ಲಿ ನೀವು ಮುಳುಗಿರುವಿರಿ. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ಬಂಧುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ವೃತ್ತಿ ಸಂಬಂಧಿತ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಉತ್ತಮ ಫಲಿತಾಂಶ ಲಭಿಸುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣಬಹುದು. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆಯಾಗುತ್ತವೆ.
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
30 ಆಗಸ್ಟ್ 2025, 13:49 IST
ಕನ್ಯಾ
ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಬಂಧುಗಳ ನಡುವೆ ವಿಶ್ವಾಸವನ್ನು ಬೆಳೆಸಿಕೊಳ್ಳಲು ಪ್ರಯತ್ನಪಡುವಿರಿ. ಸ್ಥಿರಾಸ್ತಿ ಪಡೆಯಲು ಹಿರಿಯರಿಂದ ಈಗ ಸಹಾಯ ದೊರೆಯುತ್ತದೆ. ವಿದೇಶಿ ವ್ಯವಹಾರಗಳಿಂದ ಸಂಗಾತಿಗೆ ಸ್ವಲ್ಪ ಲಾಭವಾಗುತ್ತದೆ. ತೈಲ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಸರ್ಕಾರಿ ಕೆಲಸಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು. ವೃತ್ತಿಯಲ್ಲಿ ಹಿತ ಶತ್ರುಗಳು ಜಾಸ್ತಿಯಾಗುವರು.
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
30 ಆಗಸ್ಟ್ 2025, 13:49 IST
ತುಲಾ
ಅತಿಯಾದ ಆತ್ಮ ಗೌರವ ಇರುತ್ತದೆ. ಆದಾಯವು ಸ್ವಲ್ಪ ಚೇತರಿಕೆಯನ್ನು ಕಾಣುತ್ತದೆ. ಕೃಷಿಯಲ್ಲಿ ಅಭಿವೃದ್ಧಿ ಇರುತ್ತದೆ. ಕೃಷಿ ಭೂಮಿಯನ್ನು ಕೊಳ್ಳಲು ಪ್ರಯತ್ನ ಪಡುವಿರಿ. ರಾಜಕೀಯ ನಾಯಕರುಗಳಿಗೆ ಈಗ ಜನ ಬೆಂಬಲ ದೊರೆಯುತ್ತದೆ. ಹಳೆಯ ಚರ್ಮರೋಗಗಳು ಮರುಕಳಿಸಬಹುದು. ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಸ್ವಲ್ಪ ಏಳಿಗೆ ಇರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತವೆ.
( ಚಿತ್ತಾ 3 4 ಸ್ವಾತಿ ವಿಶಾಖ 1 2 3)
30 ಆಗಸ್ಟ್ 2025, 13:49 IST
ವೃಶ್ಚಿಕ
ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವಿರಿ. ಆದಾಯದ ಒಳಹರಿವು ಸ್ವಲ್ಪ ಸರಿದಾರಿಗೆ ಬರುತ್ತದೆ. ಬಂಧುಗಳ ವಿಶ್ವಾಸವು ಕಡಿಮೆಯಾಗಬಹುದು. ರಾಜಕೀಯ ನಾಯಕರಗಳು ಬಣ್ಣ ಬಣ್ಣದ ಮಾತನಾಡಿ ಜನರನ್ನು ಸೆಳೆಯಬಹುದು. ಕೃಷಿಯಲ್ಲಿ ಆದಾಯ ಹೆಚ್ಚುತ್ತದೆ. ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ. ಧರ್ಮ ವಿದ್ಯೆಯಿಂದ ಲಾಭವಿರುತ್ತದೆ. ಹಿರಿಯರ ಜೊತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ.
( ವಿಶಾಖಾ 4 ಅನುರಾಧ ಜೇಷ್ಠ)
30 ಆಗಸ್ಟ್ 2025, 13:49 IST
ಧನು
ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರ ಜತೆ ಆಲೋಚನೆ ಮಾಡುವುದು ಒಳ್ಳೆಯದು. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಸ್ವಪ್ರಯತ್ನಗಳಿಂದ ಆದಾಯ ವೃದ್ಧಿ ಮಾಡಿಕೊಳ್ಳಬಹುದು. ವಿದೇಶದಲ್ಲಿ ನೆಲೆಸಿರುವವರು ಆಸ್ತಿ ಖರೀದಿಸಬಹುದು. ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಧಾರ್ಮಿಕ ಮುಖಂಡರುಗಳಿಗೆ ಗೌರವ ದೊರೆಯುತ್ತದೆ. ವೃತ್ತಿ ಧರ್ಮ ನಿಮ್ಮನ್ನು ಕಾಪಾಡುತ್ತದೆ.
( ಮೂಲ ಪೂರ್ವಾಷಾಢ ಉತ್ತರಾಷಾಢ 1 )
30 ಆಗಸ್ಟ್ 2025, 13:49 IST
ಮಕರ
ತಾಳ್ಮೆಯಿಂದ ಇರುವುದನ್ನು ಕಲಿಯುವಿರಿ. ಆದಾಯವು ಕಡಿಮೆಯಿರುತ್ತದೆ. ನಿಮ್ಮ ಶ್ರಮದಿಂದ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ಕೃಷಿಯಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ವ್ಯತ್ಯಾಸವಾಗಿದ್ದ ಆರೋಗ್ಯವು ಈಗ ಸುಧಾರಿಸುತ್ತದೆ. ಸಂಗಾತಿಯಿಂದ ಸಹಕಾರ ನಿರೀಕ್ಷೆ ಮಾಡಬಹುದು. ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ ಕಡಿಮೆಯಾಗುವ ಸಾಧ್ಯತೆಗಳಿವೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ ಹೆಚ್ಚುತ್ತದೆ.
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
30 ಆಗಸ್ಟ್ 2025, 13:49 IST
ಕುಂಭ
ಹಿರಿಯರ ಜ್ಞಾನವನ್ನು ಸಮಾಜ ಬಳಸಿಕೊಳ್ಳಲು ಮುಂದಾಗುತ್ತದೆ. ಆನ್‌ಲೈನ್ ಮೂಲಕ ಪಾಠ ಮಾಡುವವರ ಆದಾಯ ಹೆಚ್ಚುತ್ತದೆ. ನಿಮ್ಮ ಚಟುವಟಿಕೆಗಳಿಗೆ ಸಹೋದರರಿಂದ ಅಡ್ಡಿ ಬರಬಹುದು. ಭೂಮಾಪನ ಮಾಡುವವರ ಆದಾಯ ಹೆಚ್ಚುತ್ತದೆ. ವೃತ್ತಿ ಸಂಬಂಧಿತ ಪರೀಕ್ಷೆಗಳನ್ನು ತೆಗೆದುಕೊಂಡು ವೃತ್ತಿಯಲ್ಲಿ ಮೇಲ್ದರ್ಜೆಗೆ ಏರಬಹುದು. ಹರಿತವಾದ ವಸ್ತುಗಳನ್ನು ಬಳಸುವಾಗ ಎಚ್ಚರದಿಂದ ಬಳಸಿರಿ. ವೃತ್ತಿಯಲ್ಲಿ ಪ್ರಗತಿ ಇರುತ್ತದೆ.
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
30 ಆಗಸ್ಟ್ 2025, 13:49 IST
ಮೀನ
ನಿಮ್ಮ ದ್ವಂದ್ವ ನಿರ್ಧಾರಗಳು ನಿಮಗೆ ಮುಜುಗರವನ್ನು ತರಬಹುದು. ಕೃಷಿಯಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಹರಿತವಾದ ಮಾತಿನಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವಿರಿ. ಆದಾಯವು ಸಾಮಾನ್ಯವಾಗಿರುತ್ತದೆ. ಭೂಮಿ ವ್ಯವಹಾರ ಮಾಡುವವರಿಗೆ ಮತ್ತು ಭೂಮಿಯನ್ನು ಅಭಿವೃದ್ಧಿಪಡಿಸುವವರಿಗೆ ಲಾಭವಿರುತ್ತದೆ. ಸರ್ಕಾರಿ ಸಾಲಗಳು ಬಹಳ ಭಾರವಾಗಬಹುದು. ಧರ್ಮ ಕಾರ್ಯಗಳಿಂದ ಹಣ ಗಳಿಸಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ಮಂದಗತಿಯಲ್ಲಿರುತ್ತದೆ.
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
30 ಆಗಸ್ಟ್ 2025, 13:49 IST