ರಾಯಪುರ: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್ಗಳಿಂದ ಸೋಲು ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಋತುರಾಜ್ ಗಾಯಕವಾಡ್ ಮತ್ತು ವಿರಾಟ್ ಕೊಹ್ಲಿಯವರ ಅದ್ಭುತ ಶತಕಗಳ ನೆರವಿನಿಂದ 358 ರನ್ ಕಲೆಹಾಕಿತ್ತು. ಆದರೆ, ಈ ದೊಡ್ಡ ಮೊತ್ತವನ್ನು ಕಾಪಾಡಿಕೊಳ್ಳುವಲ್ಲಿ ಭಾರತೀಯ ಬೌಲರ್ಗಳು ವಿಫಲರಾದರು.

ಇಷ್ಟು ದೊಡ್ಡ ಮೊತ್ತ ಇದ್ದರೂ ಅದನ್ನು ಕಾಪಾಡಿಕೊಳ್ಳಲು ವಿಫಲವಾಗಿರುವ ಭಾರತೀಯ ಬೌಲರ್ಗಳ ಕುರಿತು ಕ್ರಿಕೆಟ್ ಪಂಡಿತರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ತಂಡದ ನಾಯಕ ಕೆ. ಎಲ್. ರಾಹುಲ್ ಮಾತ್ರ ಸೋಲಿಗೆ ಬೌಲರ್ಗಳು ಮಾತ್ರ ಕಾರಣರಲ್ಲ ಎಂದು ತಿಳಿಸಿದ್ದಾರೆ.

ರಾಹುಲ್ ಪ್ರಕಾರ ಸೋಲಿಗೆ ಕಾರಣವೇನು?

ಪಂದ್ಯದ ಬಳಕ ಮಾತನಡಿದ ತಂಡದ ನಾಯಕನೂ ಆಗಿರುವ ಕನ್ನಡಿಗ ಕೆ.ಎಲ್. ರಾಹುಲ್, ‘ಈ ಸೋಲನ್ನು ಸಹಿಸಿಕೊಳ್ಳುವುದು ಕಠಿಣ. ನಾವು ನಿರಂತರವಾಗಿ ಟಾಸ್ ಸೋಲುತ್ತಿರುವುದು ನಮ್ಮ ದುರದೃಷ್ಟ. ಸತತ ಎರಡು ಟಾಸ್ಗ ಸೋತಿರುವುದಕ್ಕೆ, ನನ್ನನ್ನೇ ನಾನು ದೂಷಿಸಿಕೊಳ್ಳುತ್ತೇನೆ’ ಎಂದರು.

‘ಇಬ್ಬನಿ ಹೆಚ್ಚಾಗಿರುವುದರಿಂದ ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡುವುದು ಕಷ್ಟವಾಗುತ್ತೆ ಮತ್ತು ಬೌಲರ್ಗಳು ಒದ್ದೆಯಾದ ಚೆಂಡಿನಿಂದ ಬೌಲ್ ಮಾಡುವಾಗ ಎದುರಿಸುವ ತೊಂದರೆಗಳೇನು ಎಂಬುದನ್ನು ಈ ಪಂದ್ಯದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ಸೋಲಿಗೆ ಟಾಸ್ ಹಾಗೂ ಇಬ್ಬನಿ ಕಾರಣ ಎಂದು ತಿಳಿಸಿದರು.
.ನಾಯಕತ್ವ, ಪ್ರಬುದ್ಧ ಬ್ಯಾಟಿಂಗ್: ಆ ಒಂದು ಸಿಕ್ಸರ್ಗೆ ರಾಹುಲ್ ಅಭಿಮಾನಿಗಳು ಫಿದಾ.
ಬೌಲರ್ಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ, ಫೀಲ್ಡಿಂಗ್ನಲ್ಲಿ ನಾವು ಮಾಡಿದ ಕೆಲವು ತಪ್ಪುಗಳು ನಮ್ಮ ಸೋಲಿಗೆ ಕಾರಣವಾಯಿತು ಎಂದರು.
.IND vs SA: ಭಾರತ ಏಕದಿನ ತಂಡದ ನಾಯಕನಾಗಿ ಕೆ.ಎಲ್. ರಾಹುಲ್ ದಾಖಲೆ ಹೀಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.