ಮಂಗಳವಾರ, ಜೂಲೈ 7, 2020
28 °C
ಮೆಕ್ಕಾಗೆ ತೆರಳಲು ಕೋರಿದ ನಲಪಾಡ್‌ ಅರ್ಜಿ ವಿಚಾರಣೆ

ಮಾಡಿದ ಪಾಪ ಎಲ್ಲಿಗೆ ಹೋದ್ರೂ ಕಳೆಯೊಲ್ಲ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉದ್ಯಮಿ ಲೋಕನಾಥ್‌ ಅವರ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಮೊಹಮದ್‌ ನಲಪಾಡ್‌ಗೆ ಮತ್ತೆ ಚಾಟಿ ಬೀಸಿರುವ ಹೈಕೋರ್ಟ್‌ ‘ಮಾಡಿರುವ ಪಾಪ ಎಲ್ಲಿಗೆ ಹೋದರೂ ಕಳೆಯೋದಿಲ್ಲ’ ಎಂದು ಕುಟುಕಿದೆ.

‘ನಾನು ಮೆಕ್ಕಾಗೆ ಹೋಗಬೇಕು. ಆದ್ದರಿಂದ, ನನ್ನ ಜಾಮೀನು ಷರತ್ತುಗಳನ್ನು ಸಡಿಲಿಸಬೇಕು’ ಎಂದು ಕೋರಿ ಮೊಹಮದ್‌ ನಲಪಾಡ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನಲಪಾಡ್‌ ಪರ ವಕೀಲರು, ‘ಅರ್ಜಿದಾರರು ಮೆಕ್ಕಾಗೆ ತೆರಳಬೇಕಿರುವ ಕಾರಣ 20 ದಿನಗಳ ಕಾಲ ಜಾಮೀನು ಷರತ್ತು ಸಡಿಲಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ನಟರಾಜನ್‌, ‘ಅರ್ಜಿದಾರರ ಮೇಲೆ ಏನೇನು ಆರೋಪಗಳಿವೆ’ ಎಂದು ಪ್ರಶ್ನಿಸಿದರಲ್ಲದೆ, ದಾಖಲೆಗಳನ್ನು ಪರಿಶೀಲಿಸಿ, ‘ಮಾಡಿದ ಪಾಪ ಎಲ್ಲಿಗೆ ಹೋದ್ರೂ ಕಳೆಯೋದಿಲ್ಲ’ ಎಂದರು.

‘ಈ ಅರ್ಜಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ವಿವರಣೆ ನೀಡಲಿ. ಆಮೇಲೆ ನೋಡೋಣ’ ಎಂದು ಉತ್ತರಿಸಿ ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು