ರಾಜ್ಕೋಟ್: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ 'ಬಿ' ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ ಪ್ರಥಮ ಇನಿಂಗ್ಸ್ನಲ್ಲಿ 372 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ.

ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ ಐದು ವಿಕೆಟ್ ನಷ್ಟಕ್ಕೆ 295 ರನ್ ಗಳಿಸಿತ್ತು. ಇಂದು (ಗುರುವಾರ) ಎರಡನೇ ದಿನದಾಟದಲ್ಲಿ ಮತ್ತೆ 77 ರನ್ ಪೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್ಗಳನ್ನು ಕಳೆದುಕೊಂಡಿತು.

ಕರ್ನಾಟಕದ ಪರ ನಾಲ್ವರು ಬ್ಯಾಟರ್ಗಳು ಅರ್ಧಶತಕಗಳ ಸಾಧನೆ ಮಾಡಿದ್ದಾರೆ.

ದೇವದತ್ತ ಪಡಿಕ್ಕಲ್ 96, ಕರುಣ್ ನಾಯರ್ 73, ಸ್ಮರಣ್ ರವಿಚಂದ್ರನ್ 77 ಹಾಗೂ ಶ್ರೇಯಸ್ ಗೋಪಾಲ್ 56 ರನ್ ಗಳಿಸಿದರು. ಶಿಖರ್ ಶೆಟ್ಟಿ ಸಹ 41 ರನ್ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಶಿಖರ್ ಹಾಗೂ ಅಭಿಲಾಷ್ ಶೆಟ್ಟಿ (2*) ಕೊನೆಯ ವಿಕೆಟ್ಗೆ 47 ರನ್ಗಳ ಜೊತೆಯಾಟ ಕಟ್ಟಿದರು.

ಸೌರಾಷ್ಟ್ರ ತಂಡದ ಪರ ಧರ್ಮೇಂದ್ರಸಿನ್ಹಾ ಜಡೇಜ 124 ರನ್ ತೆತ್ತು ಏಳು ವಿಕೆಟ್ ಗಳಿಸಿ ಮಿಂಚಿದ್ದಾರೆ.

ತಾಜಾ ವರದಿಗಳ ವೇಳೆಗೆ ಎರಡನೇ ದಿನದಾಟದಲ್ಲಿ ಸೌರಾಷ್ಟ್ರ ಏಳು ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ.
.Ranji Trophy: ದೇವದತ್ತ–ಕರುಣ್ ಶತಕದ ಜೊತೆಯಾಟ.ICC Test Ranking: ಕ್ರಿಕೆಟ್ ವೃತ್ತಿಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕುಲದೀಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.