ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಕೋರಿಕೆ ಮೇರೆಗೆ ₹130 ಕೋಟಿ ಮೌಲ್ಯದ ಬಿಟ್‌ ಕಾಯಿನ್ ವಶಕ್ಕೆ ಪಡೆದ ED

Published 4 ಮೇ 2024, 13:54 IST
Last Updated 4 ಮೇ 2024, 13:54 IST
ಅಕ್ಷರ ಗಾತ್ರ

ನವದೆಹಲಿ: ಮಾದಕ ದ್ರವ್ಯ ಕಳ್ಳಸಾಗಣೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅಮೆರಿಕದ ಕೋರಿಕೆ ಮೇರೆಗೆ ಉತ್ತರಾಖಂಡ ಮೂಲದ ವ್ಯಕ್ತಿಯನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಂಧಿಸಿ, ಆತನಿಂದ ₹130 ಕೋಟಿ ಮೌಲ್ಯದ ಬಿಟ್‌ ಕಾಯಿಲ್ ವಶಕ್ಕೆ ಪಡೆದಿದ್ದಾರೆ.

ಪರ್ವಿಂದರ್ ಸಿಂಗ್ ಬಂಧಿತ ಆರೋಪಿ. ಉತ್ತರಾಖಂಡದ ನೈನಿತಾಲ್‌ ಜಿಲ್ಲೆಯ ಹಲದ್ವಾನಿ ಬಳಿ ಏ. 27ರಂದು ಈತನನ್ನು ವಶಕ್ಕೆ ಪಡೆಯಲಾಗಿದೆ.

’ಡಾರ್ಕ್ ವೆಬ್ ಮೂಲಕ ಐರೋಪ್ಯ ರಾಷ್ಟ್ರಗಳಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಹಣ ಸಂಪಾದಿಸಿದ್ದೆ ಎಂದಿರುವ ಈತ, ಶರಣಗಾಲು ಒಪ್ಪಿಕೊಂಡ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಮೆರಿಕದ ಕೋರಿಕೆ ಮೇರೆಗೆ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಪರ್ವಿಂದರ್ ಸಿಂಗ್ ಹಾಗೂ ಆತನ ಸೋದರ ಬನಮೀತ್ ಸಿಂಗ್‌ ಹಾಗೂ ಇನ್ನಿತರರು ಸೇರಿ ‘ಸಿಂಗ್ ಡಿಟಿಒ (ಡ್ರಗ್ ಟ್ರಾಫಿಕಿಂಗ್ ಆರ್ಗನೈಸೇಷನ್‌)’ ಎಂಬ ಏಜೆನ್ಸಿಯನ್ನು ನಡೆಸುತ್ತಿದ್ದರು. ತಮ್ಮ ಡಾರ್ಕ್ ವೆಬ್‌ಗೆ ಮಾರಾಟಗಾರರ ಅಂತರ್ಜಾಲ ತಾಣವನ್ನು ಬಳಸುತ್ತಿದ್ದರು. ಜತೆಗೆ ಬಹಳಷ್ಟು ಜಾಹೀರಾತುಗಳನ್ನು ಬಳಸಿಕೊಂಡು ತಮ್ಮದೇ ಜಾಲದ ಮೂಲಕ ಮಾದಕ ದ್ರವ್ಯವನ್ನು ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದ್ದರು’ ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ‌.

‘ಪರ್ವಿಂದರ್‌ನನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಆತನ ಬಳಿ ₹130.48 ಕೋಟಿ ಮೌಲ್ಯದ ಬಿಟ್‌ ಕಾಯಿನ್ ವಶಕ್ಕೆ ಪಡೆಯಲಾಗಿದೆ. ಆತನ ಸೋದರ ‘ಸಿಲ್ಕ್ ರೋಡ್‌ 1’, ‘ಆಲ್ಫಾ ಬೇ’ ಹಾಗೂ ‘ಹನ್ಸಾ’ ಎಂಬ ಡಾರ್ಕ್ ವೆಬ್ ನಡೆಸುತ್ತಿದ್ದ. 

ಇದೇ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಬಿಟ್ ಕಾಯಿನ್‌ಗಳನ್ನು ಅಮೆರಿಕದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಇ.ಡಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT