ರಾಯಪುರ: ಭಾರತದ ಡ್ರೆಸಿಂಗ್ ರೂಮ್ನಲ್ಲಿ ವಾತಾವರಣ ಹಿತಕರವಾಗಿಲ್ಲ ಎಂಬ ಮಾತುಗಳು ಈಗ ಬಲವಾಗಿ ಕೇಳಿಬರುತ್ತಿವೆ. ಅವೇನೇ ಇರಲಿ, ವಿರೋಚಿತ ಆಟವಾಡುವ ದಕ್ಷಿಣ ಆಫ್ರಿಕಾ ತಂಡವನ್ನು ಬುಧವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಸೋಲಿಸಿ ಸರಣಿ ಗೆಲ್ಲಲು ತಂಡವು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಆಟವನ್ನು ಅವಲಂಬಿಸಿದೆ.

ಉತ್ತಮ ಫಾರ್ಮಿನಲ್ಲಿರುವ ಕೊಹ್ಲಿ ಅವರು ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 52ನೇ ಏಕದಿನ ಶತಕ ಬಾರಿಸಿದ್ದರು. ರೋಹಿತ್ ಅಧಿಕಾರಯುತ 57 ರನ್ ಬಾರಿಸಿ ಆ ಪಂದ್ಯದಲ್ಲಿ ಭಾರತ ಗೆಲ್ಲಲು ಮಹತ್ವದ ಕಾಣಿಕೆ ನೀಡಿದ್ದರು. ಹರಿಣಗಳ ಪಡೆ ಕೊನೆಯಲ್ಲಿ ತೋರಿದ ಹೋರಾಟವನ್ನು ಅಡಗಿಸಲು ಆತಿಥೇಯ ತಂಡದ ಬೌಲರ್ಗಳು ಸಾಹಸ ಪಡಬೇಕಾಯಿತು.

2027ರ ಏಕದಿನ ವಿಶ್ವಕಪ್ಗೆ ಎರಡು ವರ್ಷಗಳಿದ್ದು, ಕೊಹ್ಲಿ ಮತ್ತು ರೋಹಿತ್ ಅವರು ಪ್ರತಿಯೊಂದು ಪಂದ್ಯದಲ್ಲೂ ತಮ್ಮ ಫಿಟ್ನೆಸ್ ಮತ್ತು ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಈ ಸವಾಲಿನ ಜೊತೆಗೆ ಈ ಅನುಭವಿಗಳು, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಜೊತೆಗೆ ಹೆಚ್ಚುತ್ತಿದೆ ಎನ್ನಲಾಗಿರುವ ಅಸಮಾಧಾನವನ್ನೂ ನಿಭಾಯಿಸಬೇಕಾಗಿದೆ.

ಕ್ರೀಡಾಂಗಣದಾಚೆ ಈ ಬಗ್ಗೆಯೇ ಚರ್ಚೆಗಳು ಜೋರಾಗಿವೆ. ಈ ಬಿಸಿಯನ್ನು ತಣಿಸಲು ಬಿಸಿಸಿಐ ಯಾವುದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸುವ ನಿರೀಕ್ಷೆಯಿದೆ.

ಆಸ್ಟ್ರೇಲಿಯಾ ವಿರುದ್ಧ ಸರಣಿಯ ಕೊನೆಯ ಪಂದ್ಯ ಸೇರಿ ಸತತ ಎರಡು ಪಂದ್ಯಗಳಲ್ಲಿ ಕೊಹ್ಲಿ ಮತ್ತು ರೋಹಿತ್ ಅವರು ಆಡಿರುವ ರೀತಿ ನೋಡಿದರೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಆಡಲು ಸಾಧ್ಯವಿರುವ ದಿಗ್ಗಜರಿಬ್ಬರು ಎಲ್ಲ ಪ್ರಯತ್ನಗಳನ್ನು ನಡೆಸುವಂತೆ ಕಾಣುತ್ತಿದೆ.

ವಿಶ್ವಕಪ್ನಲ್ಲಿ ಈ ಪ್ರಮುಖ ಆಟಗಾರರಿಬ್ಬರು ಆಡುವ ಬಗ್ಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರಕರ್ ಮತ್ತು ಗೌತಮ್ ಗಂಭೀರ್ ಅವರು ಖಾತರಿ ನೀಡಿಲ್ಲ. ಬಹುಶಃ ಇದೇ ವಿಷಯ ಅವರ ಮತ್ತು ಗಂಭೀರ್ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವ ಸಂಭವವಿದೆ.

ಆದರೆ ಮೊದಲ ಪಂದ್ಯದಲ್ಲಿ ಗೆಲುವಿನ ಹೊರತಾಗಿಯೂ ಭಾರತಕ್ಕೆ ಯೋಚಿಸಬೇಕಾದ ವಿಷಯಗಳು ಸಾಕಷ್ಟು ಇವೆ. ತಂಡ ಸಂಯೋಜನೆ ಇವುಗಳಲ್ಲಿ ಪ್ರಮುಖ. ಲಿಸ್ಟ್ ಎ ಕ್ರಿಕೆಟ್ನಲ್ಲಿ ಯಶಸ್ಸು ಪಡೆದಿರುವ ಋತುರಾಜ ಗಾಯಕವಾಡ್ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಅವರು ಆ ಸ್ಥಾನಕ್ಕೆ ಹೊಂದಿಕೊಳ್ಳುವಂತೆ ಕಾಣಲಿಲ್ಲ.

ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಇಂಥ ಬದಲಾವಣೆಗಳು ಹೊಸದಲ್ಲ. ಟೆಸ್ಟ್ ಸರಣಿಯಲ್ಲಿ ಅವರಿಗೆ ಇದರ ಅನುಭವವಾಗಿದೆ. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಆಡಲಿಳಿದ ಅವರು ರನ್ವೇಗ ಹೆಚ್ಚಿಸಬೇಕಾದ ವೇಳೆ ನಿರ್ಗಮಿಸಿದರು. ಬೌಲಿಂಗ್ನಲ್ಲೂ ಅವರು ಮಾಡಿದ್ದು ಮೂರೇ ಓವರುಗಳನ್ನು.

ಹರ್ಷಿತ್ ರಾಣಾ ಅವರು ಎರಡನೇ ವಿಕೆಟ್ಗಳನ್ನು ಪಡೆದು ಉತ್ತಮ ಆರಂಭ ಪಡೆದರೂ, ನಂತರ ಅವರು ಸಾಕಷ್ಟು ರನ್ ತೆತ್ತರು. ಬೌಲಿಂಗ್ನಲ್ಲಿ ಅವರು ಹೆಚ್ಚಿನ ನಿಯಂತ್ರಣ ವಹಿಸಬೇಕಾಗಿದೆ.

ಕುಲದೀಪ್ ಯಾದವ್ ನಾಲ್ಕು ವಿಕೆಟ್ಗಳನ್ನು ಪಡೆದರೂ, 68 ರನ್ ತೆತ್ತು ಧಾರಾಳಿ ಎನಿಸಿದರು. ಆದರೆ ಅವರ ವೈವಿಧ್ಯಮಯ ಬೌಲಿಂಗ್ ನಿರ್ಣಾಯಕ ಪಾತ್ರ ವಹಿಸಿತು.

ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲಿ ಸೋತರೂ ಹೋರಾಟ ತೋರಿದ ರೀತಿ ಆ ತಂಡದಲ್ಲಿ ಸಾಕಷ್ಟು ಸ್ಪೂರ್ತಿ ತುಂಬಬಹುದು.

349 ರನ್ ಬೆನ್ನಟ್ಟುವಾಗ ಒಂದು ಹಂತದಲ್ಲಿ ಕೇವಲ 11 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡ ಅಂತಿಮವಾಗಿ ಸೋತಿದ್ದು 17 ರನ್ಗಳಿಂದಷ್ಟೇ. ಟೆಸ್ಟ್ ಪಂದ್ಯದ ರೀತಿ, ಏಕದಿನದಲ್ಲೂ ಮಾರ್ಕೊ ಯಾನ್ಸೆನ್ (70, 39ಎ) ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಕಾರ್ಬಿನ್ ಬಾಷ್ (67, 51ಎ) ಅವರೂ ಭಾರತಕ್ಕೆ ಆತಂಕ ಮೂಡಿಸಿದರು. ಮ್ಯಾಥ್ಯೂ ಬ್ರೀಟ್ಝ್ಕೆ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಆಕರ್ಷಕ 72 ರನ್ ಬಾರಿಸಿದರು.

ಮೊದಲ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಕಾಯಂ ನಾಯಕ ತೆಂಬಾ ಬವುಮಾ ಮತ್ತು ಸ್ಪಿನ್ನರ್ ಕೇಶವ ಮಹಾರಾಜ್ ಅವರು ಎರಡನೇ ಪಂದ್ಯಕ್ಕೆ ಹಿಂತಿರುಗುತ್ತಿರುವುದು ತಂಡಕ್ಕೆ ಬಲ ತುಂಬಬಹುದು.

ಪಂದ್ಯ ಆರಂಭ: ಮಧ್ಯಾಹ್ನ 1.30.

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್ಸ್ಟಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.