ಕೋಲ್ಕತ್ತ: ‘ನ್ಯೂಜಿಲೆಂಡ್ ಯಾವುದೇ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಭಾರತದಲ್ಲಿ ಹಲವು ದಿನಗಳಿಂದ ಆಡಿ ಗಳಿಸಿರುವ ಅನುಭವವನ್ನೇ ಟಿ20ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ಬಳಸಿಕೊಳ್ಳಲಿದೆ’ ಎಂದು ಅನುಭವಿ ಆಟಗಾರ ಡೇರಿಲ್ ಮಿಚೆಲ್ ಹೇಳಿದ್ದಾರೆ.

ನ್ಯೂಜಿಲೆಂಡ್ ತಂಡವು ಬುಧವಾರ ಈಡನ್ಗಾರ್ಡನ್ನಲ್ಲಿ ನಡೆಯಲಿರುವ ಸೆಮಿಫೈನಲ್ನಲ್ಲಿ ಕಳೆದ ಬಾರಿಯ ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಯಾವ ರೀತಿ ಯೋಜನೆ ರೂಪಿಸಬೇಕೆಂಬ ಬಗ್ಗೆ ತಂಡವು ಸಂಪೂರ್ಣ ಸ್ಪಷ್ಟತೆ ಹೊಂದಿದೆ ಎಂದು ಮಿಚೆಲ್ ಹೇಳಿದರು.

ನ್ಯೂಜಿಲೆಂಡ್ ತಂಡವು ವರ್ಷದ ಆರಂಭದಲ್ಲೇ ಭಾರತ ಪ್ರವಾಸಕ್ಕೆ ಬಂದಿದ್ದು, ವಿವಿಧ ತಾಣಗಳಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿ ಆಡಿತ್ತು. ‘ಇಲ್ಲಿ ಆಡಿ ಗಳಿಸಿದ ಅನುಭವವನ್ನೇ ಬಳಸಿಕೊಳ್ಳುತ್ತೇವೆ’ ಎಂದು ಹೇಳಿದರು.

ವಿಶ್ವಕಪ್ನಲ್ಲಿ ಎರಡು ಪಂದ್ಯಗಳನ್ನು ಕಿವೀಸ್ ಪಡೆ ಶ್ರೀಲಂಕಾದಲ್ಲಿ ಆಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.