ರಾಂಚಿ: ವಿರಾಟ್ ಕೊಹ್ಲಿಯಂತಹ ವಿಶ್ವ ದರ್ಜೆಯ ಬ್ಯಾಟರ್ಗಳು ಒಮ್ಮೆ ತಮ್ಮ ಆಟವನ್ನು ಆರಂಭಿಸಿದರೆ, ಅವರನ್ನು ತಡೆಯುವುದು ಅಸಾಧ್ಯ ಎಂದು ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್ ಮಾರ್ಕೊ ಜಾನ್ಸನ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಭಾರತ ತಂಡದ ಗೆಲುವಿಗೆ ಕಾರಣರಾದರು. ಈ ಶತಕದ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನ ಒಂದೇ ಮಾದರಿಯಲ್ಲಿ ಅತ್ಯಧಿಕ ಶತಕ ಸಿಡಿಸಿದ ಆಟಗಾರ ಎಂಬ ಸಾಧನೆ ಕೂಡ ಮಾಡಿದರು.

ವಿರಾಟ್ ಬ್ಯಾಟಿಂಗ್ ಕುರಿತು ಮಾತನಾಡಿದ ಮಾರ್ಕೊ ಜಾನ್ಸನ್, ‘ವಿಶ್ವ ದರ್ಜೆಯ ಆಟಗಾರರನ್ನು ಔಟ್ ಮಾಡುವುದು ತುಂಬಾ ಕಷ್ಟ. ನಾನು ವಿರಾಟ್ರಂತ ಆಟಗಾರರನ್ನು ಮೊದಲ 10ರಿಂದ 15 ಬಾಲ್ಗಳಲ್ಲೇ ಔಟ್ ಮಾಡಲು ಪ್ರಯತ್ನಿಸುತ್ತೇನೆ. ಅದಾದ ನಂತರ ಅವರು ಕ್ರೀಸ್ಗೆ ಹೊಂದಿಕೊಳ್ಳುತ್ತಾರೆ’ ಎಂದಿದ್ದಾರೆ.

ವಿರಾಟ್ರಂತಹ ಆಟಗಾರರು ಒಮ್ಮೆ ಬೌಲರ್ಗಳನ್ನು ಅರ್ಥ ಮಾಡಿಕೊಂಡು ಕ್ರೀಸ್ಗೆ ಕಚ್ಚಿ ಬ್ಯಾಟಿಂಗ್ ಆರಂಭಿಸಿದರೆ, ಅವರನ್ನು ಔಟ್ ಮಾಡುವುದು ತುಂಬಾ ಕಷ್ಟವಾಗುತ್ತದೆ ಎಂದರು.

‘ವಿರಾಟ್ ಆಡುವುದನ್ನು ನೋಡುವುದಕ್ಕೆ ತುಂಬಾ ಸಂತೋಷವಾಗುತ್ತದೆ. ಅವರನ್ನು ಟಿವಿಯಲ್ಲಿ ನೋಡುತ್ತಾ ಬೆಳೆದ ನನಗೆ ಇಂದು ಅವರಿಗೆ ಬೌಲಿಂಗ್ ಮಾಡುವುದಕ್ಕೆ ಸಂತೋಷವಾಗುತ್ತದೆ’ ಎಂದು ಅವರು ಹೇಳಿದರು.

ಸದ್ಯ ಮೊದಲ ಪಂದ್ಯ ಗೆದ್ದಿರುವ ಭಾರತ ತಂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1–0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
.Virat Kohli | ರಾಂಚಿಯಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ: ಚಿತ್ರಗಳಲ್ಲಿ ನೋಡಿ.ಬ್ಯಾಟರ್ಗಳ ಆಟ ಮಾನಸಿಕ ಸ್ಥಿರತೆ ಮೇಲೆ ಅವಲಂಬಿತವಾಗಿರುತ್ತದೆ: ವಿರಾಟ್ ಕೊಹ್ಲಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.