ಮಂಗಳೂರು: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ನಿಡುಗುಂಬದ ಅಕ್ಷಯ್ ಎ.ಆರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಚೊಕ್ಕಾಡಿ ನಿವಾಸಿ ಶ್ರೇಯಾ ಎಂ ಅವರು ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ನಗರದಲ್ಲಿ ನಡೆದ 10ಕೆ ಓಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಪಣಂಬೂರು ಬೀಚ್ ಮತ್ತು ಸಮೀಪದ ರಸ್ತೆಯಲ್ಲಿ ನಡೆದ ಓಟದಲ್ಲಿ ಅಕ್ಷಯ್ 37 ನಿಮಿಷ 28 ಸೆಕೆಂಡುಗಳಲ್ಲಿ ಮತ್ತು ಶ್ರೇಯಾ 43 ನಿಮಿಷ 4 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ನಗರದ ಶ್ರೀನಿವಾಸ ಕಾಲೇಜಿನ ಬಿಇ 4ನೇ ವರ್ಷದ ವಿದ್ಯಾರ್ಥಿ ಅಕ್ಷಯ್ ವಿಶ್ವವಿದ್ಯಾಲಯ ಮಟ್ಟದ ಓಟದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಮ್ಯಾರಥಾನ್, ಹಾಫ್ ಮ್ಯಾರಥಾನ್ ಸೇರಿದಂತೆ ದೂರ ಅಂತರದ ಓಟದಲ್ಲಿ ಈಚೆಗೆ ಮಿಂಚುತ್ತಿರುವ ಶ್ರೇಯಾ ಉಡುಪಿಯಲ್ಲಿ ಕಳೆದ ವಾರ ನಡೆದ 23 ವರ್ಷದೊಳಗಿನವರ ರಾಜ್ಯ ಅಥ್ಲೆಟಿಕ್ ಕೂಟದ 1500 ಮೀಟರ್ಸ್ ಓಟ ಮತ್ತು ಸ್ಟೀಪಲ್ ಚೇಸ್ನಲ್ಲಿ ಚಿನ್ನ ಗೆದ್ದಿದ್ದರು. ಅವರು ನಗರದ ಶ್ರೀದೇವಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿ.

5 ಕೆ ಓಟದ 17ರಿಂದ 30 ವರ್ಷದೊಳಗಿನವರ ಪುರುಷರ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ರಂಗಣ್ಣ ನಾಯ್ಕರ್ ಮೊದಲಿಗರಾದರು. ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ಪಿಯು ವಿದ್ಯಾರ್ಥಿಯಾಗಿರುವ ಅವರು 15 ನಿಮಿಷ 30 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಉಡುಪಿಯಲ್ಲಿ ನಡೆದ ರಾಜ್ಯ ಅಥ್ಲೆಟಿಕ್ಸ್ನ 20 ವರ್ಷದೊಳಗಿನವರ ವಿಭಾಗದಲ್ಲಿ ಅವರು 1500 ಮೀಟರ್ಸ್ ಓಟ ಮತ್ತು ಸ್ಟೀಪಲ್ ಚೇಸ್ನಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸುಹಾನಾ ಅಬ್ದುಲ್ ಖಾದರ್ 26 ನಿಮಿಷ 36 ಸೆಕೆಂಡುಗಳಲ್ಲಿ ಓಟ ಪೂರ್ತಿಗೊಳಿಸಿದರು. ಮಂಗಳೂರಿನ ನಂತೂರಿನವರಾದ ಅವರು ಗ್ರಾಫಿಕ್ ಡಿಸೈನ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.