ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿಜೇತ ಸೂರಜ್ ಚವಾಣ್ ಅವರು ಬಾಲ್ಯದ ಗೆಳೆತಿ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ADVERTISEMENT
ಪುಣೆ ಜಿಲ್ಲೆಯ ಬಾರಾಮತಿ ತಾಲೂಕಿನ ಮೋಡ್ವೆ ಗ್ರಾಮದ ಸೂರಜ್ ನವೆಂಬರ್ 29ರಂದು ಸಂಜನಾ ಗೋಫಾನೆ ಜೊತೆಗೆ ಮದುವೆಯಾಗಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ಸೂರಜ್ ಚವಾಣ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿವಾಹ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ.
ಚಿತ್ರ: ಇನ್‌ಸ್ಟಾಗ್ರಾಂ
ಟಿಕ್‌ಟಾಕ್ ತಾರೆಯಾಗಿದ್ದ ಸೂರಜ್ ಚವಾಣ್ ಅವರು ಬಿಗ್‌ಬಾಸ್ ಮರಾಠಿ ಸೀಸನ್ 5ರಲ್ಲಿ ಭಾಗವಹಿಸಿದ್ದರು. ತಮ್ಮ ಸರಳತೆಯಿಂದಲೇ ಪ್ರೇಕ್ಷಕರ ಹೃದಯ ಗೆದ್ದು ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿಜೇತರು ಕೂಡ ಆದರು.
ಚಿತ್ರ: ಇನ್‌ಸ್ಟಾಗ್ರಾಂ
ಫೋಟೊಗಳನ್ನು ಹಂಚಿಕೊಂಡ ಸೂರಜ್ ಅವರು, ‘ನಾನು ಬಯಸಿದ ಹುಡುಗಿಯೇ ಹೆಂಡತಿಯಾಗಿ ನನಗೆ ಸಿಕ್ಕಳು’ ಎಂದು ಬರೆದುಕೊಂಡಿದ್ದಾರೆ.