ಬುಧವಾರ, 3 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಪ್ರತಿದಿನದ ಕೆಲಸಗಳನ್ನೇ ವಿಶೇಷವಾಗಿ ಮಾಡುವುದನ್ನು ಕಲಿಯಿರಿ..
Published 3 ಡಿಸೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆರ್ಥಿಕತೆ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ನೀವು ಈ ದಿನದಲ್ಲಿ ಅಪೇಕ್ಷಿಸಬಹುದು. ಶಿಸ್ತುಬದ್ಧ ಆಹಾರದಿಂದ ಆರೋಗ್ಯ ವೃದ್ಧಿಯಾಗುವುದು. ಮಕ್ಕಳಿಂದ ಸಂತೋಷ ಹೊಂದುವಿರಿ.
ವೃಷಭ
ಸಂಗೀತ ಕ್ಷೇತ್ರದಲ್ಲಿನ ನಿಮ್ಮ ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ನಿಮಗೆ ತಿಳಿಯುವುದು. ವ್ಯವಹಾರ ನಿಮಿತ್ತ ವಿದೇಶಯಾನವನ್ನು ಮಾಡುವ ಅವಕಾಶ ಸಿಗಲಿದೆ. ಯಾರ ಮೇಲೂ ಅಗತ್ಯಕ್ಕಿಂತ ಜಾಸ್ತಿ ಕೋಪಿಸಿಕೊಳ್ಳದಿರಿ.
ಮಿಥುನ
ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಉತ್ತಮ ಪ್ರಗತಿ ಹೊಂದುವಿರಿ. ನಂಬಿಕಸ್ಥ ಸ್ನೇಹಿತರೊಂದಿಗಷ್ಟೇ ಪ್ರಯಾಣದ ಯೋಜನೆಯನ್ನು ಹಂಚಿಕೊಳ್ಳಿ. ಇಂದಿನ ವೈಫಲ್ಯದ ಬಗ್ಗೆ ನಿರಾಸೆಬೇಡ.
ಕರ್ಕಾಟಕ
ನಿಮ್ಮ ಮನೆಯಲ್ಲಿನ ಅತ್ಯಂತ ಮುಖ್ಯವಾದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದಾಗಿ ತಪ್ಪಿಸಿಕೊಳ್ಳಬೇಕಾಗಬಹುದು. ಪ್ರತಿದಿನದ ಕೆಲಸಗಳನ್ನೇ ವಿಶೇಷವಾಗಿ ಮಾಡುವುದನ್ನು ಕಲಿಯಿರಿ.
ಸಿಂಹ
ಮಗಳ ಮದುವೆಯ ಜವಾಬ್ದಾರಿಯು ಹೆಂಡತಿಯ ತವರು ಮನೆಯವರ ಸಹಕಾರದಿಂದಾಗಿ ಸುಲಭವೆನಿಸುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿರುವವರು ಸಾಧನೆಯನ್ನು ಮಾಡುವಿರಿ.
ಕನ್ಯಾ
ಸಮಯೋಚಿತ ಕಾರ್ಯ ನಡೆಸುವಲ್ಲಿ ಆಲಸ್ಯ, ವಾದ-ವಿವಾದಗಳಲ್ಲಿ ಪರಕೀಯರೊಡನೆ ವೈಷಮ್ಯ, ಪರಿವಾರದಲ್ಲಿ ಅಭಿಪ್ರಾಯ ಭೇದಗಳಿಂದ ತಾಪತ್ರಯಗಳಿಗೆ ಗುರಿಯಾಗುವಿರಿ. ಬಟ್ಟೆ ವ್ಯಾಪಾರಿಗಳಿಗೆ ಲಾಭವಿರುವುದು.
ತುಲಾ
ನೂತನ ಗೃಹ ಖರೀದಿ ಇಲ್ಲವೇ ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ.
ವೃಶ್ಚಿಕ
ನಿಮ್ಮ ಸಹೋದ್ಯೋಗಿಗಳು ಕೆಲಸವನ್ನು ಮುಂದೆ ಹಾಕುತ್ತಿರುವುದು ನಿಮಗೆ ಗೊಂದಲವನ್ನು ಸೃಷ್ಟಿಸುತ್ತದೆ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಾಣಿಕೆಯಲ್ಲಿ ತೊಂದರೆಗಳಾಗಬಹುದು.
ಧನು
ವಿದ್ಯಾರ್ಥಿಗಳು ನಿತ್ಯದ ಕೆಲಸದಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ ಹೆಚ್ಚು ಹೊತ್ತು ಮನರಂಜನೆಗಳನ್ನೆಲ್ಲವನ್ನು ಬಿಟ್ಟು ಅಧ್ಯಯನದಲ್ಲಿ ತೊಡಗಬೇಕಾಗು ತ್ತದೆ. ಮಕ್ಕಳೊಂದಿಗೆ ವಿದೇಶ ಪ್ರಯಾಣ ಮಾಡುವ ಸಂದರ್ಭ ಬರಲಿದೆ.
ಮಕರ
ಪತ್ತೇದಾರಿ ಕೆಲಸದಲ್ಲಿರುವವರಿಗೆ ನಿಮ್ಮ ಗುರುತು ಹಿಡಿದು ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುವರು. ಈ ದಿನ ವ್ಯವಹರಿಸುವಾಗ ಪ್ರದರ್ಶಿಸಿದ ಬುದ್ಧಿವಂತಿಕೆಯು ಹೆಚ್ಚಿನ ಲಾಭಕ್ಕೆ ಕಾರಣವಾಗುವುದು.
ಕುಂಭ
ವೃತ್ತಿ ಜೀವನದಲ್ಲಿ ನಿಮಗೆ ಅನುಭವವೇ ಇರದಂತಹ ಸವಾಲನ್ನು ಇಂದು ಬುದ್ಧಿವಂತಿಕೆಯಿಂದ ಪರಿಹರಿಸುವಿರಿ. ವರ್ಗಾವಣೆಯ ಸಂದರ್ಭ ಬರಲಿದೆ. ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ದುಡುಕಬೇಡಿ.
ಮೀನ
ನಿಮ್ಮ ಚಟುವಟಿಕೆಗಳ ಒತ್ತಡದ ನಡುವೆಯು ಇತರರಿಗೆ ಸಹಾಯ ಮಾಡುವ ನಿಮ್ಮ ಪರೋಪಕಾರ ಮನೋಭಾವದಿಂದ ನಿಮಗೆ ಯಶಸ್ಸು ಲಭಿಸಲಿದೆ. ಆರ್ಥಿಕವಾಗಿ ಬೆಳೆಯುವ ಸದವಕಾಶವನ್ನು ಪಡೆಯಲಿದ್ದೀರಿ.
ADVERTISEMENT
ADVERTISEMENT