ಸ್ನಾರ್ಕ್ಲಿಂಗ್ ಚಟುವಟಿಕೆ
ಅರ್ಧ ಗಂಟೆಯ ಡೈವಿಂಗ್ ಚಟುವಟಿಕೆಯೊಂದಿಗೆ ಇನ್ನುಳಿದ ಸಮಯದಲ್ಲಿ ಡೈವರ್‌ಗಳಿಗೆ ಸ್ನಾರ್ಕ್ಲಿಂಗ್ ಮಾಡಲು ಅವಕಾಶವಿದೆ. ಸ್ನಾರ್ಕ್ಲಿಂಗ್ ಎಂದರೆ ಇದೊಂದು ನೀರಿನ ಚಟುವಟಿಕೆಯಾಗಿದೆ. ಇದರಲ್ಲಿ ಡೈವರ್‌ಗಳು ಜೀವರಕ್ಷಕ ಜಾಕೆಟ್, ಮಾಸ್ಕ್ ಹಾಗೂ ಉಸಿರುಕೊಳವೆಯೊಂದಿಗೆ ನೀರಿನ ಮೇಲ್ಭಾಗದಲ್ಲಿ ಈಜುತ್ತಾ ನೀರಿನ ಅಡಿಯಲ್ಲಿರುವ ಹವಳದ ದಿಬ್ಬಗಳು ಮತ್ತು ಜಲಚರಗಳನ್ನು, ನೀರೊಳಗಿನ ಪರಿಸರವನ್ನು ಕಣ್ತುಂಬಿಕೊಳ್ಳಬಹುದು.