ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಬಲಾದ ಗ್ರಾಮದ ಭುವನೇಶ್ವರಿ ಕಾಂಬ್ಳೆ ಅವರು ಚಿಕ್ಕವರಿದ್ದಾಗ ನೆರೆಹೊರೆಯವರು ಪ್ರತೀ ಬಾರಿ ಹೊಟ್ಟೆಪಾಡಿಗಾಗಿ ಗಂಟುಮೂಟೆ ಕಟ್ಟಿಕೊಂಡು ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ಅಚ್ಚರಿ ಮತ್ತು ಆಸೆಗಣ್ಣಿನಿಂದ ನೋಡುತ್ತಿದ್ದರು.

ಸಾಮಾನ್ಯವಾಗಿ ಭುವನೇಶ್ವರಿ ಅವರ ನೆರೆಹೊರೆಯವರು ಪ್ರತಿ ವರ್ಷ ಆರು ತಿಂಗಳಿಗೊಮ್ಮೆ ಕಬ್ಬಿನಗದ್ದೆ, ಇಟ್ಟಿಗೆಗೂಡು ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕರಾಗಿ ದುಡಿಯುವ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದರು.

ಅವರಂತೆ ನಾವೂ ಕೆಲಸ ಹುಡುಕಿಕೊಂಡು ವಲಸೆ ಹೋಗೋಣ ಎಂದು ಭುವನೇಶ್ವರಿ ತಮ್ಮ ತಂದೆಗೆ ದುಂಬಾಲು ಬೀಳುತ್ತಿದ್ದರು. ಅಲ್ಲಿಂದ ಅಲ್ಪಸ್ವಲ್ಪ ಕಾಸು ಸಂಪಾದಿಸಿ ಹೊಸ ಬಟ್ಟೆ ತರಬಹುದು ಎಂಬುದು ಬಾಲಕಿ ಭುವನೇಶ್ವರಿ ಅವರ ಆಸೆಯಾಗಿತ್ತು.

ತಂದೆ ಕಲ್ಲಪ್ಪ ಹರಿಜನ (ಇತ್ತೀಚೆಗೆ ಮೃತಪಟ್ಟಿದ್ದಾರೆ) ಅವರಾಗಲೀ ಅಥವಾ ತಾಯಿ ಬಾಯಜಾ ಬಾಯಿ ಭುವನೇಶ್ವರಿ ಅವರ ಒತ್ತಾಯಕ್ಕೆ ಯಾವತ್ತೂ ಕಿವಿಗೊಡಲೇ ಇಲ್ಲ. ಆದರೆ ಒಂದು ಸಂದರ್ಭದಲ್ಲಿ ಭುವನೇಶ್ವರಿ ಅವರ ತಾಯಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ದ್ರಾಕ್ಷಿ ತೋಟಗಳಿಗೆ ವಲಸೆ ಕಾರ್ಮಿಕರಾಗಿ ಕೆಲಸಕ್ಕೆ ಹೋಗಿದ್ದರು. ಬಳಿಕ ಅದರ ಪರಿಣಾಮಗಳ ಬಗ್ಗೆ ಭುವನೇಶ್ವರಿ ಅವರಿಗೆ ಅರಿವಾಯಿತು.

ಇಂಥ ಆರಂಭಿಕ ಅನುಭವಗಳು ಅವರ ಭವಿಷ್ಯದ ಆಯ್ಕೆಗಳನ್ನು ರೂಪಿಸಿದವು. ಬಳಿಕ ಅವರು ತಾಲ್ಲೂಕಿನ 15 ಸ್ವಸಹಾಯ ಗುಂಪುಗಳ ಒಕ್ಕೂಟ ‘ಒಡಲಧ್ವನಿ ಮಹಿಳಾ ಒಕ್ಕೂಟ’ ಸ್ಥಾಪಿಸಿದರು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಮತ್ತು ಮುಂದಿನ ಪೀಳಿಗೆಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಅಗತ್ಯ ಬದಲಾವಣೆ ತರುವ ಉದ್ದೇಶದಿಂದ ಒಕ್ಕೂಟ ಸ್ಥಾಪಿಸಿದರು.

ಪ್ರಸ್ತುತ ಒಕ್ಕೂಟದ 400 ಮಹಿಳೆಯರು ತಮ್ಮ ಗ್ರಾಮದಲ್ಲಿಯೇ ಜೀವನೋಪಾಯ ಕಂಡುಕೊಂಡಿದ್ದಾರೆ. ಅವರ ಕುಟುಂಬಸ್ಥರು ಕೆಲಸ ಹುಡುಕಿಕೊಂಡು ವಲಸೆ ಹೋಗುವುದನ್ನು ನಿಲ್ಲಿಸಿದ್ದಾರೆ. ಅವರು ಪಶುಸಂಗೋಪನೆ ನಡೆಸುತ್ತಾರೆ, ಸಾವಯವ ಪದ್ಧತಿಯಲ್ಲಿ ಆಹಾರ ಧಾನ್ಯಗಳನ್ನು ಬೆಳೆಯುತ್ತಾರೆ, ಮನೆಯಲ್ಲಿಯೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

‘ವಲಸೆಯು ಮಹಿಳೆಯರ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಮಹಿಳೆಯರ ವಲಸೆಯನ್ನು ತಡೆದರೆ ಅವರ ಕುಟುಂಬವೇ ಅಭಿವೃದ್ಧಿಯಾಗುತ್ತದೆ’ ಎನ್ನುತ್ತಾರೆ ಭುವನೇಶ್ವರಿ.

‘ಏಳು ಜನರಿದ್ದ ನಮ್ಮ ಕುಟುಂಬಕ್ಕೆ ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತು. ಇದ್ದ ಸ್ವಲ್ಪ ಜಮೀನಿನಲ್ಲಿ ಋತುಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುತ್ತಿದ್ದೆವು. ತಂದೆ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ತಿಂಗಳಿಗೆ ₹2,000 ವೇತನ ಸಿಗುತ್ತಿತ್ತು’ ಎಂದು 33 ವರ್ಷದ ಭುವನೇಶ್ವರಿ ಬಾಲ್ಯದ ಜೀವನವನ್ನು ವಿವರಿಸುತ್ತಾರೆ.

ಕುಟುಂಬದ ಆರ್ಥಿಕ ಬಿಕ್ಕಟ್ಟು ಓದಿನ ಮೇಲೆ ಅವರಿಗಿದ್ದ ಆಸಕ್ತಿಯನ್ನು ಕುಗ್ಗಿಸಲಿಲ್ಲ. 2013–14 ರಲ್ಲಿ ₹2,500 ಶುಲ್ಕ ಪಾವತಿಸಲು ಸಾಧ್ಯವಾಗದೆ ಅರ್ಥಶಾಸ್ತ್ರ ಓದುವ ಕನಸನ್ನು ತ್ಯಾಗ ಮಾಡಿದರು. ನಂತರ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿದ್ದ ಎಂ.ಬಿ.ದಿಲ್ಷಾದ್ ಅವರು ಭುವನೇಶ್ವರಿ ಅವರ ಓದಿನ ಖರ್ಚನ್ನು ನೋಡಿಕೊಂಡರು.

ಅವರು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಗಳಿಸಿದರು. ನಂತರದ ಅವರ ಸಂಶೋಧನಾ ಪ್ರಬಂಧವು ವೈಯಕ್ತಿಕ ಜೀವನದ ಹೋರಾಟಗಳಿಂದ ಪ್ರೇರಿತವಾಗಿತ್ತು.

ಸಂಶೋಧನೆಯ ಭಾಗವಾಗಿ ಅವರು, ನಮ್ಮದೇ ರಾಜ್ಯದ ವಿಜಯಪುರ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗಳ ಗಡಿಭಾಗಗಳಿಂದ ಕೆಲಸ ಅರಸಿ ವಲಸೆ ಹೋಗುತ್ತಿದ್ದ ಸುಮಾರು ಒಂದು ಸಾವಿರ ಮಹಿಳೆಯರೊಂದಿಗೆ ಸಂವಾದ ನಡೆಸಿದರು.

‘ಅಲ್ಪಾವಧಿಯ ಕೆಲಸಕ್ಕಾಗಿ ವಲಸೆ ಹೋಗುವ ಮಹಿಳೆಯರ ಸಂಕಷ್ಟವನ್ನು ಹೇಳತೀರದು. ಅಷ್ಟಾಗಿಯೂ ಅವರ ವಾರ್ಷಿಕ ಆದಾಯ ₹60,000 ದಿಂದ ₹1 ಲಕ್ಷ ಮಾತ್ರ. ಭುವನೇಶ್ವರಿ ಅವರು ಇಂಥ ಅಂಶಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ’ ಎನ್ನುತ್ತಾರೆ ಭುವನೇಶ್ವರಿ ಅವರ ಸಂಶೋಧನಾ ಗೈಡ್ ಪ್ರೊ.ಎಚ್.ಎಂ.ಹೇಮಲತಾ. ಅವರು ಭುವನೇಶ್ವರಿ ಅವರ ಸಂಶೋಧನೆಗೆ ಆರ್ಥಿಕ ನೆರವನ್ನೂ ನೀಡಿದ್ದರು.

2021ರಲ್ಲಿ ಪಿಎಚ್.ಡಿ ಪೂರ್ಣಗೊಳಿಸಿದ ನಂತರ ಅವರು ಸಂಶೋಧನೆ ಸಂದರ್ಭದಲ್ಲಿ ಭೇಟಿ ಮಾಡಿದ ಮಹಿಳೆಯರಿಗೆ ಮಾರ್ಗದರ್ಶನ ನೀಡಿದರು. ತಮ್ಮ ಕೌಶಲ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜೀವನೋಪಾಯ ಕಂಡುಕೊಳ್ಳುವ ಬಗೆಯನ್ನು ತಿಳಿಸಿದರು.

‘ವಿಜಯಪುರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿದರು. ವೈಜ್ಞಾನಿಕ ಮಾಹಿತಿ ಲಭ್ಯವಾಗುವಂತೆ ಮಾಡಿದರು ಮತ್ತು ಉತ್ತಮ ಸಲಹೆಯನ್ನು ನೀಡಿದರು’ ಎಂದು ವಿಜಯಪುರ ಜಿಲ್ಲೆಯ ಸಾವಳಸಂಗದ ರೈತ ಮಹಿಳೆ ರಾಜೇಶ್ವರಿ ಹೊಸಂದ್ ನೆನಪಿಸಿಕೊಳ್ಳುತ್ತಾರೆ.

ಕೆಲವು ಮಹಿಳೆಯರು ಸುಧಾರಿತ ಕೃಷಿ ತಂತ್ರಜ್ಞಾನವನ್ನು ಕಲಿತು ಉತ್ತಮ ಇಳುವರಿ ತೆಗೆದರು. ಇನ್ನೂ ಕೆಲವರು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯನ್ನು ಆರಂಭಿಸಿದರು.

ಉದಾಹರಣೆಗೆ ಮಹಾದೇವಿ ಶಿವಸೂರ ಅವರು, ನೆಲಗಡಲೆಯನ್ನು ಬೆಳೆದು, ಶೇಂಗಾ ಹೋಳಿಗೆ ತಯಾರಿಸಿ ‘ರಾಗಿ ಕಣ’ದಲ್ಲಿ ಮಾರಾಟ ಮಾಡುತ್ತಿದ್ದಾರೆ. ‘ರಾಗಿ ಕಣ’ ಎಂಬುದು ಬೆಂಗಳೂರಿನಲ್ಲಿರುವ ರೈತರ ಮಾರುಕಟ್ಟೆ.

ಬದಲಾವಣೆಗಾಗಿ ಧ್ವನಿ ಎತ್ತುವಂತೆ ಒಕ್ಕೂಟದ ಮಹಿಳೆಯನ್ನು ಭುವನೇಶ್ವರಿ ಅವರು ಪ್ರೇರೇಪಿಸಿದರು. ‘2022–23ರವರೆಗೂ ನಾವು ಗ್ರಾಮ ಪಂಚಾಯಿತಿ ಒಳಗೆ ಕಾಲಿಟ್ಟಿರಲಿಲ್ಲ. ಭುವನೇಶ್ವರಿ ಅವರ ಪ್ರೋತ್ಸಾಹದ ಬಳಿಕ ನಮಗೆ ಕುಡಿಯುವ ನೀರು, ರಸ್ತೆ, ಮನೆ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಆಗ್ರಹಿಸಿದೆವು. ಸತತ ಆಗ್ರಹದ ಬಳಿಕ ಕಳೆದ ವರ್ಷ ಉದ್ಯೋಗ ಖಾತರಿ ಯೋಜನೆಯ ಭಾಗವಾಗಿ ಕೆರೆಯ ಪುನಶ್ಚೇತನ ಕೆಲಸವನ್ನು ಮಹಿಳೆಯರಿಗೆ ನೀಡಲಾಯಿತು’ ಎನ್ನುತ್ತಾರೆ ಬಬಲಾದ ನಿವಾಸಿ ಭಾಗ್ಯಶ್ರಿ ಪೂಜಾರಿ.

ವಲಸೆಯನ್ನು ತಗ್ಗಿಸುವ ಮತ್ತು ಗ್ರಾಮೀಣ ಶಿಕ್ಷಣವನ್ನು ಬೆಂಬಲಿಸುವ ಭಾಗವಾಗಿ ಭುವನೇಶ್ವರಿ ಅವರು 2020ರಲ್ಲಿ ಕಲಿಕಾ ಕೇಂದ್ರವನ್ನು ಆರಂಭಿಸಿದ್ದಾರೆ. ಇಲ್ಲಿ ಸೌಲಭ್ಯ ವಂಚಿತ ಮಕ್ಕಳಿಗೆ ಅದರಲ್ಲೂ ವಲಸೆ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ನಾಲ್ಕು ಗ್ರಾಮಗಳಲ್ಲಿರುವ ಈ ಕೇಂದ್ರಗಳಲ್ಲಿ ಪದವಿ ಪಡೆದ ಗ್ರಾಮದ ಹೆಣ್ಣುಮಕ್ಕಳು ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ.

‘ವಲಸೆ ಕುಟುಂಬಗಳ ಬಹುಸಂಖ್ಯಾತ ಮಕ್ಕಳಿಗೆ ಪಠ್ಯಕ್ರಮವನ್ನು ಅನುಸರಿಸುವುದು ಕಷ್ಟವಾಗುತ್ತದೆ. ಈ ಅಂತರವನ್ನು ಕಲಿಕಾ ಕೇಂದ್ರಗಳು ತುಂಬುತ್ತಿವೆ. ಸದ್ಯ ಈ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಬಬಲಾದ ಸರ್ಕಾರಿ ಪ್ರೌಢ ಶಾಲೆಯ ಸಹಾಯಕ ಶಿಕ್ಷಕ ಬಸವರಾಜ್ ಹತ್ತಳ್ಳಿ ಹೇಳಿದರು.

ಈ ಮೊದಲು ಮಹಿಳೆಯರು ಸಲೀಸಾಗಿ ವಲಸೆಗೆ ಗಂಟುಮೂಟೆ ಕಟ್ಟುತ್ತಿದ್ದರು. ಆದರೆ, ಭುವನೇಶ್ವರಿ ಅವರಿಂದಾಗಿ ಊರಿನಲ್ಲೇ ಉಳಿದು ಬದುಕಿಗೆ ಬೇಕಾದಷ್ಟನ್ನು ಗಳಿಸುವ, ಉಳಿಸುವ ಮನಸ್ಸು ಮಾಡುತ್ತಿದ್ದಾರೆ.

ಅನುವಾದ: ಕೀರ್ತಿಕುಮಾರಿ ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.