ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಆಹ್ವಾನ

7

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಆಹ್ವಾನ

Published:
Updated:

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಫಲಾನುಭವಿಯು ಮನೆ ನಿರ್ಮಿಸಿಕೊಳ್ಳಲು, ಮನೆ ವಿಸ್ತರಣೆಗೆ ₹ 1.50 ಲಕ್ಷ ಸಹಾಯಧನ ನೀಡಲಾಗುವುದು. ಫಲಾನುಭವಿ ಸ್ವಂತ ಜಾಗ, ಕಚ್ಚಾ ಮನೆ ಹೊಂದಿರಬೇಕು. ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಬಹುದು ಅಥವಾ ವಿಸ್ತರಣೆ ಮಾಡಿಕೊಳ್ಳಬಹುದು. ಮನೆ ವಿಸ್ತೀರ್ಣವನ್ನು ಕನಿಷ್ಠ 9 ಚ.ಮೀ.ನಿಂದ ಗರಿಷ್ಠ 21 ಚ.ಮೀ.ವರೆಗೆ ವಿಸ್ತರಿಸಬಹುದು. ಜಿಪಿಎಸ್ ಫೋಟೊ ಆಧರಿಸಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಅನುದಾನ ಪಾವತಿಸಲಾಗುವುದು.

ಆಸಕ್ತರು ಡಿ.15 ರೊಳಗಾಗಿ ಅರ್ಜಿ ಸಲ್ಲಿಸಬೇಕು. ‌ಮಾಹಿತಿಗಾಗಿ ಮಹಾನಗರ ಪಾಲಿಕೆ ಆಶ್ರಯ ವಿಭಾಗದ ವಿಷಯ ನಿರ್ವಾಹಕ ಸಂಜೀವ ನೇಮಗೌಡ ಮೊ: 8861426833 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !