ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗಟು ಬಿಡಿಸು ಪುಟಾಣಿ...

Last Updated 19 ಸೆಪ್ಟೆಂಬರ್ 2015, 19:33 IST
ಅಕ್ಷರ ಗಾತ್ರ

ಅಕ್ಕ–ತಂಗಿ ಇಬ್ಬರು
ಒಬ್ಬರು ಬಿಟ್ಟು ಒಬ್ಬರು ಇರೊಲ್ಲ
ಒಬ್ಬರ ಮನೆಗೆ ಒಬ್ಬರು ಹೋಗೊಲ್ಲ
ಜಗವು ಕಾಣಲು ಇವರೆ ಮುಖ್ಯ
ಹೇಳಲು ಬಹುಮಾನದ ಸಖ್ಯ. -(ಉತ್ತರ: ಕಣ್ಣು)

ನನಗಿರುವುದು ಹಳದಿ ಬಣ್ಣ
ಅಡಿಗೆಗೂ ನನ್ನ ಬಳಸುವರಲ್ಲ
ರಕ್ತ–ಶುದ್ಧಿಗೂ ನಾ ಕಾರಣ
ಗಾಯಕೂ ನನ್ನ ಲೇಪಿಸುವರಲ್ಲ
ಈಗ ನನ್ನ ಹೆಸರು ಹೇಳಬೇಕಲ್ಲ -(ಉತ್ತರ: ಅರಿಶಿಣ)

ಅಕ್ಕ–ತಂಗಿ ಕೂಡಿಯೇ ಇರ್ತಾರೆ
ಅಕ್ಕನ ಮನೆಗೆ ತಂಗಿ ಬರತಾಳೆ
ತಂಗಿ ಮನೆಗೆ ಅಕ್ಕ ಹೋಗಲ್ಲ
ಇವರಿಬ್ಬರೂ ಅಳತೆಗೆ ಸೇರುವರಲ್ಲ
ಯಾರೆಂದು ಹೇಳಿದರೆ ನೀವು ಜಾಣರು. -(ಉತ್ತರ: ಸೇರು–ಪಾವು)

ನನ್ನ ಎದುರು ನಿಲ್ಲಲು
ನಿನ್ನನ್ನೇ ನೀ ಕಾಣುತ್ತೀ
ಎಲ್ಲರೂ ನನ್ನ ಬಳಿ ಬರುವವರೆ
ತಮ್ಮನ್ನು ತಾವು ನೋಡುವವರೆ
ನಾನು ಯಾರೆಂದು ತಾವು ಹೇಳಬಲ್ಲಿರ?  -(ಉತ್ತರ: ಕನ್ನಡಿ)

ಉದ್ದಕೂ ನಾನು ಬಿದ್ದಿರುವೆ
ಊರಿಂದೂರಿಗೆ ಮುಟ್ಟಿಸುವೆ
ನನ್ನ ಮೇಲೆ ಓಡಾಡುವಿರಿ
ತಗ್ಗು–ದಿನ್ನೆ ಆದರೆ ಕಿರಿಕಿರಿ
ಒಗಟ–ಬಿಡಿಸಲು ನೀ ಜಾಣಮರಿ  -(ಉತ್ತರ: ರಸ್ತೆ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT