ಭಾನುವಾರ, 31 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಭಾನುವಾರ 31 ಆಗಸ್ಟ್ 2025; ಈಶ್ವರ ಆರಾಧನೆಯಿಂದ ಶುಭವಾಗುವುದು
Published 30 ಆಗಸ್ಟ್ 2025, 23:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ನೇರ, ದಿಟ್ಟ ಮಾತುಗಳು ಇತರರಿಗೆ ನೋವಾಗದಂತೆ ಇರಲಿ. ವಿದ್ಯಾರ್ಥಿಗಳ ಪಠ್ಯೇತರ ವಿಷಯದ ಮನೋಕಾಮನೆ ಪೂರ್ಣಗೊಳ್ಳುವುದು. ದಾಂಪತ್ಯ ಜೀವನ ಪರಸ್ಪರ ಸೋಲು ಗೆಲುವಿನಿಂದ ಉತ್ತಮವಾಗಿರುತ್ತದೆ.
ವೃಷಭ
ದುಂದುವೆಚ್ಚ ಕಡಿಮೆ ಮಾಡಿದರೆ ಆರ್ಥಿಕತೆಯಲ್ಲಿ ಒಂದು ಮೆಟ್ಟಿಲು ಮೇಲೇರಲು ಸಾಧ್ಯವಾಗುತ್ತದೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕೈ ಹಾಕುವವರಿಗೆ ಶುಭದಿನ. ವಿದೇಶಿ ವ್ಯವಹಾರದಿಂದ ನಿರೀಕ್ಷಿತ ಲಾಭ ಹೊಂದಬಹುದು.
ಮಿಥುನ
ನೆಮ್ಮದಿಯ ವಾತಾವರಣ ವೃದ್ಧಿಯಾಗಲಿದೆ. ಸಿಹಿ ತಿನಿಸು ವ್ಯಾಪಾರ, ಲೇವಾದೇವಿ ವ್ಯವಹಾರಗಳಲ್ಲಿ ತೃಪ್ತಿಕರ ಆದಾಯವಿದೆ. ಟೀಕಿಸುವವರು ಎದುರಾದರೆ ನಿಮ್ಮ ಕೆಲಸ ಯಶಸ್ಸಿನ ದಾರಿಯಲ್ಲಿದೆ ಎಂದು ತಿಳಿಯಿರಿ .
ಕರ್ಕಾಟಕ
ಭೋಜನದ ಸಮಯದಲ್ಲಿ ವ್ಯತ್ಯಯಗಳು ಸಂಭವಿಸುವುದಾಗಿ ಕಾಣುವುದು. ನಿಮ್ಮ ಯತ್ನಗಳು ಕೈಗೂಡಲು ತಾಳ್ಮೆ ವಹಿಸುವುದು ಸೂಕ್ತ. ಸಂಜೆಯ ಸಮಯದಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ ಸುದ್ದಿ ಕೇಳುವಿರಿ.
ಸಿಂಹ
ಆಹಾರ ಪದ್ಧತಿಯಲ್ಲಿ ನಿಯಮ ಮಾಡಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಅನಾರೊಗ್ಯದ ಸಂಭವವಿರುವುದರಿಂದ ಆರೋಗ್ಯದ ಮೇಲೆ ನಿಗವಿರಲಿ. ಈಶ್ವರ ಆರಾಧನೆಯಿಂದ ಶುಭವಾಗುವುದು.
ಕನ್ಯಾ
ಬಲಶಾಲಿಯಾದ ವಿರೋಧಿಗಳನ್ನು ಮಣಿಸಲು ಅವರ ಅನ್ಯಾಯಗಳನ್ನು ಬೆಳಕಿಗೆ ತರಲು ನೀವು ಮಾಡಿದ ಪ್ರಯತ್ನ ಉತ್ತಮ ಫಲವನ್ನು ನೀಡಲಿದೆ. ಬಂಗಾರ, ಬೆಳ್ಳಿ ಮತ್ತು ರತ್ನ ವ್ಯಾಪಾರಿಗಳಿಗೆ ಉತ್ತಮವಾದ ಲಾಭವಾಗುವುದು.
ತುಲಾ
ನಿಮ್ಮ ಮಗಳ ವಿಚಾರವಾಗಿ ನೀವು ಮಾಡಿದ ಪರೀಕ್ಷೆಯಲ್ಲಿ ಆಕೆ ಉತ್ತಮವಾದ ವರ್ತನೆ ತೋರಿ ನಿಮ್ಮನ್ನು ಸಮಾಧಾನಗೊಳಿಸುತ್ತಾಳೆ. ಯಾವುದೋ ಯೋಚನೆಯಲ್ಲಿ ಕೆಲಸ ಮಾಡಿ ಅಪಘಾತ ಮಾಡಿಕೊಳ್ಳಬೇಡಿ.
ವೃಶ್ಚಿಕ
ವಂಶಾಭಿವೃದ್ಧಿಯಾಗಿರುವ ವಿಚಾರದಿಂದ ಸಂತೋಷ ಮುಗಿಲು ಮುಟ್ಟುವುದು. ನಿಮ್ಮ ಮಾನಸಿಕ ಶಕ್ತಿಗಳು ಅತ್ಯಂತ ಬಲಯುತವಾಗಿ ಇಂದು ನಿಮ್ಮ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಇಳಿಸುತ್ತೀರಿ.
ಧನು
ಬಹುದಿನಗಳ ನಿರೀಕ್ಷೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿಮ್ಮ ಉತ್ತಮ ಪ್ರದರ್ಶನಕ್ಕೆ ಪ್ರಶಂಸೆಗಳ ಮಹಾಪೂರವೆ ಹರಿದು ಬರಲಿದೆ. ಆಕಸ್ಮಿಕವಾಗಿ ಬರುವಂತಹಾ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಿ.
ಮಕರ
ನಿಮ್ಮ ಸುತ್ತಮುತ್ತಲ ಜನರೊಂದಿಗಿನ ಬಾಂಧವ್ಯವು ಈ ದಿನ ಉತ್ತಮಗೊಳ್ಳುವುದು. ವೈದ್ಯರ ಬೇಜವಬ್ದಾರಿತನದಿಂದ ಪ್ರಾಣಾಪಾಯ ಸಂಭವಿಸಬಹುದು. ಕಥೆ-ಕಾದಂಬರಿ ಬಗ್ಗೆ ಆಸಕ್ತಿ ಮೂಡಲಿದೆ.
ಕುಂಭ
ಕುಟುಂಬದ ಮಾರ್ಗಸೂಚಕರ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳು ಪತ್ತೆಯಾಗುವುವು. ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹಗಳಾಗುವ ಸಾಧ್ಯತೆ ಇದೆ. ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿದೆ.
ಮೀನ
ವಿದೇಶಿ ವ್ಯವಹಾರಗಳನ್ನು ಹೊಂದಿರುವಂತಹವರು ಹೆಚ್ಚಿನ ಲಾಭವನ್ನು ಅಪೇಕ್ಷಿಸಬಹುದು. ದಾಂಪತ್ಯದಲ್ಲಿ ಉಂಟಾದ ಭಿನ್ನಾಭಿಪ್ರಾಯ ಸರಿಯಾದ ಮಾತುಕತೆಯಿಂದ ದೂರವಾಗಲಿದೆ.
ADVERTISEMENT
ADVERTISEMENT