ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು–ನಾಳೆ ಸಿರಿಕಲಾ ಯಕ್ಷೋತ್ಸವ

Last Updated 23 ಸೆಪ್ಟೆಂಬರ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರಿನ ’ಸಿರಿಕಲಾ ಮೇಳ’ ಸಂಘಟನೆಯವರು ಸೆ.23 ರಿಂದ 25ರವರೆಗೆ ನಗರದ ಮೂರು ಕಡೆಗಳಲ್ಲಿ ‘ಸಿರಿಕಲಾ ಯಕ್ಷೋತ್ಸವ‘ ಎಂಬ ತ್ರಿವಳಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದಾರೆ.

ಶುಕ್ರವಾರ (ಸೆ.23)ದಿಂದ ಕಾರ್ಯಕ್ರಮ ಆರಂಭವಾಗಿದೆ. ಉದಯಭಾನು ಕಲಾಸಂಘದಲ್ಲಿ ‘ಕೌರವ ಸಂಜಯ ತಾಳಮದ್ದಳೆ‘ಯೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಗಿದ್ದು, ‘ವಿಜಯ ಯಕ್ಷಗಾನ’ ಪ್ರದರ್ಶನವೂ ನಡೆದಿದೆ.

ಶನಿವಾರ ಸಂಜೆ 5.30ಕ್ಕೆ ಆರ್‌ಬಿಐ ಬಡಾವಣೆಯ ಬಿಬಿಎಂಪಿ ಕಚೇರಿ ಆವರಣದಲ್ಲಿ ‘ಲವಕುಶ’ ಯಕ್ಷಗಾನ ಪ್ರದರ್ಶನವಿದೆ.

ಭಾನುವಾರ 5.30ಕ್ಕೆ ವಿಜಯ ಬ್ಯಾಂಕ್‌ ಕಾಲೊನಿಯ ಮೂಲ್ಕಿ ಸುಂದರಾಂ ಶೆಟ್ಟಿ ಸಭಾಭವನದಲ್ಲಿ ‘ರಾಜಾ ರುದ್ರಕೋಪ’ ಯಕ್ಷಗಾನ ಪ್ರದರ್ಶನವಿದೆ.

ಯಕ್ಷಗಾನ ಪ್ರದರ್ಶನದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಸುಬ್ರಾಯ ಹೆಬ್ಬಾರ, ಗಜಾನನ ಭಂಡಾರಿ ಬೋಳ್ಗೆರೆ, ಕಾರ್ತೀಕ ಧಾರೇಶ್ವರ, ಶ್ರೀಧರ ಭಟ್ ಕಾಸರಕೋಡು, ಪ್ರಶಾಂತ ವರ್ಧನ, ವಿನಯ ಹೊಸ್ತೋಟ, ಭರತ್ ರಾಜ್ ಪರ್ಕಳ, ಪ್ರಶಾಂತ ಬಾಸೊಳ್ಳಿ, ಸಾಯಿಕುಮಾರ್, ನಾಗಶ್ರೀ ಗೀಜಗಾರ್, ಅರ್ಪಿತಾ ಹೆಗಡೆ, ಮಾನಸಾ ಉಪಾಧ್ಯ, ಸಿಂಧು ಹೆಬ್ಬಾರ ಮತ್ತಿತರರು ಕಲಾವಿದರಾಗಿ ಪಾಲ್ಗೊಳ್ಳುತ್ತಿದ್ದಾರೆ. ಸುರೇಶ ಹೆಗಡೆ ಕಡತೋಕ ಅವರ ಸಂಯೋಜನೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.

ಹೆಚ್ಚಿನ ಮಾಹಿತಿಗೆ ಸಂಪರ್ಕ- 9986590511

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT