ದೋಹಾ (ಕತಾರ್): ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ ಹಾಗೂ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಎಲಿನಾ ರಿಬಾಕಿನಾ ಅವರು ಕತಾರ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಸೋತರು.

ಮರಿಯಾ ಸಕ್ಕಾರಿ (ಗ್ರೀಕ್) ಅವರು ಗುರುವಾರ ನಡೆದ ಹಣಾಹಣಿಯಲ್ಲಿ 2–6, 6–4, 7–5ರಿಂದ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಇಗಾ ಅವರಿಗೆ ಆಘಾತ ನೀಡಿದರು. ಪೋಲೆಂಡ್ನ 24 ವರ್ಷ ವಯಸ್ಸಿನ ಆಟಗಾರ್ತಿ ಇಗಾ ಅವರು ಇಲ್ಲಿ 2022, 2023 ಹಾಗೂ 2024ರಲ್ಲಿ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದರು. ಆದರೆ, ಈ ಬಾರಿ ಎಂಟರ ಘಟ್ಟದಲ್ಲಿಯೇ ನಿರ್ಗಮಿಸಬೇಕಾಯಿತು. ವಿಶ್ವ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದಲ್ಲಿರುವ ರಿಬಾಕಿನಾ (ಕಜಾಕಸ್ತಾನ) 5–7, 6–4, 4–6ರಿಂದ ಕೆನಡಾದ ವಿಕ್ಟೋರಿಯಾ ಎಂಬಾಕೊ ವಿರುದ್ಧ ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.