ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ: ತಪೋತರು

Published 26 ನವೆಂಬರ್ 2023, 4:38 IST
Last Updated 26 ನವೆಂಬರ್ 2023, 4:38 IST
ಅಕ್ಷರ ಗಾತ್ರ

ಕುವೆಂಪು ಅವರು ಅನಂತಶಕ್ತನ ಭಕ್ತಿಯಲ್ಲಿ ಮಿಂದು ಶುದ್ಧ ಭಾವದ ಜೀವನ ನಡೆಯಲ್ಲಿ ಧ್ಯಾನಶೀಲವಾಗುವುದರ ಸಂಕೇತವಾಗಿ ‘ತಪೋತರು’ ಪದ ಸೃಷ್ಟಿಸಿದ್ದಾರೆ. ತಪೋಧರನು ಭಗವಂತನ ಚರಣತಲದಲ್ಲಿ ಅಚಂಚಲ ಭಕ್ತಿ ಬಲದಿಂದ ‘ತಪೋತರು’ವಿನಂತಿರಬೇಕು. ಬಹಿರ್ಭಾಗದಲ್ಲಿ ಎಲ್ಲರಿಗೆ ನೆರಳು ಆಸರೆಯಾಗಿ, ಹಸಿರಾಗಿ ತಂಪು, ಮಧುರ ಫಲ ನೀಡುತ್ತ ಆನಂದದಿಂದಿರಬೇಕು. ಅಂತರ್ಭಾಗದಲ್ಲಿ ಸುನಿಶ್ಚಯ, ಸುಚಂಚಲ ಬೇರಿನಿಂದ ಜಲದ ಸ್ಪರ್ಶಕ್ಕೆ ಒಳಗಾಗಿ ಶಾಂತವಾಗಿ ಜೀವ ದ್ರವ್ಯ ಹೀರಿಕೊಳ್ಳುತ್ತ ಇಡೀ ಮರಕ್ಕೆ ಪೋಷಕವಾಗಬೇಕು. ಆಗ ಆ ‘ತಪೋತರು’ವಿನಿಂದ ಶ್ರೇಷ್ಠ ಫಲ ಮೂಡುವುದು.

‘ಎಲ್ಲ ಸುಚಂಚಲ! ಒಂದೆ ಅಚಂಚಲ;

ನಿನ್ನ ಚರಣತಲ ಭಕ್ತಿಬಲ!

ಎಲ್ಲ ಬಲಗಳಿಗೆ ತಾ ಮೂಲದ ಬಲ,

ಸಕಲ ತಪೋತರು ಪರಮಫಲ !

(ಅನಿಶ್ಚಯ-ಸುನಿಶ್ಚಯ-ಅಗ್ನಿಹಂಸ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT