ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

National Doctors Day: ಡಾ.ಬಿ.ಸಿ. ರಾಯ್ ಹೆಸರಿನಲ್ಲಿ ರಾಷ್ಟ್ರೀಯ ವೈದ್ಯರ ದಿನ

Published 1 ಜುಲೈ 2023, 7:19 IST
Last Updated 1 ಜುಲೈ 2023, 7:19 IST
ಅಕ್ಷರ ಗಾತ್ರ

ರೋಗಿಗಳ ಜೀವ ಉಳಿಸುವುದಷ್ಟೇ ಅಲ್ಲ ಬದುಕಿನ ಭರವಸೆಯೂ ಆಗಿರುವ ವೈದ್ಯರನ್ನು ಗೌರವಿಸಲು 'ವೈದ್ಯರ ದಿನಾಚರಣೆ'ಯು ಅತ್ಯುತ್ತಮ ಮಾರ್ಗವಾಗಬಲ್ಲದು.

ಪ್ರಪಂಚದ ವಿವಿಧ ದೇಶಗಳಲ್ಲಿ ಬೇರೆಬೇರೆ ದಿನಗಳಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲಿ ಮಾರ್ಚ್‌ 30ರಂದು, ಕೆನಡಾದಲ್ಲಿ ಮೇ 1ರಂದು, ಬ್ರೆಜಿಲ್‌ನಲ್ಲಿ ಅಕ್ಟೋಬರ್‌ 18ರಂದು, ಚೀನಾದಲ್ಲಿ ಆಗಸ್ಟ್‌ 19ರಂದು ಆಚರಿಸಲಾಗುತ್ತದೆ.

ಭಾರತದಲ್ಲಿ ಖ್ಯಾತ ವೈದ್ಯ ಡಾ. ಬಿಧನ್‌ ಚಂದ್ರ ರಾಯ್‌ (ಡಾ.ಬಿ.ಸಿ. ರಾಯ್) ಅವರ ನೆನಪಿಗಾಗಿ ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ.

ಡಾ.ಬಿ.ಸಿ. ರಾಯ್ ಯಾರು?
ವೈದ್ಯರಾಗಿದ್ದುಕೊಂಡು ಡಾ.ಬಿ.ಸಿ. ರಾಯ್ ಅವರು ಮಾಡಿದ ಜನಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಜನ್ಮದಿನವಾದ ಜುಲೈ 1 ಅನ್ನು ಪ್ರತಿ ವರ್ಷ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ 1991ರಲ್ಲಿ ಮೊದಲ ಬಾರಿಗೆ ವೈದ್ಯರ ದಿನ ಆಚರಿಸಲಾಯಿತು. 

ರಾಯ್ ಅವರು ವೈದ್ಯರಷ್ಟೇ ಅಲ್ಲ. ಶಿಕ್ಷಣ ತಜ್ಞ, ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದವರು. 1948ರಿಂದ 1962ರ ವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಆತ್ಮೀಯರು. 1942ರಲ್ಲಿ ಕ್ವಿಟ್‌ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳವಳಿ ಸಂದರ್ಭದಲ್ಲಿ ಗಾಂಧೀಜಿ ಅವರಿಗೆ ಚಿಕಿತ್ಸೆ ನೀಡಿದ್ದೂ ರಾಯ್‌ ಅವರೇ.

ರಾಯ್‌ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ಪುರಸ್ಕಾರವನ್ನು 1961ರ ಫೆಬ್ರುವರಿ 4ರಂದು ನೀಡಲಾಗಿದೆ.

1982ರ ಜುಲೈ 1ರಂದು ಜನಿಸಿದ್ದ ರಾಯ್‌ ಅವರು ಕಾಕತಾಳೀಯ ಎಂಬಂತೆ 1962ರ ಅದೇ ದಿನಾಂಕದಂದು (ಜುಲೈ 1ರಂದು) ತಮ್ಮ 80ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ಜಾಗತಿಕ ಪಿಡುಗು ಕೊರೊನಾವೈರಸ್‌ನಂತಹ ಸಂದಿಗ್ಧ ಸನ್ನಿವೇಶದಲ್ಲಿ ಆರೋಗ್ಯ ಸುಧಾರಣೆ ಮತ್ತು ಸೋಂಕು ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸಿದಂತಹ ವೈದ್ಯರನ್ನು ನೆನೆಯುವ ಉದ್ದೇಶದಿಂದ ಈ ವರ್ಷದ ಧ್ಯೇಯವನ್ನು ರೂಪಿಸಲಾಗಿದೆ. 'ಸಂಕಷ್ಟದ ಸಮಯದಲ್ಲಿ ಪುಟಿದೇಳುವ ಮತ್ತು ಉಪಶಮನಕಾರಿಯಾಗಿ ಕಾರ್ಯನಿರ್ವಹಿಸಿದ ಕೈಗಳನ್ನು ಸ್ಮರಿಸುವುದು' ಈ ವರ್ಷದ ವೈದ್ಯರ ದಿನಾಚರಣೆಯ ಧ್ಯೇಯವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT